fbpx
ಬಿಗ್ ಬಾಸ್

ಜಾತಿನಿಂದನೆ ವಿಚಾರವಾಗಿ ಬಿಗ್’ಬಾಸ್ ಮನೆಯಿಂದಲೇ ಬೋವಿ ಜನಾಂಗದವರಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು.

ಜಾತಿನಿಂದನೆ ವಿಚಾರವಾಗಿ ಬಿಗ್’ಬಾಸ್ ಮನೆಯಿಂದಲೇ ಬೋವಿ ಜನಾಂಗದವರಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು.

 

 

ಬೋವಿ ಯುವ ವೇದಿಕೆ ಅಧ್ಯಕ್ಷ ಬಿ.ಜಯಕುಮಾರ್ “ಅ.28ರಂದು ನಡೆದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರುರವರು ಮತ್ತೊಬ್ಬ ಸ್ಪರ್ಧಿ ದಿವಾಕರ್ ಅವರನ್ನು ‘ವಡ್ಡ’ ಎಂದು ಮೂದಲಿಸಿದ್ದಾರೆ.. ಅಲ್ಲದೆ ‘ನಿರ್ಲಕ್ಷ್ಯತನಕ್ಕೆ’ ‘ವಡ್ಡ’ ಎಂದು ವ್ಯಾಖ್ಯಾನವನ್ನೂ ಉಪಯೋಗಿಸಲಾಗಿದೆ ಎಂದು ಆರೋಪಿಸಿದ್ದರು. ಮತ್ತು ಈ ಕುರಿತು ಚಾನೆಲ್ ಮತ್ತು ಸಿಹಿ ಕಹಿ ಚಂದ್ರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

 

 

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂತಹ ಜಾತಿನಿಂದನೆಗೆ ಅವಕಾಶ ಕೊಡಬಾರದಿತ್ತು. ಬೋವಿ ಜಾತಿಯನ್ನು ನಿಂದಿಸಿದ ಸಿಹಿಕಹಿ ಚಂದ್ರುರವರು ಕೂಡಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದ ಬೋವಿ ಸಮುದಾಯದ ಒತ್ತಾಯದ ಮೇರೆಗೆ ನೆನ್ನೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರುರವರು ಬಿಗ್’ಬಾಸ್ ಮನೆಯಿಂದಲೇ ಬೋವಿ ಜನಾಂಗದವರಿಗೆ ಕ್ಷಮೆ ಕೇಳಿದ್ದಾರೆ.

 

 

ಚಂದ್ರುರನ್ನು ಕನ್ಫೆಷನ್ ರೂಮ್ ಗೆ ಕರೆದ ಬಿಗ್ ಬಾಸ್ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಲು ಹೇಳಿದಾಗ “ನಾನು ಕಳೆದವಾರ ಯಾವುದೇ ಉದ್ದೇಶವಿಲದೆ ಆಡಿದ ಒಂದು ಮಾತು ಒಂದು ಜನಾಂಗಕ್ಕೆ ನೋವನ್ನುಂಟು ಮಾಡಿದೆ ಎಂದು ತಿಳಿದು ನನಗೂ ಕೂಡ ತುಂಬಾ ನೋವಾಗಿದೆ. ನಾನು ಯಾರನ್ನೂ ಹಂಗಿಸೋ ಉದ್ದೇಶ ಇಟ್ಕೊಂಡು ಆ ಮಾತು ಆಡಿಲ್ಲ. ಯಾವ ಜನಾಂಗವನ್ನು ನೋವಿಸಬೇಕು ಎಂದು ಉದ್ದೇಶ ಇಟ್ಕೊಂಡು ಆ ಮಾತಾಡಲಿಲ್ಲ, ಆ ಪದ ಬಳಸಿದ್ದು ನನ್ನಿಂದ ತಪ್ಪಾಗಿದೆ ಅದಕ್ಕೆ ದಯವಿತ್ತು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಕ್ಷಮೆಯಿರಲಿ ” ಎಂದು ಚಂದ್ರು ಕ್ಷಮೆ ಕೋರಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top