fbpx
ಕನ್ನಡ

ಕರ್ಣಾಟಬಲ : ನೇಪಾಳದವರೆಗೂ ವಿಸ್ತರಿಸಿದ್ದ ಕನ್ನಡ ಚಾಲುಕ್ಯ ಸಾಮ್ರಾಜ್ಯ

ಕನ್ನಡದ ಕಿಡಿಗಳೆ ಇಲ್ಲಿ ನಾನು ನಿಮಗೆ ಬೆಳಕು ಚೆಲ್ಲಲಿರುವ ವಿಷಯ ಅಂತಿಂತಹುದಲ್ಲ…ಇಡೀ ಕನ್ನಡ ಕುಲ ಕೋಟಿಯೇ ರೋಮಂಚನಗೊಳ್ಳುವಂತಹ ಮಾಹಿತಿ ಇದು…ಇಷ್ಟು ದಿನ ನಾವು ನಮ್ಮ ನಾಡವರ ಪರಾಕ್ರಮತೆಯ ಬಗ್ಗೆ, ನಮ್ಮ ನಾಡಿನ ವಿಸ್ತಾರದ ಬಗ್ಗೆ ಕತ್ತಲೆಯಲ್ಲಿದ್ದೆವು ಎಂದೇ ತೋರುತ್ತಿದೆ..ಅನೇಕ ಸಂಶೋಧಕರ ಸಂಶೋಧನೆಯಿಂದ ಸಂಗ್ರಹಿಸಿ ಇಲ್ಲಿ ನೀಡಿರುವ ಮಾಹಿತಿ ಈ ಕತ್ತಲೆಗೆ ಒಂದು ಬೆಳಕು…ಓದಿ ರೋಮಾಂಚಿತವಾಗಿ !!

೧) ಚಾಲುಕ್ಯರು ತಮ್ಮ ಪರಾಕ್ರಮದ ಪರಮಾವಧಿಯಲ್ಲಿ ಇದ್ದಾಗ, ನಮ್ಮ ನಾಡು ಮಹಾರಾಷ್ಟ್ರದ ಉತ್ತರ ಗಡಿ ದಾಟಿ ನರ್ಮದಾ ನದಿಯ ಆಚೆವರೆಗೂ ವಿಸ್ತಾರ ಹೊಂದಿತ್ತು .

೨) ಚಾಲುಕ್ಯ ರಾಜರು ತಮ್ಮ ರಾಜ್ಯವನ್ನು ಉತ್ತರ ಭಾರತದ ಮೂಲೆ ಮೂಲೆಗೂ ಕೂಡ ವಿಸ್ತಾರ ಮಾಡಬೇಕೆಂಬ ಹಂಬಲದಲ್ಲಿ ಉತ್ತರ ಭಾರತದ ಪ್ರದೇಶಗಳಾದ ಬಿಹಾರ, ಬಂಗಾಳವನ್ನು ಆಕ್ರಮಿಸಲು ತಮ್ಮ ವಂಶದ ಕೆಲವರನ್ನು ದಂಡನಾಯಕರನ್ನಾಗಿ (commander-in-chief) ಕಳುಹಿಸಿದರು.

೩) ಈ ದಂಡನಾಯಕರು ಇಂದಿನ ಉತ್ತರ ಬಿಹಾರದವರೆಗೂ, ಈ ಕಡೆ ಇಂದಿನ ಪಶ್ಚಿಮ ಬಂಗಾಳದವರೆಗೂ ಆಕ್ರಮಣ ಮಾಡಿ ಚಾಲುಕ್ಯ ರಾಜ್ಯವನ್ನು ವಿಸ್ತಾರ ಮಾಡಿದರು !!

೪) ಈ ಕಾಲದಲ್ಲಿ ಚಾಲುಕ್ಯರ ರಾಜ್ಯ ಉತ್ತರ ಭಾರತದ ಭೂಪಟವನ್ನು ಅಲಂಕರಿಸಿತು !!

೫) ನಮ್ಮ ನಾಡಿನಲ್ಲಿ ಚಾಲುಕ್ಯರ ಅಧಿಪತ್ಯ ಮುಗಿದ ನಂತರ, ಉತ್ತರ ಬಿಹಾರ ಮತ್ತು ಬಂಗಾಳದಲ್ಲಿ ಸಾಮಂತ ರಾಜರಾಗಿ (provincial rulers ) ಆಳುತ್ತಿದ್ದ ಅವರ ವಂಶಜರು ತಮ್ಮದೇ ಆದ ಅವರವರ ರಾಜ್ಯಗಳನ್ನು ಉತ್ತರ ಬಿಹಾರದಲ್ಲಿ ಮತ್ತು ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ಸ್ಥಾಪಿಸಿದರು .

೬) ಪೂರ್ವ ನೇಪಾಳ ಮತ್ತು ಉತ್ತರ ಬಿಹಾರದ ಪ್ರದೇಶ ಅಕ್ಕಪಕ್ಕದ ಪ್ರದೇಶ. ಈ ಗಡಿಯ ಸುತ್ತಮುತ್ತಲ ಪ್ರದೇಶವು ಮಿಥಿಲೆ/ಮಿಥಿಲ ಎಂದು ಕರೆಯಲ್ಪಡುತಿತ್ತು. ಈ ಪ್ರದೇಶದಲ್ಲಿ 1097 ರಲ್ಲಿ ನಾನ್ಯದೇವ ಎಂಬ ಚಾಲುಕ್ಯ ವಂಶಜನು (ಸಾಮಂತ) ಮಿಥಿಲಾ ರಾಜ್ಯವನ್ನು ಸ್ಥಾಪಿಸಿ, ಇಡೀ ಉತ್ತರ ಬಿಹಾರವನ್ನು ತನ್ನ ಅಧೀನದಲ್ಲಿ ಹಿಡಿದನು. ಈ ಮಿಥಿಲಾ ರಾಜ್ಯದ ರಾಜಧನಿಯೇ ಇಂದಿನ ‘ಸಿಮ್ರಾವ್ ಗಡ ‘ (Simraongarh) ಅಂದಿನ ಸಿಮರಾ-ಪುರ !! (ಸಿಮರಾ ಎನ್ನುವುದು ಅಲ್ಲಿನ ಅಂದಿನ ಸ್ಥಳೀಯ ಕಾಡಿನ ಹೆಸರು. ಅಲ್ಲಿ ನಮ್ಮ ಅರಸರು ಕೋಟೆ ಕಟ್ಟಿದ್ದರಿಂದ, ಸಿಮರಾ-ವನ-ಗಡ ಅಂತಲೂ ಸಹ ಹೆಸರು ಹೊಂದಿತು) ಈಗಲೂ ನೇಪಾಳ ಇತಿಹಾಸ ಪುಟಗಳಲ್ಲಿ ಈ ವಂಶಜರನ್ನು ‘ಕರ್ನಾಟ ರಾಜವಂಶ’ (karnata dynasty) ಎಂದೇ ಉಲ್ಲೇಖಿಸುತ್ತಾರೆ !!

CLICK TO KNOW MORE

mithila

೭) ಈ ಸಿಮ್ರಾವ್ ಗಡ ಎಂತಹ ಅದ್ಭುತ ಕೋಟೆಯ ನಗರವೆಂದರೆ, ಅದರ ಸುತ್ತಲ್ಲೂ 6 -7 ಮೀಟರ್ ಉದ್ದದ , ಸುಮಾರು 2 ಮೀಟರ್ ಅಗಲದ ಬೃಹದಾಕಾರದ ಅನೇಕ ಸುತ್ತಿನ ಕೋಟೆ ಗೋಡೆಗಳಿದ್ದವು. ಈ ಕೋಟೆ ಉತ್ತರದಿಂದ-ದಕ್ಷಿಣದೆಡೆಗೆ 7 km ವ್ಯಾಪಿಸಿತ್ತು..ಪೂರ್ವ-ಪಶ್ಚಿಮಕ್ಕೆ 4.5 km ವ್ಯಾಪಿಸಿತ್ತು !! ಈ ಕೋಟೆಯ ನಗರವನ್ನು ಶತ್ರುಗಳ ದಾಳಿಯನ್ನು ತಡೆಯಲು ನದಿಯ ದಡದಲ್ಲಿ ಕಾಡಿನ ಮಧ್ಯೆ ಸ್ಥಾಪಿಸಲಾಗಿತ್ತು. ಈಗಲೂ ಸಿಮ್ರಾವ್ ಗಡದ ಪಳೆಯುಳಿಕೆಗಳನ್ನು ನೇಪಾಲದ ಬಿಹಾರಕ್ಕೆ ಹೊಂದಿಕೊಂಡ ಗಡಿಯಲ್ಲಿ ಕಾಡಿನ ಮಧ್ಯೆ ಕಾಣಬಹುದು. ಒಮ್ಮೆ google ನಲ್ಲಿ simraongarh ಎಂದು ಟೈಪ್ ಮಾಡಿ ನೋಡಿ..ಈ ಕಳೆದುಹೋದ ನಗರದ ಬಗ್ಗೆ ದೊಡ್ಡ ಲೇಖನ, ಸಂಶೋದನೆಗಳೇ ಇವೆ. ಅಲ್ಲಿನ ಎಲ್ಲಾ ಸಂಶೋಧಕರ ಲೇಖನಗಳು simraongarh ಕರ್ನಾಟ ವಂಶಜರ, ಕರ್ನಾಟಕ ಪ್ರದೇಶದಿಂದ ಬಂದ ರಾಜವಂಶಜರ ಕರ್ಮಭೂಮಿ ಎಂದೇ ಹೇಳುತ್ತದೆ !!

CLICK TO KNOW MORE

capture

೮) ಇನ್ನೂ ರೋಮಂಚನವಾಗುವ ವಿಷಯವೆಂದರೆ, ‘ಮಿಥಿಲ ರಾಜ್ಯದ’ ‘ಕರ್ನಾಟ ರಾಜವಂಶ’ದ ನಾನ್ಯದೇವನ 6 ನೇ ತಲೆಮಾರಿನ ರಾಜನಾದ ಹರಿಸಿಂಘದೇವನು ನೇಪಾಳದೊಳಕ್ಕೆ 1325 ರಲ್ಲಿ ದಂಡೆತ್ತಿ ಹೋದನು. ಅಂದಿನ ಕಾಲಕ್ಕೆ ನೇಪಾಲದ ರಾಜಧಾನಿ ‘ ಭಕ್ತಪುರ ‘. ಹರಿಸಿಂಘದೇವನು ನೇಪಾಳವನ್ನು ಅಳುತಿದ್ದ ‘ಮಲ್ಲ ರಾಜಮನೆತನ’ (malla dynasty )ದವರನ್ನು ಸೋಲಿಸಿ ಭಕ್ತಪುರವನ್ನು ಆಕ್ರಮಿಸಿದನು !!

CLICK TO KNOW MORE (refer pg. 44-60)

9317008821_371dfa86d1_o

೯) ಚಾಲುಕ್ಯರ ಕುಲದೇವರು ಇಂದಿನ ಮಹಾರಾಷ್ಟ್ರದಲ್ಲಿರುವ ‘ತುಳಜಾ ಭವಾನಿ’ . ಹರಿಸಿಂಘದೇವನು ಚಾಲುಕ್ಯ ವಂಶಜದನಾದ್ದರಿಂದ ನೇಪಾಲದಲ್ಲಿ ‘ತುಳಜ ಭವಾನಿ’ ಯನ್ನು ಅಲ್ಲೂ ಪ್ರತಿಷ್ಟಾಪಿಸಿ ಸುಂದರ ದೇವಾಲಯ ನಿರ್ಮಿಸಿದನು. ಈಗಲೂ ನೆಪಾಲಿಯರಿಗೆ ‘ತುಳಜ ಭವಾನಿ’ ಎಂದರೆ ಬಹು ಭಕ್ತಿ, ಬಹು ಪ್ರಿಯ. ಇವನ ನಂತರ ಬಂದ ಅನೇಕ ತಲೆಮಾರಿನ ರಾಜರು ‘ತುಳಜ ಭವಾನಿಯ’ ದೇವಸ್ಥಾನವನ್ನು ನೇಪಾಳದ ಕಟ್ಮಂಡು ಸೇರಿದಂತೆ ಅನೇಕ ಕಡೆ ಕಟ್ಟಿಸಿದ್ದಾರೆ. ಕಟ್ಮಂಡುವಿನಲ್ಲಿರುವ ‘ ತುಳಜ ಭವಾನಿ ‘ ದೇವಸ್ಥಾನವನ್ನು ‘ತಲೀಜು’ ಎಂದು ಕರೆಯುತ್ತಾರೆ. ಇಂದಿನ ನೇಪಾಳ ರಾಜವಂಶಜರಿಗೂ ಈ ದೇವರು ಬಲು ಪ್ರಿಯ .

220px-hari_singh_nalwa_british_museum

೧೦) ಹರಿಸಿಂಘದೇವನು ಕುಲದೇವರನ್ನ ವರ್ಷಕ್ಕೊಮ್ಮೆ ಪೂಜಿಸುವ ಪದ್ದತಿಯನ್ನು ನೇಪಾಳಕ್ಕೆ ತಂದನು. ತುಳಜ ಭವಾನಿಯನ್ನು ಪೂಜಿಸುವ ಪದ್ಧತಿ ಮತ್ತು ವರ್ಷಕೊಮ್ಮೆ ಕುಲದೇವರನ್ನ ಪೂಜಿಸುವ ಪದ್ಧತಿಯು ಈಗಲೂ ನೇಪಾಳದಲ್ಲಿ ಆಸ್ತಿತ್ವದಲ್ಲಿದೆ !! ಇದು ಆ ನೆಲದಲ್ಲಿ ‘ಕರ್ನಾಟ ರಾಜವಂಶ’ಸ್ತರಿಂದ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಭಾವ.

CLICK TO KNOW MORE (refer pg. 3,4,8)

kathmandu-bhaktapur-04-3-bhaktapur-durbar-square-golden-gate-torana-taleju-bhawani-close-up

 

೧೧) ಈಗಲೂ ಕೂಡ ನೇಪಾಳದಲ್ಲಿ ಮತ್ತು ಸಿಮ್ರಾವ್ ಗಡ ದ ಸುತ್ತ ಮುತ್ತ ‘ಕರ್ನಾಟ ವಂಶ’ ದವರು ನಮ್ಮ ನಾಡಿನಲ್ಲಿರುವ ದೇವಸ್ಥಾನಗಳನ್ನು ಹೋಲುವಂತೆ ಕಟ್ಟಿಸಿದ ಕಪ್ಪು ಶಿಲೆಯ ದೇವಸ್ಥಾನ ಮತ್ತು ವಿಗ್ರಹಗಳಿವೆ. ಕರ್ನಾಟಕ ವಾದ್ಯ ಪರಂಪರೆ ನೇಪಾಳಕ್ಕೆ ಈ ಕನ್ನಡ ವಂಶ ಕೊಟ್ಟ ದೊಡ್ಡ ಕೊಡುಗೆ. ಈಗಲೂ ಈ ವಾದ್ಯಗಳು ಪ್ರಚಲಿತದಲ್ಲಿದೆ.

durga_idol_at_kathmandu
೧೨) ಹರಿಸಿಂಘದೇವನ ನಂತರ ಆಳುತಿದ್ದ ಮಗ ಮೋಟಸಿಂಘನಿಗೆ ಮಗನಿಲ್ಲದ್ದರಿಂದ ಅವನ ಮಗಳನ್ನು ‘ಮಲ್ಲ ರಾಜವಂಶಜ’ನಿಗೆ ಕೊಟ್ಟು ಮಾಡುವೆ ಮಾಡಲಾಯಿತು. ಇದರಿಂದ ನೇಪಾಳದಲ್ಲಿ ಮತ್ತೆ ‘ಮಲ್ಲ ರಾಜವಂಶ ‘ ಅಧಿಕಾರಕ್ಕೆ ಬಂದಿತು. ಜಯಸ್ತಿಥಿ ಮಲ್ಲ ಅಧಿಕಾರಕ್ಕೆ ಬಂದ (1382-1395). ಜಯಸ್ತಿತಿ ಮಲ್ಲನ ತಾಯಿ ಕನ್ನಡತಿ. ಮೇಲೆ ಹೇಳಿದಂತೆ ಕರ್ನಾಟ ವಂಶದವಳು. ಆದ್ದರಿಂದ ನಂತರದ ‘ಮಲ್ಲ ರಾಜವಂಶ’ ಕರ್ನಾಟಮಯವಾಯಿತು. ಆದ್ದರಿಂದ ‘ ಮಲ್ಲ ರಾಜರು ‘ ಬರುವ ದಿನಗಳಲ್ಲಿ ಕರ್ನಾಟಕದ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚ್ಹು ಈಡಾದರು. ಈ ಜಯಸ್ಥಿತಿ ಮಲ್ಲನ ಕಾಲದಲ್ಲೇ ನೇಪಾಲದ ‘ಪಶುಪತಿನಾಥ ದೇವಾಲಯ’ ಕ್ಕೆ ಕರ್ನಾಟಕ ಕರಾವಳಿಯಿಂದ ‘ಭಟ್ಟ’ ಬ್ರಾಹ್ಮಣರನ್ನು ಪೂಜೆಗೆ ಕರೆತರಲಾಯಿತು !! ಇಂದಿಗೂ ಜಗದ್ವಿಖ್ಯಾತ ಪಶುಪತಿನಾಥ ದೇವಾಲಯದಲ್ಲಿ ಪೂಜೆ-ವಿಧಿವಿಧಾನ ನೆರವೇರುವುದು ಈ ನಮ್ಮ ‘ಭಟ್ಟ’ ಬ್ರಾಹ್ಮಣರಿಂದಲೇ !! ನಂತರ ಕಟ್ಮಂಡು (ಕಾಂತಿಪುರ)ವನ್ನು ಆಳಿದ ಮಲ್ಲ ವಂಶ ಜಯಸ್ತಿತಿ ಮಲ್ಲನ ರಕ್ತದ್ದು.

CLICK TO KNOW MORE

220px-bhaskar_malla

 

pashupatinath_temple_nepal

Pashupathi temple

೧೩) ಉತ್ತರಭಾರತೀಯರು ಹೆಮ್ಮೆಯಿಂದ ವಂಶಪಾರಂಪರ‍್ಯವಾಗಿ “ಸಿಂಗ್” ಅನ್ನೊ ಪದವನ್ನ ತಮ್ಮ ಹೆಸರಿಗೆ ತಗಲು ಹಾಕಿಕೊಳ್ಳುತ್ತಾರಲ್ಲ ?! ಆ ಪದ್ಧತಿ ಎಲ್ಲಿಂದ ಶುರುವಾಗಿದ್ದು, ಯಾರು ಶುರು ಮಾಡಿದ್ದು ಗೊತ್ತೆ? ಕರ್ನಾಟಕದಿಂದ ವಲಸೆ ಹೋಗಿ, ಉತ್ತರಭಾರತದ ಕೆಲವು ಪ್ರದೇಶಗಳನ್ನು (ಗುಜರಾತ್, ರಾಜಸ್ತಾನ, ಬಿಹಾರ, ನೇಪಾಳ) ಸ್ವತಂತ್ರವಾಗಿ ಆಳುತ್ತಿದ್ದ ಚಾಲುಕ್ಯ ಮತ್ತು ರಾಷ್ಟ್ರಕೂಟ ಶಾಖೆಯ ಅರಸರುಗಳು, ತಮ್ಮ ಹೆಸರಿನಲ್ಲಿ “…ಸಿಂಘ” ಅಂತ ಅಚ್ಚಕನ್ನಡ ಪದವನ್ನು ಮೊದಲು ಇಟ್ಟುಕೊಳ್ಳಲು ಶುರುಮಾಡಿದರು. ಅದು ಕಾಲಕ್ರಮೇಣ ಕ್ಷತ್ರಿಯ ರಕ್ತದ ಹೆಗ್ಗುರುತಿನಂತಾಗಿ, ಅಲ್ಲಿನ ಸ್ಥಳೀಯರೆಲ್ಲರು “ಸಿಂಘ್” “ಸಿಂಗ್” ಅಂಥ ತಮ್ಮ ಹೆಸರಿನ ಜೊತೆ ಇಟ್ಟುಕೊಳ್ಳುವ ಒಂದು ಪರಂಪರೆ ಸೃಷ್ಟಿಯಾಯಿತು.

ಹೀಗೆ ನೇಪಾಳ ಮತ್ತು ಉತ್ತರ ಬಿಹಾರದಲ್ಲಿ ನಮ್ಮ ಕೆಚ್ಚೆದೆಯ ಕನ್ನಡಿಗರ ಪರಾಕ್ರಮ ಕಾಣುತ್ತದೆ. ಎಲ್ಲಿಂದಲೋ ಬಂದು ನೇಪಾಳ ಮತ್ತು ಉತ್ತರ ಬಿಹಾರದಲ್ಲಿ ರಾಜ್ಯ ಸ್ಥಾಪಿಸಿ, ಅಲ್ಲಿನ ಸಂಸ್ಕೃತಿಗೆ ತಮ್ಮದೇ ಕೊಡುಗೆ ನೀಡಿ, ಅಲ್ಲಿನ ಜನರನ್ನು ಬೆಳೆಸಿ, ಉಳಿಸಿ ಧೀರತೆ, ಮಾನವೀಯತೆ ತೋರುತ್ತಾರೆ ಎಂದರೆ ಕನ್ನಡ ನಾಡವರು ಕೆಚ್ಚಿನ ಕಿಡಿಗಳೇ ಸರಿ !! ಆ ಕೆಚ್ಚು, ಆ ಕಿಡಿ ಈಗಿನ ಕನ್ನಡ ಜನಾಂಗದಲ್ಲಿ ಅದೆಲ್ಲಿ ಅಡಗಿ ಹೋಯಿತೊ?! ಅದೆಲ್ಲಿ ಹುದುಗಿದೆಯೊ?!

 

ಮಾಹಿತಿ ಕೃಪೆ : Facebook, Whatsapp , Wikipedia , Google

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top