fbpx
ಮನೋರಂಜನೆ

ಶಿವಣ್ಣ- ಶ್ರೀಮುರುಳಿ ನಟನೆಯ “ಮಫ್ತಿ” ಚಿತ್ರದ ಸೂಪರ್ ಟ್ರೈಲರ್ ರಿಲೀಸ್ ಆಗಿದೆ..! ಇಲ್ಲಿ ನೋಡಿ.

ಶಿವಣ್ಣ- ಶ್ರೀಮುರುಳಿ ನಟನೆಯ “ಮಫ್ತಿ” ಚಿತ್ರದ ಸೂಪರ್ ಟ್ರೈಲರ್ ರಿಲೀಸ್ ಆಗಿದೆ..! ಇಲ್ಲಿ ನೋಡಿ.

 

 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ನಟಿಸಿರುವ ಸ್ಯಾಂಡಲ್’ವುಡ್’ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮಫ್ತಿ ಚಿತ್ರದ ಟ್ರೈಲರ್ ಇಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದ್ದು. ಸಖತ್ ರಗಡ್ ಆಗಿ ಮೂಡಿ ಬಂದಿರುವ ಟ್ರೈಲರ್ ಪಕ್ಕ ಮಾಸ್ ಮಸಾಲವಾಗಿದೆ.. ಮುಂದೆ ಓದಿ

 

 

ಈಗಾಗಲೇ ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಗೊಂಡಿದ್ದ ‘ಮಫ್ತಿ’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಈಗ ಟ್ರೈಲರ್ ಕೂಡ ಟೀಸರ್ ಗಿಂತ ಹೆಚ್ಚಿನ ಮಟ್ಟದಲ್ಲಿ ಸದ್ದುಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ..

 

 

ಸ್ಟಾರ್ ಕಾಸ್ಟ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಮಫ್ತಿ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ಅಭಿನಯಿಸಿದ್ದಾರೆ.. ನರ್ತನ್ ಆಕ್ಷನ್ ಕಟ್ ಹೇಳುತ್ತಿರುವ ‘ಮಫ್ತಿ’ ಚಿತ್ರವನ್ನುಕ್ಕೆ ರವಿ ಬಸ್ರೂರ್ ರವರ ಸಂಗೀತ ಸಂಯೋಜನೆಯಿದೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್ 17 ರಂದು ಶ್ರೀಮುರಳಿರವರ ಹುಟ್ಟುಹಬ್ಬವಾಗಿರುವುದರಿಂದ ಆ ದಿನ ಚಿತ್ರವನ್ನು ತೆರೆಯ ಮೇಲೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ..

 

 

ಮಫ್ತಿ ಚಿತ್ರದ ಟ್ರೈಲರ್’ಅನ್ನು ಇಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top