fbpx
ಸಮಾಚಾರ

17 ವರ್ಷದ ಈ ಬಾಲಕಿಯ ಸಮಾಜಸೇವೆ: ಬಡ ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹುಡುಗಿ..!

17 ವರ್ಷದ ಈ ಬಾಲಕಿಯ ಸಮಾಜಸೇವೆ: ಬಡ ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹುಡುಗಿ..!

 

 

ಸಮಾಜ ಸೇವೆ ಎನ್ನುವುದು ಇಂದಿನ ದಿನಗಳಲ್ಲಿ ಹೆಚ್ಚು ದುರುಪಯೋಗಪಡಿಸಿಕೊಂಡ ಪದವಾಗಿ ಮಾರ್ಪಟ್ಟಿದೆಯೆಂದರೆ ತಪ್ಪಾಗಲಾರದು. ಏಕೆಂದರೆ ಈ ಕಾಲದಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಹೀಗಿದ್ದರೂ ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕವಾಗಿ ಸಾಮಾಜಿಕ ಸುಧಾರಣೆಗಾಗಿ ಸೇವೆ ಮಾಡಲು ಮುಂದಾಗಿರುತ್ತಾರೆ..ಇವತ್ತಿನ ಕತೆಯು ಕೂಡ ಅಂತದೇ.

 

 

ನಾವು ಜಮ್ಮುಕಾಶ್ಮೀರದ ಲೆಹ್ ಜಿಲ್ಲೆಯಲ್ಲಿನ ದೂರದಲ್ಲಿರುವ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಬಡ ಸ್ಲಮ್ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ 17 ವರ್ಷ ವಯಸ್ಸಿನ ಹುಡುಗಿಯ ಬಗ್ಗೆ ಮಾತನಾಡುತ್ತೇವೆ. ಆಕೆಯ ಹೆಸರು ಅನನ್ಯ ಸಲುಜಾ, ಅವರ ಈ ಸ್ಪೂರ್ತಿದಾಯಕ ಕೆಲಸಕ್ಕೆ ತನ್ನ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾಗ ನಡೆದ ಘಟನೆಯೇ ಕಾರಣವಾಗಿತ್ತು.. ಎಲ್ಲಾ ವಿದ್ಯಾರ್ಥಿಯಂತೆ, ಅನ್ಯಾಯಗೂ ಕೂಡ ತನ್ನ ವಿದ್ಯಾಭ್ಯಾಸ ಮತ್ತು ಅಂಕಗಳು ಮಾತ್ರ ಗಮನವಿತ್ತು ಆದರೊಮ್ಮೆ ಅವರ ಶಾಲೆಯು ಪರೀಕ್ಷೆಯ ಅಂಗವಾಗಿ ಒಂದು ಸಮುದಾಯ ಸೇವಾಕಾರ್ಯ ಮಾಡುವಂತೆ ಪ್ರಾಜೆಕ್ಟ್ ನೀಡಿತ್ತು..ಈ ಘಟನೆ ಅವರ ಆಲೋಚನೆಯನ್ನೇ ಬದಲಿಸಿತು.

 

 

ಅವರು 2015 ರಲ್ಲಿ ಶ್ರೀ ರಾಮ್ ಶಾಲೆ, ಮೌಲ್ಸಾರಿಯಲ್ಲಿ ಓದುತ್ತಿದ್ದಾಗ ಅವರು ಪರೀಕ್ಷೆಯಲ್ಲಿ ಅಂಕಗಳನ್ನು ಸಂಪಾದಿಸಿಕೊಳ್ಳುವ ಉದ್ದೇಶದಿಂದ ಬಡ ಮಕ್ಕಳಿಗೆ ಪಾಠ ಹೇಳಿಕೊಡಲು ಲೇಕ್ ಜಿಲ್ಲೆಯ ಎಲ್ಲಾ ಲಿಕ್ಸೆ, ಟರ್ಟುಕ್ ಮತ್ತು ಟೈಲಿಂಗ್ಗ್ರಾ ಎಂಬ ಮಗಳಿಗೆ ಭೇಟಿ ನೀಡಿದರು. ತನ್ನ ಪಠ್ಯಕ್ರಮಕ್ಕಾಗಿ ಕೆಲವು ಬುದ್ದಿಮಾಂದ್ಯ ಮಕ್ಕಳಿಗೆ ಅಕ್ಷರ ಕಲಿಸಲು ಹೋಗಿದ್ದ ಅನನ್ಯಾಗೆ ಆ ದುರ್ಬಲ ಮಕ್ಕಳಿಗೆ ಯಾವಾಗಲೂ ಪಾಠಮಾಬೇಕು ಎಂದು ಅನಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಅವಳು ಹೇಳಿಕೊಡುತ್ತಿದ್ದುದನ್ನು ಆ ಮಕ್ಕಳು ಖುಷಿಯಿಂದ ಕಲಿಯುತ್ತದ್ದವು.

 

 

ಮಕ್ಕಳಿಗೆ ಶಿಕ್ಷಣ ನೀಡಬೇಕೆನ್ನುವ ಆಸೆಯಲ್ಲಿದ್ದ ಅನನ್ಯ ತನ್ನ ಹಳೆಯ ಶಿಕ್ಷಕ ಸುಜಾತ ಸಾಹು ಅವರನ್ನು ಭೇಟಿಯಾಗಿ. ಅವರು ನಡೆಸುತ್ತಿದ್ದ 17,000 ಫೀಟ್ ಅನ್ನುವ ಫೌಂಡೇಷನ್ ನೆರವಿನಿಂದ ಲೇಹ್ ಮತ್ತು ಲಡಾಕ್​ನಲ್ಲಿ ಅನನ್ಯ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದಳು..ರಜಾ ದಿನಗಳಲ್ಲಿ ಲೇಹ್ ಮತ್ತು ಲಡಾಕ್,ಲಿಕ್ಸ್ಟೇ, ತುರ್​ತುರ್​​ ಮತ್ತು ಟಿಯಾಲಿಂಗ್​ನಂತಹ ಕುಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪಾಠ ಮಾಡಿವುದನ್ನು ಅನನ್ಯ ರೂಡಿಸಿಕೊಂಡಳು. 2016ರ ಬೇಸಿಗೆ ರಜಾದಲ್ಲಿ 17,000 ಫೀಟ್ ಅನ್ನುವ ಫೌಂಡೇಷನ್ ನೆರವಿನಿಂದ ಫಂಡ್ ಕಲೆಕ್ಟ್ ಮಾಡಿ ಲೇಹ್ ಜಿಲ್ಲೆಯಲ್ಲಿಯ ಮಾಥೋ ಹಳ್ಳಿಯ ಮಕ್ಕಳಿಗಾಗಿ ಆಟ ಮೈದಾನ ರೂಪಿಸಲು ಅವರಿಗೆ ಸಹಾಯ ಮಾಡಿದ್ದಳು.

 

 

ಕೆಲವು ಎನ್.ಜಿ.ಓ ಗಳ ಸಹದಿಂದ ಮಕ್ಕಳ ಕಲ್ಯಾಣಕ್ಕೆಂದು ನಿಧಿ ಸಂಗ್ರಹಿಸಲು ಪ್ರಾರಂಭಿಸಿದಳು.ಸದ್ಯ ಆ ಕುಗ್ರಾಮಗಳ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಂಥಾಲಯಗಳನ್ನು ನಿರ್ಮಿಸಲು ಹಣಕಾಸಿನ ನಿಧಿಯನ್ನು ಸಂಗ್ರಹಿಸುತ್ತಿದ್ದಾಳೆ. ಈಗಾಗಲೇ 19 ಗ್ರಂಥಾಲಯಗಳನ್ನು ಸ್ಥಾಪಿಸುವಷ್ಟು ಏನಂದ್ರೆ ಸುಮಾರು ಇಪ್ಪತ್ತು ಲಕ್ಷ ಹಣವನ್ನ ಅನನ್ಯ ಸಂಗ್ರಹಿಸಿದ್ದಾಳೆ..ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಯೋಚನೆಯಲ್ಲಿ ಅನನ್ಯ ಇದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top