fbpx
ದೇವರು

ಶ್ರೀನಿವಾಸ ಕಲ್ಯಾಣ – ಇದು ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹದ ಕಥೆ

ಶ್ರೀನಿವಾಸ ಕಲ್ಯಾಣ.

 

ವಕುಳ ಮಾಲಿಕ ಮಾತೆಯು ಶ್ರೀ ಹರಿಗೆ ಚಿಕಿತ್ಸೆ ನೀಡುತ್ತಾಳೆ. ನಾರಾಯಣನಿಗೆ ಚೋಳ ರಾಜನು ಕತ್ತಿಯಿಂದ ಕತ್ತರಿಸಲು ಬಂದಾಗ ತಲೆ ಮತ್ತು ಗದ್ದದ ಭಾಗಕ್ಕೆ ಗಾಯವಾಗುತ್ತದೆ. ಅಲ್ಲಿಂದ ರಕ್ತವೂ ಸುರಿದು ಹೋಗುತ್ತಿರುತ್ತದೆ. ಅವನು ಔಷಧಿಗೋಸ್ಕರ ಹುಡುಕಾಡುತ್ತಿರುವಾಗ ಒಂದು ಮಹಿಳೆಯು ಕೃಷ್ಣನ ಹೆಸರನ್ನು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಾನೆ. ನಾರಾಯಣನು ಆ ಮನೆಯೊಳಗೆ ಹೋದಾಗ ಅಲ್ಲಿ ವಕುಳ ಮಾಲಿಕ ಎಂಬ ಮಹಿಳೆಯನ್ನು ಕಾಣುತ್ತಾನೆ. ಅವಳು ಗಾಯಕ್ಕೆ ಔಷಧಿಯನ್ನು ಹಾಕಿ ನಾರಾಯಣನಿಗೆ ಚಿಕಿತ್ಸೆಯನ್ನು ಸಹ ನೀಡಿ ಸಂತೈಸುತ್ತಾಳೆ .

ಸಾಕ್ಷಾತ್ ವಿಷ್ಣುವಿನ ಅವತಾರವೇ ಆಗಿದ್ದ ಶ್ರೀ ಕೃಷ್ಣನು. ಶ್ರೀಕೃಷ್ಣನ ತಾಯಿಯಾದ ಯಶೋದೆಯು ಕೃಷ್ಣನ ವಿವಾಹವನ್ನು ಕಂಡಿಲ್ಲ ಎಂದು ದುಃಖದಲ್ಲಿದ್ದಳು. ಆಗ ಕೃಷ್ಣನು ಮುಂದಿನ ಜನ್ಮದಲ್ಲಿ ಅವಳ ಆಸೆಯನ್ನು ಈಡೇರಿಸುವೆ ಎಂದು ಪ್ರಮಾಣ ಮಾಡಿದ್ದನು. ಆದ್ದರಿಂದಲೇ ಯಶೋದೆಯೇ ಮುಂದೆ ವಕುಳ ಮಾಲಿಕ ಮಾತೆಯಾಗಿ ಹುಟ್ಟಿ ಮತ್ತು ಅವನ ಶ್ರೀನಿವಾಸನ ತಾಯಿಯಾಗಿ ಪದ್ಮಾವತಿಯ ಜೊತೆಗೆ ವಿವಾಹವನ್ನು ಸಹ ಮಾಡಿಸುತ್ತಾಳೆ. ಅದರಿಂದ ಅವಳಿಗೆ ಸಾಕ್ಷಾತ್ ವಿಷ್ಣುವಿನ ವಿವಾಹವನ್ನು ಕಂಡು ಕಣ್ತುಂಬಿಕೊಂಡು ತೃಪ್ತಿ ಪಡುತ್ತಾಳೆ.

ಆಕಾಶ ರಾಜನು ನೆಲವನ್ನು ಉಳುಮೆ ಮಾಡಲು ಹೋದಾಗ…..

ಆಕಾಶ ರಾಜನಿಗೆ ಮಕ್ಕಳಿರಲಿಲ್ಲ .ಆದ್ದರಿಂದ ಅವನು ಋಷಿ ಮುನಿಗಳ ಬಳಿ ತ್ಯಾಗವನ್ನು ಮಾಡುತ್ತೇನೆಂದು ಹೇಳುತ್ತಾನೆ. ಆಗ ಅವನು ತ್ಯಾಗಕ್ಕಾಗಿ ಭೂಮಿಯನ್ನು ಉಳುಮೆ ಮಾಡುವಾಗ ಅವನಿಗೆ ಅಲ್ಲಿ ಒಂದು ಪೆಟ್ಟಿಗೆಯೂ ದೊರೆಯುತ್ತದೆ .ಆ ಪೆಟ್ಟಿಗೆಯೊಳಗೆ ಒಂದು ಹೆಣ್ಣು ಮಗುವು ಕಮಲದ ಹೂವಿನ ಸಾವಿರ ದಳಗಳ ಮೇಲೆ ಮಲಗಿರುವುದನ್ನು ಕಾಣುತ್ತಾನೆ .

ಪದ್ಮಾವತಿಯ ಯೌವನಾವಸ್ಥೆ.

ರಾಜನಿಗೆ ಕಮಲದ ಹೂವಿನ ಮೇಲೆ ಮಲಗಿರುವ ಮಗುವೂ ದೊರೆಯಿತು. ಆದ್ದರಿಂದ ಆ ಹೆಣ್ಣು ಮಗುವಿಗೆ ಪದ್ಮಾವತಿ ಎಂದು ನಾಮಕರಣ ಮಾಡಿದನು. ಅವಳನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಿದ್ದನು. ಅನೇಕ ವರ್ಷಗಳು ಕಳೆದ ಹಾಗೆ ಪದ್ಮಾವತಿ ಅತ್ಯಂತ ಸುಂದರಿಯಾಗಿ ಸುಂದರ ಯುವತಿಯಾಗಿ ಬೆಳೆದಳು.
ಶ್ರೀನಿವಾಸನು ಪದ್ಮಾವತಿಯನ್ನು ರಕ್ಷಿಸಿದನು.

ಶ್ರೀನಿವಾಸನು ಬೇಟೆಯಾಡಲು ವಕುಳ ಮಾಲಿಕ ಮಾತೆಯ ಆಶ್ರಮದ ಬಳಿ ಹೋದಾಗ. ಅಲ್ಲಿ ಒಂದು ಆನೆಯೂ ಒಂದು ಹೆಂಗಸನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ನೋಡುತ್ತಾನೆ. ಒಂದು ಬಾರಿ ಆ ಆನೆಯ ಕಡೆ ಬಾಣಗಳನ್ನು ಬಿಡುತ್ತಾನೆ. ಆನೆಯ ಹೆದರಿ ಅಲ್ಲಿಂದಲೇ ಓಡಿ ಹೋಗುತ್ತದೆ .ಆಗ ಪದ್ಮಾವತಿಗೆ ಆ ಅಪಾಯದಿಂದ ರಕ್ಷಣೆ ಸಿಗುತ್ತದೆ .
ಪದ್ಮಾವತಿಯನ್ನು ಶ್ರೀನಿವಾಸನನ್ನು ಪ್ರೀತಿಸುತ್ತಾಳೆ.

 

ಪದ್ಮಾವತಿಯು ಶ್ರೀನಿವಾಸನ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ. ಅವಳಿಗೆ ಶ್ರೀನಿವಾಸನು ಯಾರೆಂದು ಸಹ ತಿಳಿದಿರುವುದಿಲ್ಲ . ಹಾಗೂ ಅವನು ಕೂಡ ಪದ್ಮಾವತಿಯ ಪ್ರೀತಿಯಲ್ಲಿ ಮುಳುಗಿ ಹೋಗುತ್ತಾನೆ. ಇಬ್ಬರೂ ಸಹ ಇದರ ಬಗ್ಗೆ ಏನೂ ಮಾತನಾಡದೇ ಕಾಡನ್ನು ತೊರೆದರು .
ಶಾಸ್ತ್ರಗಾತಿಯು ಮುಂದೆ ಶಾಸ್ತ್ರವನ್ನು ಹೇಳುತ್ತಾಳೆ.

ಶ್ರೀನಿವಾಸನಿಗೆ ಪದ್ಮಾವತಿಯ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಬೇಕೆಂಬ ಆಸಕ್ತಿ ಮನಸ್ಸಿನಲ್ಲಿ ಮೂಡುತ್ತದೆ. ಆದ್ದರಿಂದ ಅವನು ಕಾಡಿನಲ್ಲಿ ನೋಡಿದ ಅವಳನ್ನು ಶ್ರೀನಿವಾಸನು ಭವಿಷ್ಯ ಹೇಳುವ ಶಾಸ್ತ್ರಗಾತಿಯ ರೂಪದಲ್ಲಿ ಆಕಾಶ ರಾಜನ ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಶಾಸ್ತ್ರ ಹೇಳುವವಳು ಅಲ್ಲಿರುವವರ ಬಗ್ಗೆ ಮುಂದಿನ ಭವಿಷ್ಯದ ಬಗ್ಗೆ ಶಾಸ್ತ್ರವನ್ನು ನುಡಿಯುತ್ತಾಳೆ. ಈ ಸಮಯದಲ್ಲಿ ಶ್ರೀನಿವಾಸನು ಕಾಡಿನಲ್ಲಿ ನಾನು ನೋಡಿದ ಸ್ತ್ರೀ ಆಕಾಶ ರಾಜನ ಮಗಳು ಎಂದು ತಿಳಿಯುತ್ತಾನೆ.
ಶ್ರೀನಿವಾಸನು ಪದ್ಮಾವತಿಯೂ ಮುಂದಿನ ಭವಿಷ್ಯವನ್ನು ಹೇಳುತ್ತಾನೆ.

ಆಕಾಶ ರಾಜನು ಆ ಶಾಸ್ತ್ರಗಾತಿ ಹೆಂಗಸಿಗೆ ಹೀಗೆ ಹೇಳುತ್ತಾನೆ .ಅವನ ಮಗಳ ದುಃಖಕ್ಕೆ ಕಾರಣ ಕಾಡಿನಲ್ಲಿ ಅವಳು ನೋಡಿದ ಒಬ್ಬ ಪುರುಷನೆಂದು ಹೇಳುತ್ತಾಳೆ. ಆ ಯುವವಯಸ್ಕ ಪುರುಷನ ಮಹಾವಿಷ್ಣುವಾಗಿದ್ದಾನೆ. ಆ ಶಾಸ್ತ್ರಗಾತಿಯು ಆಕಾಶ ರಾಜನಿಗೆ ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹವನ್ನು ನಿಶ್ಚಯಿಸಿವುದಕ್ಕೆ ಹೇಳುತ್ತಾಳೆ.
ಋುಷಿಗಳಾದ ಸುಖರು ಸಂದೇಶಗಾರನಾಗಿ ಸಂದೇಶವನ್ನು ತೆಗೆದುಕೊಂಡು ದೇವತೆಗಳ ಬಳಿ ಬರುತ್ತಾರೆ.
ಶ್ರೀನಿವಾಸನು ಋಷಿಗಳಾದ ಸುಖರನ್ನು ಸಂದೇಶ ಹೊತ್ತು ದೇವತೆಗಳ ಬಳಿ ಹೋಗಿ ಎಂದು ಕಳುಹಿಸುತ್ತಾನೆ. ಅವರಿಗೆ ಹಸಿರು ಬಣ್ಣದ ಗಿಣಿಯ ತಲೆ ಇರುತ್ತದೆ. ಶ್ರೀನಿವಾಸನು ವಿವಾಹದ ಬಗ್ಗೆ ದೇವತೆಗಳಿಗೆ ತಿಳಿಸಲು ಇಚ್ಛಿಸುತ್ತಾನೆ.

ಋಷಿಗಳಾದ ಸುಖರು ದೇವತೆಗಳನ್ನು ಭೇಟಿ ಮಾಡುತ್ತಾರೆ.

ವಿವಾಹದ ಸುದ್ದಿ ತಿಳಿದು ದೇವತೆಗಳಿಗೆ ತುಂಬಾ ಸಂತೋಷವಾಗುತ್ತದೆ. ದೇವತೆಗಳೆಲ್ಲರೂ ಸಹ ಶ್ರೀನಿವಾಸನ ಮುಂದೆ ಪ್ರತ್ಯಕ್ಷರಾಗಿ ಎಲ್ಲರೂ ಶ್ರೀನಿವಾಸನ ಮದುವೆಗೆ ಬರುವುದಾಗಿ ಪ್ರಮಾಣ ಮಾಡುತ್ತಾರೆ. ದೇವತೆಗಳು ಶ್ರೀನಿವಾಸನಿಗೆ ಕುಬೇರನಿಂದ ಹಣ ಮತ್ತು ಸಂಪತ್ತನ್ನು ಮದುವೆಗೆ ಆಗುವ ಖರ್ಚನ್ನು ಭರಿಸುವುದಕ್ಕಾಗಿ ಕೇಳುವುದಕ್ಕಾಗಿ ಹೇಳುತ್ತಾರೆ .
ಆಕಾಶ ರಾಜನು ಶ್ರೀನಿವಾಸನನ್ನು ಮದುವೆಗೆ ಆಹ್ವಾನಿಸುತ್ತಾನೆ.

 

ಶ್ರೀನಿವಾಸನಿಗೆ ಆಕಾಶ ರಾಜನು ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನ ಮಾಡುತ್ತಾನೆ. ಶ್ರೀನಿವಾಸನು ಸಂತೋಷಗೊಂಡು ಅದನ್ನು ತನ್ನ ತಾಯಿ ಎಂದೇ ಗೌರವಿಸುವ ವಕುಳ ಮಾಲಿಕ ಮಾತೆಗೆ ತೋರಿಸುತ್ತಾನೆ. ಅವಳು ಶ್ರೀನಿವಾಸನನ್ನು ಮದುವೆಯ ಖರ್ಚಿಗೆ ಏನು ಮಾಡುವುದು ? ಎಂದು ಕೇಳುತ್ತಾಳೆ. ಅವನು ಕುಬೇರನ ಬಳಿ ಹಣವನ್ನು ಸಾಲವಾಗಿ ಪಡೆಯುವುದಾಗಿ ತಿಳಿಸುತ್ತಾನೆ. ಆಗ ಶ್ರೀನಿವಾಸನು ಕುಬೇರನ ಬಗ್ಗೆ ಯೋಚಿಸುತ್ತಾನೆ.

ಶ್ರೀನಿವಾಸನು ಕುಬೇರನಿ೦ದ ಸಾಲವನ್ನು ಪಡೆಯುತ್ತಾನೆ.

ಕುಬೇರನು ಶ್ರೀನಿವಾಸನ ಮುಂದೆ ಪ್ರತ್ಯಕ್ಷನಾಗುತ್ತಾನೆ. ಶ್ರೀನಿವಾಸನು ಬಂಗಾರ ಮತ್ತು ಹಣವು ತನ್ನ ಮದುವೆಗೆ ಬೇಕೆಂದು ಕೇಳುತ್ತಾನೆ. ಈ ಸಾಲವನ್ನು ಶ್ರೀನಿವಾಸನು ಕುಬೇರನಿಗೆ ಕಲಿಯುಗದ ಅಂತ್ಯದ ಕೊನೆಗೆ ಕೊಟ್ಟು ತೀರಿಸುತ್ತೇನೆ ಎಂದು ಹೇಳುತ್ತಾನೆ. ಆಗ ಕುಬೇರನು ಮದುವೆಯ ಖರ್ಚಿಗೆ ಬೇಕಾಗಿರುವ ಹಣವನ್ನು ನೀಡುತ್ತಾನೆ .ಬ್ರಹ್ಮ ಮತ್ತು ಶಿವ ಇದಕ್ಕೆ ಸಾಕ್ಷಿಯಾಗಿ ಎರಡು ಅರಳಿ ಮರದ ರೂಪವನ್ನು ತಾಳಿ ನಿಲ್ಲುತ್ತಾರೆ. ಪುಷ್ಕರಣಿ ಬಾವಿಯ ಬಳಿ ದಡದಲ್ಲಿ ಈ ಅರಳಿ ಮರಗಳನ್ನು ಕಾಣಬಹುದು. ಈ ಅರಳಿ ಮರಗಳನ್ನು ಕಡಿದಾಗ ಅವುಗಳಿಂದ ರಕ್ತವೂ ಹೊರ ಬರುವುದು. ಅದ್ದರಿಂದ ಅರಳಿ ಮರವನ್ನು ಕಡಿಯುವುದನ್ನು ನಿಲ್ಲಿಸಿದರು ಈ ಎರಡು ಮರಗಳನ್ನು ನಾವು ತಿರುಮಲದಲ್ಲಿ ಪುಷ್ಕರಣಿಯ ದಡದಲ್ಲಿ ಈಗಲೂ ಸಹ ಕಾಣಬಹುದಾಗಿದೆ.

ಶ್ರೀನಿವಾಸನ ಮದುವೆಗೆ ಹೊರಡುತ್ತಾನೆ.

ಶ್ರೀನಿವಾಸನು ಪದ್ಮಾವತಿಯನ್ನು ಮದುವೆಯಾಗಲು ತನ್ನ ವಾಹನವಾದ ಗರುಡನ ಮೇಲೆ ಪ್ರಯಾಣವನ್ನು ಪ್ರಾರಂಭಿಸಿದನು.
ದೇವತೆಗಳು ಶ್ರೀನಿವಾಸನ ಮದುವೆಗೆ ಬರುತ್ತಾರೆ.
ಎಲ್ಲ ದೇವತೆಗಳು ಮತ್ತು ಋುಷಿಮುನಿಗಳು ಸಹ ಒಟ್ಟಾಗಿ ಸೇರಿ ಶ್ರೀನಿವಾಸನ ಮದುವೆಗೆ ಬರುತ್ತಾರೆ .

ಶ್ರೀನಿವಾಸನು ಪದ್ಮಾವತಿಯನ್ನು ವಿವಾಹವಾಗುತ್ತಾನೆ .

 

ದೇವತೆಗಳು ಪುಷ್ಪಗಳನ್ನು ಅರ್ಪಿಸುತ್ತಾರೆ. ಋುಷಿಮುನಿಗಳು ಆಶೀರ್ವದಿಸುತ್ತಾರೆ. ಇದರಿಂದ ಸಂತೋಷ ಭರಿತವಾಗಿ ಮದುವೆಯೂ ನೆರವೇರಿತು. ಕೊನೆಗೆ ಶ್ರೀನಿವಾಸ ಮತ್ತು ಪದ್ಮಾವತಿಯ ಮದುವೆಯು ವಿಜೃಂಭಣೆಯಿಂದ ನೆರವೇರಿತು.

ಋಷಿ ಅಗಸ್ತ್ಯರು ಹಬ್ಬವನ್ನು ಮಾಡುತ್ತಾರೆ.

ವಿವಾಹದ ನಂತರ ಋಷಿ ಮುನಿಗಳಾದ ಅಗಸ್ತ್ಯರು ಶ್ರೀನಿವಾಸ ಮತ್ತು ಪದ್ಮಾವತಿಗೆ ಹಬ್ಬವನ್ನು ದಂಪತಿಗಳಿಗೋಸ್ಕರ ಆಚರಿಸುತ್ತಾರೆ. ಅವರು ಆಶ್ರಮದಲ್ಲಿ ಆರು ತಿಂಗಳವರೆಗೂ ಅತಿಥಿಗಳಾಗಿ ಉಳಿಯುತ್ತಾರೆ.

ಲಕ್ಷ್ಮಿ ದೇವಿಯ ಕೋಪ .

ನಾರದ ಋಷಿ ಮುನಿಗಳು ಲಕ್ಷ್ಮೀ ದೇವಿಗೆ ಶ್ರೀನಿವಾಸನ ಮದುವೆಯ ಬಗ್ಗೆ ತಿಳಿಸುತ್ತಾರೆ. ಅವಳು ಕೊಲ್ಹಾಪುರದಲ್ಲಿ ತಪಸ್ಸನ್ನು ನಿಲ್ಲಿಸಿ ಅಗಸ್ತ್ಯರ ಆಶ್ರಮಕ್ಕೆ ಬಂದು ತಲುಪುತ್ತಾಳೆ. ಅಲ್ಲಿ ಶ್ರೀನಿವಾಸನನ್ನು ನ್ಯಾಯ ಬೇಕೆಂದು ಕೇಳುತ್ತಾಳೆ.

ಮಾಯಾ ಸೀತೆಯ ಇತಿಹಾಸ.

ರಾಮಾಯಣದಲ್ಲಿ ಮಾಯಾ ಸೀತೆಯ ಅಗ್ನಿಗೆ ಹಾರುತ್ತಾಳೆ. ಸೀತೆಯ ಬದಲಾಗಿ ಅಲ್ಲಿ ಪದ್ಮಾವತಿಯೆ ಮಾಯಾ ಸೀತೆಯ ಅವತಾರವಾಗಿ ಇರುತ್ತಾಳೆ. ವಿಷ್ಣುವೇ ರಾಮನ ಅವತಾರವಾಗಿದ್ದು ಲಕ್ಷ್ಮೀದೇವಿಯೇ ಮಾಯ ಸೀತೆಯಾಗಿ ಇರುತ್ತಾಳೆ. ಸೀತೆಯೂ ರಾಮನನ್ನು ಮಾಯಾ ಸೀತೆಯನ್ನು ಮದುವೆಯಾಗು ಎಂದು ಹೇಳುತ್ತಾಳೆ. ಆದರೆ ಆವನು ಇದನ್ನು ನಿರಾಕರಿಸುತ್ತಾನೆ. ಯಾಕೆಂದರೆ ಅವನು ಲಕ್ಷ್ಮೀ ದೇವಿಯೇ ತನ್ನ ಸಂಗಾತಿಯಾಗಬೇಕೆಂದು ಬಯಸುತ್ತಾನೆ. ರಾಮನು ಮುಂದಿನ ಜನ್ಮದಲ್ಲಿ ಈ ಮಾತನ್ನು ನೆರವೇರಿಸಿ ಕೊಡುವುದಾಗಿ ಹೀಗೆ ಹೇಳುತ್ತಾನೆ.

ಮುಂದಿನ ಜನ್ಮದಲ್ಲಿ ನಾನು ಶ್ರೀನಿವಾಸನಾಗಿ ಹುಟ್ಟಿ ಮಾಯಾ ಸೀತೆಯನ್ನು ಪದ್ಮಾವತಿಯಾಗಿ ವಿವಾಹವಾಗುತ್ತೇನೆ. ಆದ್ದರಿಂದ ಶ್ರೀನಿವಾಸನು ಇವೆಲ್ಲವನ್ನೂ ಲಕ್ಷ್ಮಿದೇವಿಗೆ ಒಮ್ಮೆ ನೆನಪಿಸಿಕೊಳ್ಳಲು ಹೇಳುತ್ತಾನೆ. ಹಿಂದೆ ನಡೆದಿದ್ದೆಲ್ಲವನ್ನೂ ನೆನಪಿಸಿಕೊಂಡಾಗ ಲಕ್ಷ್ಮೀದೇವಿ ಶಾಂತಳಾಗುತ್ತಾಳೆ.
ಚಕ್ರವರ್ತಿ ತೊಂಡಮನು ದೇವಸ್ಥಾನವನ್ನು ಕಟ್ಟಿಸಿದ್ದನು.

ಚಕ್ರವರ್ತಿ ತೊಂಡಮನು ಒಂದು ದೇವಸ್ಥಾನವನ್ನು ಆಂಧ್ರಪ್ರದೇಶದ ತಿರುಮಲದಲ್ಲಿ ಕಟ್ಟಿಸುತ್ತಾನೆ. ಈ ದೇವಸ್ಥಾನದಲ್ಲಿ ಶ್ರೀನಿವಾಸನನ್ನು ಬಾಲಾಜಿ ಎಂಬ ಹೆಸರಿನಿಂದ ಲಕ್ಷ್ಮೀ ದೇವಿಯನ್ನು ನನ್ನ ಹೃದಯದಲ್ಲಿ ಇರಿಸಿಕೊಂಡು ಭಕ್ತಾದಿಗಳಿಗೆ ಆಶೀರ್ವದಿಸುತ್ತಾನೆ.

 

ಪದ್ಮಾವತಿ ದೇವಿಯ ತಿರುಚಾನೂರು ಎಂಬ ಎಂಬ ಸ್ಥಳದಲ್ಲಿ ನೆಲೆಸಿದ್ದಾಳೆ. ಅಲ್ಲಿ ಅವಳು ತನ್ನ ಭಕ್ತಾದಿಗಳಿಗೆ ಆಶೀರ್ವದಿಸುತ್ತಾಳೆ . ದೇವಸ್ಥಾನದಲ್ಲಿ ರಾತ್ರಿ ಬಾಗಿಲು ಮುಚ್ಚಿದ ಮೇಲೆ ಶ್ರೀನಿವಾಸನು ತಿರುಚಾನೂರಗೆ ಪದ್ಮಾವತಿಯ ಬಳಿ ಹೋಗುತ್ತಾನೆ ಎಂದು ನಂಬಲಾಗಿದೆ.

ವಕುಳ ಮಾಲಿಕ ತಾಯಿಗೂ ಕೂಡ ಮೋಕ್ಷ ದೊರೆಯುವುದು. ಶ್ರೀನಿವಾಸನು ಅವಳನ್ನು ತಾಡಪಳ್ಳಿ ದೇವಸ್ಥಾನದ ಅಡುಗೆ ಮನೆಯ ಬಾಗಿಲ ಬಳಿ ಕುಳಿತುಕೊಳ್ಳಲು ಹೇಳುತ್ತಾನೆ. ಭಕ್ತಾದಿಗಳು ಏನನ್ನು ಅರ್ಪಿಸುತ್ತಾರೆ ಎಂದು ನೋಡಲು ಹೇಳುತ್ತಾನೆ .ಭಕ್ತಾದಿಗಳ ವಕುಳ ಮಾಲಿಕ ತಾಯಿಯ ಮೂರ್ತಿಯನ್ನು ತಾಡಪಳ್ಳಿ ಬಾಗಿಲ ಬಳಿ ಈಗಲೂ ಸಹ ಕಾಣಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top