fbpx
ಕನ್ನಡ

ಕನ್ನಡ ರಾಜಮನೆತನ ಕಟ್ಟಿಸಿದ ಪೂರಿ ಜಗನ್ನಾಥ ದೇವಾಲಯದ 13 ಆಶ್ಚರ್ಯಕರ ಸಂಗತಿಗಳು ತಿಳ್ಕೊಂಡ್ರೆ ಆಶ್ಚರ್ಯ ಪಡ್ತೀರಾ!

ಕನ್ನಡ ರಾಜಮನೆತನ ಕಟ್ಟಿಸಿದ ಪೂರಿ ಜಗನ್ನಾಥ ದೇವಾಲಯದ 13 ಆಶರ್ಯಕರ ಸಂಗತಿಗಳು ಕೇಳೋರನ್ನ ಬೆರಗು ಮಾಡುತ್ತೆ !

 

ಪೂರಿ ಜಗನ್ನಾಥ ದೇವಾಲಯದ ಮೇಲಿರೋ ಧ್ವಜ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತೆ.

 

 

1800 ವರ್ಷಗಳಿಂದ 45 ಅಂತಸ್ತಿನ ಕಟ್ಟಡದಷ್ಟು ಎತ್ತರವಿದ್ದರೂ ಅರ್ಚಕರು ದಿನವೂ ಹತ್ತಿ ಧ್ವಜ ಬದಲಿಸುತ್ತಾರೆ , ಯಾವುದಾದರೂ ಒಂದು ದಿನ ಧ್ವಜ ಬದಲಾಗಿಲ್ಲವೆಂದರೆ ದೇವಸ್ಥಾನವನ್ನು  18 ವರ್ಷಗಳ ಕಾಲ ಮುಚ್ಚಬೇಕಾಗುತ್ತದೆ.

 

 

ಸುದರ್ಶನ ಚಕ್ರ ದೇವಾಲಯದ ಮೇಲ್ಭಾಗದಲ್ಲಿದ್ದು 20 ಅಡಿ ಎತ್ತರ ಮತ್ತು ಸಾವಿರಾರು ಕೆಜಿ ತೂಕ ಹೊಂದಿಯೇ , ನಗರದ ಯಾವುದೇ ಭಾಗದಿಂದ ನೋಡಿದರು ಚಕ್ರವು ನಿಮ್ಮ ಕಡೆಗೆ ಇದೆ ಎಂದೆನಿಸುತ್ತದೆ.

2000 ವರ್ಷಗಳ ಹಿಂದೆ ಅಷ್ಟು ತೂಕದ ,ಎತ್ತರದ ಸುದರ್ಶನ ಚಕ್ರ ವನ್ನೂ ಹೇಗೆ ಪ್ರತಿಷ್ಠಾಪಿಸಿದರು ಎಂಬುದು ಯಾರಿಗೂ ತಿಳಿಯದ ಅಚ್ಚರಿಯ ಸಂಗತಿ.

 

 

ಹಗಲಿನ ಹೊತ್ತಿನಲ್ಲಿ ತಂಗಾಳಿ ಸಾಮಾನ್ಯವಾಗಿ ಸಮುದ್ರದಿಂದ ಭೂಮಿಯ ಸುಳಿಯುತ್ತದೆ ಹಾಗೆಯೇ  ಸಂಜೆ ತಂಗಾಳಿ ಸಮುದ್ರದ ಕಡೆ ಸುಳಿಯುತ್ತದೆ ಆದರೆ ಪೂರಿಯಲ್ಲಿ ಇದು ತದ್ವಿರುದ್ದ.

ದೇವಾಲಯದ ಮೇಲ್ಭಾಗದಲ್ಲಿ ಯಾವುದೇ ವಿಮಾನಗಳು, ಪಕ್ಷಿಗಳು ಹಾರುವುದಿಲ್ಲ ಇದಕ್ಕೆ ಯಾವುದೇ ವೈಜ್ಞಾನಿಕ ವಿವರಣೆ ಇಲ್ಲ .

 

 

ದೇವಾಲಯದ ಮುಖ್ಯ ಗುಮ್ಮಟದ ನೆರಳು ದಿನದ ಯಾವುದೇ ಸಮಯದಲ್ಲಿ ಕಾಣೋದಿಲ್ಲ .

 

 

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಎಷ್ಟೇ ಬದಲಾದರು ದೇವಸ್ಥಾನದಲ್ಲಿ ಅಡುಗೆಮಾಡಿದ ಪ್ರಸಾದ ಸಾಕಾಗುತ್ತೆ. ಇದುವರೆಗೆ ಯಾವತ್ತೂ ಉಳಿದಿಲ್ವಂತೆ.

 

 

ದೇವರ ನೈವೇದ್ಯಕ್ಕೆ 7 ಮಡಿಕೆಗಳನ್ನು ಬಳಸಿ ಸೌದೆಯಲ್ಲಿ ಅಡುಗೆ ಮಾಡಲಾಗುತ್ತದೆ ,ಈ ಏಳು ಮಡಿಕೆಗಳನ್ನು ಒಂದರ ಮೇಲೊಂದು ಇಡಲಾಗುತ್ತಂತೆ ಆಶ್ಚರ್ಯವೇನೆಂದರೆ ಮೇಲೆ ಇಟ್ಟ ಮಡಿಕೆ ಮೊದಲು ಬೆಂದಿರುತ್ತಂತೆ.

 

 

ದೇವಾಲಯದ ಸಿಂಹದ್ವಾರ (ಮುಖ್ಯ ಬಾಗಿಲು) ಪ್ರವೇಶಿಸುವಾಗ ಮಾತ್ರ ಸಮುದ್ರದ ಅಲೆಗಳು ಕೇಳಿಸುತ್ತದೆ ನಂತರ ಅಲೆಗಳ ಶಬ್ದ ದೇವಾಲಯದಿಂದ ಹೊರಗೆ ಬರುವವರೆಗು ಕೇಳಿಸುವುದಿಲ್ಲ.

 

 

ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ ನಡೆಯುತ್ತಿದ್ದು 2 ಬಾರಿ ದೇವರ ಉತ್ಸವ ಸಾಗುತ್ತದೆ , ಪ್ರತಿಬಾರಿ 3 ದೇವರುಗಳ ಆರಾಧನೆ ನಡೆಯುತ್ತದೆ
ಪುರಿ ದೇವಾಲಯ ಹಾಗು ಮೌಶಿ ಮಾ ಆಲಯಗಳ ನಡುವೆ ನದಿ ಹರಿಯುವುದರಿಂದ ಮೂರು ದೋಣಿಗಳನ್ನು ಬಳಸಿ ಮೆರವಣಿಗೆ ಸಾಗುತ್ತದೆ.

 

 

ದೇವಾಲಯ ಕಟ್ಟಿಸಿದ್ದು 1200 ರಲ್ಲಿ , ಗಂಗ ರಾಜವಂಶದ ನರಸಿಂಹದೇವಾ (ಕೊನಾರ್ಕ್ ಸೂರ್ಯ ದೇವಾಲಯದ ಸೃಷ್ಟಿಕರ್ತ) ಇವರ ಮಗ ಅಂಗಭಿಮದೇವ.

 

 

ಹಳೆಯ ವಿಗ್ರಹಗಳನ್ನು ಮಣ್ಣಿನಲ್ಲಿ ಹೂಳಲಾಗುತ್ತದೆ , ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ , ಇದನ್ನು ನಬಕಳೇವರ ಎಂದು ಕರೆಯಲಾಗುತ್ತದೆ, 8 -19 ವರ್ಷಗಳ ಒಳಗೆ ಎಂದಾದರೂ , ಆಷಾಢ ಮಾಸದ ಸಮಯದಲ್ಲಿ ಈ ಉತ್ಸವ ಜರುಗುತ್ತದೆ, ಒಮ್ಮೆಗೆ ಕನಿಷ್ಠ 8 ವರ್ಷ ಕಾಯಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top