ಸ್ಪಿನ್ ಬೌಲರ್ ಆಗಿ ಬದಲಾದ ಲಸಿತ್ ಮಾಲಿಂಗ್ ತನ್ನ ಸ್ಪಿನ್ ಮೋಡಿಯಿಂದ 3 ವಿಕೆಟ್’ಗಳಿಕೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಬೌಲರ್ಗಳ ಸಾಲಿನಲ್ಲಿ ನಿಲ್ಲುವ ಶ್ರೀಲಂಕಾದ ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಸ್ಪಿನ್ ಬೌಲಿಂಗ್ ಗೆ ಇಳಿದಿದ್ದಾರೆ. ಇಷ್ಟು ದಿನ ತನ್ನ ವಿಶಿಷ್ಟ ಶೈಲಿಯ ವೇಗದ ಬೌಲಿಂಗ್ ಹಾಗೂ ಯಾರ್ಕರ್ ಎಸೆತದ ಮೂಲಕ ವಿಶ್ವ ಬ್ಯಾಟ್ಸ್ಮನ್ಗಳ ನಿದ್ದೆಗೆಡಿಸಿ ತನ್ನ ಕೈಚಳಕವನ್ನು ತೋರಿಸಿದ್ದ ಮಾಲಿಂಗ ಈಗ ತನ್ನ ಸ್ಪಿನ್ ಪ್ರತಿಭೆಯನ್ನು ಕೂಡ ತೋರಿಸಿದ್ದಾರೆ. ಮುಂದೆ ಓದಿ
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ದೇಸಿ ಪಂದ್ಯವೊಂದರಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೇಜೆಲಂಕಾ ತಂಡದ ಪರ ಕಣಕ್ಕಿಳಿದಿದ್ದ ಮಾಲಿಂಗ, ಎಲ್’ಬಿ ಫೈನಾನ್ಸ್ ತಂಡದ ವಿರುದ್ಧ ಟೂರ್ನಿಮೆಂಟ್ ನ ಫೈನಲ್’ ಪಂದ್ಯದಲ್ಲಿ 4 ಓವರ್ ಸ್ಪಿನ್ ಬೌಲಿಂಗ್ ಮಾಡಿ ಕೇವಲ 24 ರನ್ ನೀಡಿ ಮೂರು ವಿಕೆಟ್ಗಳನ್ನು ಉರುಳಿಸಿದ್ದಾರೆ. ಆಟಕ್ಕೆ ಮಳೆ ಅಡ್ಡಿಪಡಿಸಬಹುದು ಎಂಬ ನಿರೀಕ್ಷೆ ಇದ್ದ ಕಾರಣ, ಬೇಗನೆ ಓವರ್’ಗಳನ್ನು ಮುಗಿಸಲು ಮಾಲಿಂಗ ವೇಗದ ಬದಲು ಸ್ಪಿನ್ ಮಾಡಲು ನಿರ್ಧರಿಸಿದರು ಎಂದು ತಿಳಿದುಬಂದಿದೆ..
ಈ ಹಿಂದೆ ಮನೋಜ್ ಪ್ರಭಾಕರ್, ಗುರಿಂದರ್ ಸಂಧು, ಸೊಹೈಲ್ ತನ್ವೀರ್ ಸೇರಿದಂತೆ ಕೆಲವು ವೇಗದ ಬೌಲರ್ ಗಳು ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ವೇಗದ ಬೌಲಿಂಗ್ ಅನ್ನು ಬಿಟ್ಟು ಸ್ಪಿನ್ ಬೌಲಿಂಗ್ ಮಾಡುವ ಸಾಹಸಕ್ಕೆ ಕೈಹಾಕಿದ್ದರು.. ಲಸಿತ್ ಮಾಲಿಂಗರ ಸ್ಪಿನ್ ಬೌಲಿಂಗ್ ಅನ್ನು ಇಲ್ಲಿ ನೋಡಿ.
#Malinga the slinger turned Malinga the spinner as the paceman turned to off-spin, in a domestic T20 match. 🏏
[📹: Cricket Aus] pic.twitter.com/7gjIr8eiIg
— AmMaD (@Cob_Adder) October 31, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
