fbpx
ಸಮಾಚಾರ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರರಂಗದ ಪ್ರಮುಖ ನಟರುಗಳನ್ನು ಅನುಕರಿಸಿ ಶಾನ್ವಿ ಮತ್ತು ಶ್ರದ್ಧಾ ಸೇರಿ ಮಾಡಿರೋ ಈ ಹಾಡನ್ನ ನೋಡಿ. ಸಕತ್ ಮಜಾ ಇದೆ..

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರರಂಗದ ಪ್ರಮುಖ ನಟರುಗಳನ್ನು ಅನುಕರಿಸಿ ಶಾನ್ವಿ ಮತ್ತು ಶ್ರದ್ಧಾ ಸೇರಿ ಮಾಡಿರೋ ಈ ಹಾಡನ್ನ ನೋಡಿ. ಸಕತ್ ಮಜಾ ಇದೆ..

 

 

ಇಂದು ರಾಜ್ಯಾದ್ಯಂತ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿ ಜನರಿಗೆ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ ಕನ್ನಡದ ಟಾಪ್ ಹೀರೋಯಿನ್ ಗಳಾದ ಶಾನ್ವಿ ಮತ್ತು ಶ್ರದ್ಧಾ ವಿಶಿಷ್ಟವಾದ ಉಡುಗೊರೆಯೊಂದನ್ನ ನೀಡಿದ್ದಾರೆ. ಮುಂದೆ ಓದಿ.

 

 

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಚಿತ್ರರಂಗದ ಪ್ರಮುಖ ನಟರಿಗೆ ಗೌರವವನ್ನು ಅರ್ಪಿಸುವ ಉದ್ದೇಶದಿಂದ ನಟರುಗಳನ್ನು ಅನುಕರಿಸಿ ಶಾನ್ವಿ ಮತ್ತು ಶ್ರದ್ಧಾ ಸೇರಿ ಒಂದು ವಿಡಿಯೋ ಸಾಂಗ್ ಅನ್ನು ಮಾಡಿದ್ದು ಈ ಹಾಡು ನೋಡಲು ಸಕತ್ ಮಜವಾಗಿದೆ.. ಡಾ. ರಾಜ್​ಕುಮಾರ್ ಕಾಲದಿಂದ ಹಿಡಿದು ಇಂದಿನ ನಟರವರೆಗಿನ ಹಾಡುಗಳ ಸಣ್ಣ ಸಣ್ಣ ತುಣುಕುಗಳಿಗೆ ಈ ಬೆಡಗಿಯರು ಕುಣಿದಿದ್ದಾರೆ.

 

 

“ತಾತನ್ ರೆಟ್ರೋ2ಮೊಮ್ಮಗನ್ ಮೆಟ್ರೋ” ಎಂಬ ಶೀರ್ಷಿಕೆ ಇರುವ ಈ ಹಾಡಿನಲ್ಲಿ ರಾಜ್​ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್,ಶಂಕರ್ ನಾಗ್, ಶಿವರಾಜ್​ಕುಮಾರ್, ಉಪೇಂದ್ರ, ಕಿಚ್ಚ ಸುದೀಪ್,ಪುನೀತ್ ರಾಜ್​ಕುಮಾರ್,ದರ್ಶನ್,ಗಣೇಶ್,ಯಶ್ ಸೇರಿದಂತೆ ಒಟ್ಟು 14 ಕಲಾವಿದರ 14 ಜನಪ್ರಿಯ ಹಾಡುಗಳಿಗೆ ಈ ವಿಡಿಯೋದಲ್ಲಿ ಹೆಜ್ಜೆ ಹಾಕಿದ್ದಾರೆ..

 

ಶಾನ್ವಿ ಮತ್ತು ಶ್ರದ್ಧಾ ಸೇರಿ ಮಾಡಿರೋ ಈ ಹಾಡನ್ನ ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top