fbpx
ಸಮಾಚಾರ

ಮಂಗಳಮುಖಿ ವೇಷತೊಟ್ಟು ಭಿಕ್ಷೆ ಬೇಡುತ್ತಿದ್ದ ಯುವಕನ ಬಟ್ಟೆ ಬಿಚ್ಚಿ ಯರ್ರಾಬಿರ್ರಿ ಗೂಸಾ ಕೊಟ್ಟ ಅಸಲಿ ಮಂಗಳಮುಖಿಯರು. 

ಮಂಗಳಮುಖಿ ವೇಷತೊಟ್ಟು ಭಿಕ್ಷೆ ಬೇಡುತ್ತಿದ್ದ ಯುವಕನ ಬಟ್ಟೆ ಬಿಚ್ಚಿ ಯರ್ರಾಬಿರ್ರಿ ಗೂಸಾ ಕೊಟ್ಟ ಅಸಲಿ ಮಂಗಳಮುಖಿಯರು. 

 

 

ಮಂಗಳಮುಖಿಯರಂತೆ ವೇಷ ತೊಟ್ಟು ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಮಂಗಳಮುಖಿಯರು ಧರ್ಮದೇಟು ನೀಡಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಕೆಲವು ದಿನಗಳಿಂದ ಕಾವ್ಯ ಎಂಬ ಹೆಸರಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ರಾಜಶೇಖರ್ ಎಂಬ ಯುವಕನಿಗೆ ಒರಿಜಿನಲ್ ಮಂಗಳ ಮುಖಿಯರು ಹಿಗ್ಗಾ ಮುಗ್ಗ ಗೂಸಾ ಕೊಟ್ಟಿದ್ದಾರೆ. ಮುಂದೆ ಓದಿ..

 

 

ಮಂಗಳಮುಖಿ ವೇಷತೊಟ್ಟು ನಗರದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಈತನ ನಡುವಳಿಕೆಯಲ್ಲಿ ಅನುಮಾನ ಬಂದು ಗಮನಿಸಿದ ಅಸಲಿ ಮಂಗಳಮುಖಿಯರಾದ ಆಲಿಯಾ, ಜೋಯಾ ಎಂಬುವವರು ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಬಟ್ಟೆ ಬಿಚ್ಚಿಸಿ ವಿಚಾರಣೆ ಮಾಡಿದಾಗ ಈತ ಮಂಗಳಮುಖಿಯಲ್ಲ ಎಂದು ತಿಳಿದು ಬಂದಿದೆ.. ಇದರಿಂದ ಕೋಪಗೊಂಡ ಅಸಲಿ ಮಂಗಳಮುಖಿಯರು ಯುವಕನಿಗೆ ಯರ್ರಾಬಿರ್ರಿ ಗೂಸಾ ಕೊಟ್ಟಿದ್ದಾರೆ..

 

 

ಗಂಡಸಾಗಿ ದುಡಿದು ತಿನ್ನುವ ಬದಲು ಈತ ಮಂಗಳಮುಖಿಯಾಗಿ ನಾಟಕವಾಡುತ್ತಿದ್ದಾನೆ.. ಹೀಗೆ ನಮ್ಮಹಾಗೆ ವೇಷ ತೊಟ್ಟು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಇಂತ ವ್ಯಕ್ತಿಗಳಿಂದಲೇ ಇಂದು ನಮಗೆ ಗೌರವ ಇಲ್ಲದಂತಾಗಿದೆ ಎಂದು ಅಸಲಿ ಮಂಗಳಮುಖಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಲಿ ಮಂಗಳಮುಖಿಯಾದ ರಾಜಶೇಖರ್ ನನ್ನ ಹಿಡಿದು ದಾವಣಗೆರೆಯ ಬಸವನಗರ ಪೊಲೀಸರಿಗೆ ಒಪ್ಪಿಸಿದ್ದಾರೆ..

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top