fbpx
ಕನ್ನಡ

ನಿಮ್ಮ ಜೀವನದಲ್ಲಿ ಹಣ ಕಾಸಿನ ತೊಂದರೆಯಿಂದ ಕಷ್ಟ ಅನುಭವಿಸುತ್ತಿದ್ದರೆ 7 ಶನಿವಾರಗಳು ಸತತವಾಗಿ ಈ ಪೂಜಾ ವಿಧಾನವನ್ನು ಪಾಲಿಸಿರಿ

ನಿಮಗೆ ಜೀವನದಲ್ಲಿ ಅನೇಕ ಆರ್ಥಿಕ ಸಮಸ್ಯೆಗಳು ಇದ್ದರೆ ಏಳು ಶನಿವಾರಗಳು ಸತತವಾಗಿ ಈ ಪೂಜಾ ವಿಧಾನವನ್ನು ಪಾಲಿಸಿರಿ.

 

 

ಶನಿವಾರ ಅಂದರೆ ನಮಗೆ ಜ್ಞಾಪಕಕ್ಕೆ ಬರುವುದು ಆ ಕಲಿಯುಗದ ದೈವ ಶ್ರೀ ವೆಂಕಟೇಶ್ವರ ಸ್ವಾಮಿ. ಹಾಗೆ ಕಷ್ಟ ಬಂದಾಗ ನಮಗೆ ಮೊದಲಿಗೆ ಜ್ಞಾಪಕಕ್ಕೆ ಬರುವುದು ಕೂಡ ಈ ತಿಮ್ಮಪ್ಪನೇ.

ಜೀವನದಲ್ಲಿ ಯಾವುದೇ ಒಂದು ಸಂದರ್ಭದಲ್ಲಿ ಶನೈಶ್ಚರ ದೇವರ ಪ್ರಭಾವದಿಂದ ನಾವು ಅನೇಕ ಕಷ್ಟಗಳನ್ನು ಅನುಭವಿಸುತ್ತೇವೆ. ಈ ಶನೈಶ್ಚರ ದೇವನ   ಪ್ರಭಾವ ನಮ್ಮ ಮೇಲೆ ಬೀಳದಂತೆ ಇರಬೇಕು ಎಂದರೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಏಳು ವಾರಗಳು ಕ್ರಮವಾಗಿ ತಪ್ಪದೆ ಪೂಜೆ ಮಾಡಬೇಕು.

ಶ್ರೀ  ವೆಂಕಟೇಶ್ವರ ಸ್ವಾಮಿಯ ಕೃಪೆ ನಮ್ಮ ಮೇಲೆ ಇದ್ದರೆ ಎಂತಹ ದೋಷಗಳು ಸಹ ನಮ್ಮ ಮೇಲೆ ದುಷ್ಪರಿಣಾಮಗಳನ್ನು ಬೀರುವುದಿಲ್ಲ.

 

 

ಶನಿವಾರದ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ನಿತ್ಯ ಕರ್ಮಗಳನ್ನು ಮುಗಿಸಿ, ಮನೆಯ ಮುಂದೆ ಮತ್ತು  ದೇವರ ಮನೆಯನ್ನು ಮೊದಲಿಗೆ ಸ್ವಚ್ಛ ಮಾಡಿಕೊಳ್ಳಬೇಕು .

 

 

ತುಳಸಿ ಗಿಡಕ್ಕೆ ಎಳ್ಳೆಣ್ಣೆಯಿಂದ ಅಥವಾ ತುಪ್ಪದಿಂದ ದೀಪಾರಾಧನೆ ಮಾಡಬೇಕು .ನಂತರ ವೆಂಕಟೇಶ್ವರ ಸ್ವಾಮಿಗೆ ಅಲಂಕಾರ ಮಾಡಿ ಸಂಕಲ್ಪ ಮಾಡಿಕೊಳ್ಳಬೇಕು .

 

ಮೊದಲಿಗೆ ಅಕ್ಕಿ ಹಿಟ್ಟು, ಹಾಲು, ಒಂದು ಚಿಕ್ಕ ಬೆಲ್ಲದ ತುಂಡು, ಬಾಳೆ ಹಣ್ಣನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಅದನ್ನು ದೀಪ ವನ್ನಾಗಿ ಮಾಡಿಕೊಳ್ಳಬೇಕು. ಈ ದೀಪದಲ್ಲಿ ಏಳು ಬತ್ತಿಗಳನ್ನು ಇಟ್ಟು ತಾಜಾ ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಬೇಕು.

 

 

ಶನಿವಾರದ ಸಾಯಂಕಾಲದ ಸಮಯದಲ್ಲಿ ಶ್ರೀ  ವೆಂಕಟೇಶ್ವರ   ಸ್ವಾಮಿಯ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ ತುಪ್ಪದಿಂದ ದೀಪಾರಾಧನೆ ಮಾಡುವುದರಿಂದ ಮನೆಯ ಕಷ್ಟಗಳು ದೂರವಾಗಿ ಸುಖ ಸಂತೋಷ ಅಭಿವೃದ್ಧಿ ಪ್ರಾಪ್ತಿಯಾಗುತ್ತದೆ .

ಹೀಗೆ ಸತತವಾಗಿ ಏಳು ಶನಿವಾರಗಳು ಕ್ರಮಬದ್ಧವಾಗಿ ತಪ್ಪದೆ ಮಾಡಿದರೆ ದೋಷಗಳು ಏನಾದರೂ ಇದ್ದರೆ ಅದು ದೂರವಾಗಿ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ ಎಂದು ಪುರಾಣ ಮತ್ತು ಗ್ರಂಥಗಳು ಶಾಸ್ತ್ರಗಳು ಹೇಳುತ್ತವೆ.

ದೀಪಾರಾಧನೆ ಮಾಡಿದ ನಂತರ ಶ್ರೀಮನ್ನಾರಾಯಣನ ಮುಂದೆ “ಓಂ ನಮೋ ನಾರಾಯಣಾಯ ನಮಃ” ಎಂದು  ಜಪಿಸಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top