fbpx
ಆರೋಗ್ಯ

ಕಡಿಮೆ ಖರ್ಚಿನಲ್ಲಿ ದುಬಾರಿ ಖಾಯಿಲೆಗಳ ಚಿಕಿತ್ಸೆಗೆ ಸುಲಭವಾಗಿ ಮಾಡಿಸೋ ಸರ್ಕಾರಿ ಯೋಜನೆ ‘ಯಶಸ್ವಿನಿ’ ಬಗ್ಗೆ ಪ್ರತಿಯೊಬ್ಬ ನಾಗರೀಕನೂ ತಿಳ್ಕೊಳ್ಳೆಬೇಕಾದ ವಿಷಯಗಳು

ಕರ್ನಾಟಕದಲ್ಲಿ ಒಂದು ದಶಕದ ಹಿಂದೆ ಆರಂಭಿಸಿದ ಯಶಸ್ವಿನಿ ಯೋಜನೆಯು ಇಡೀ ದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದ್ದು ದೇಶದಾದ್ಯಂತ ಒಂದು ಹೊಸ ಅಲೆಯನ್ನೇ ಸೃಷ್ಟಿಸಿ ಪ್ರತಿಯೊಬ್ಬನ ಆರೋಗ್ಯವೇ ಭಾಗ್ಯ ಎಂಬುವಷ್ಟರ ಮಟ್ಟಿಗೆ ಚಿಂತನೆ ನಡೆಸಿ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಆರೋಗ್ಯ ಸುರಕ್ಷಾ ಯೋಜನೆಗಳನ್ನು ಸ್ಥಾಪಿಸಲು ಕಾರಣವಾಗಿದೆ . ಇಡೀ ವಿಶ್ವದಲ್ಲೇ ರೈತರ ಏಳಿಗೆಗಾಗಿ ಆರೋಗ್ಯ ರಕ್ಷಣೆಗಾಗಿ ಸ್ಥಾಪಿಸಿದ ಏಕೈಕ ಯೋಜನೆಯಾಗಿದೆ .

ಧ್ಯೇಯ

ಸಹಕಾರಿ ರೈತರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಮತ್ತು ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಧ್ಯೇಯವನ್ನು ಹೊಂದಿದೆ .

ಯೋಜನೆಯ ವಿಶೇಷತೆಗಳು

 

      ರೈತರು ಆರೋಗ್ಯ ರಕ್ಷಣೆಗಾಗಿ ದುಬಾರಿ ಚಿಕಿತ್ಸೆಯನ್ನು ಮಾಡಿಸಲು ಲೇವದೇವಿಗಾರರ ಮೊರೆಹೋಗುವುದು ಅಥವಾ ಬ್ಯಾಂಕುಗಳಿಂದ ಪಡೆದ ಬೆಳೆಸಾಲವನ್ನು ಚಿಕಿತ್ಸೆಗಾಗಿ ಉಪಯೋಗಿಸುವುದು ಮತ್ತು ಅವರಲ್ಲಿರುವ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಚಿಕಿತ್ಸೆ ಪಡೆಯುವುದು ಇಂತಹ ರೈತರ ಸಂಕಷ್ಟವನ್ನು ಬಗೆ ಹರಿಸುವ ಸಲುವಾಗಿ ಮತ್ತು ದುಬಾರಿ ಶಸ್ತ್ರಚಿಕಿತ್ಸೆಗಳಿಗೆ ಹಣ ಒದಗಿಸುವ ಕಷ್ಟವನ್ನು ಪರಿಹರಿಸಲು ಕರ್ನಾಟಕ ಸರ್ಕಾರ 2003 ಜೂನ್ ತಿಂಗಳಲ್ಲಿ ಯಶಸ್ವಿನಿ ಯೋಜನೆಯನ್ನು ಆರಂಭಿಸಿತು. ವಾರ್ಷಿಕವಾಗಿ 2003ರಲ್ಲಿ ರೂ 60/- ವಂತಿಗೆಯೊಂದಿಗೆ ಸ್ಥಾಪಿತವಾಗಿ ಈಗ ಪ್ರತಿಯೊಬ್ಬ ವ್ಯಕ್ತಿ ರೂ 250 /- ವಾರ್ಷಿಕ ವಂತಿಗೆ ಪಾವತಿಸಿ ಯಶಸ್ವಿನಿ ಟ್ರಸ್ಟನಿಂದ ಗುರುತಿಸಿದ 823 ಶಸ್ತ್ರಚಿಕಿತ್ಸೆಗಳನ್ನು ಪಡೆಯಬಹುದಾಗಿದ್ದು ಯೋಜನೆಯನ್ನು ಸಹಕಾರಿ ತತ್ವದ ಅಡಿಯಲ್ಲಿ “ಎಲ್ಲಾರು ಒಬ್ಬನಿಗಾಗಿ ಒಬ್ಬ ಎಲ್ಲಾರಿಗಾಗಿ” ಎಂಬ ಸಹಕಾರ ತತ್ವದ ಅಡಿಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ .

      ಯೋಜನೆಯಡಿಯಲ್ಲಿ ಯಾವುದೇ ಸಹಕಾರ ಸಂಘದ ಸದಸ್ಯ ಆ ಸಾಲಿನ ಜೂನ್ 1 ರಿಂದ 3 ತಿಂಗಳ ಮೊದಲು ಸದಸ್ಯನಾಗಿರುತ್ತಾರೋ ಅವರು ತಮ್ಮೊಂದಿಗೆ ತಮ್ಮ ಕುಂಟುಬದ ಸದಸ್ಯರನ್ನು ಯಶಸ್ವಿನಿ ಯೋಜನೆಯಲ್ಲಿ ನೋಂದಯಿಸಬಹುದು. ಕುಟಂಬದ ಸದಸ್ಯರು ಎಂದರೆ ತಂದೆ, ತಾಯಿ, ಹೆಂಡತಿ, ಮಕ್ಕಳು, ಮದುವೆಯಾಗದ ಹೆಣ್ಣು ಮಗಳು ಮತ್ತು ಅವಿಭಕ್ತ ಕುಟುಂಬದ ಸದಸ್ಯರು. ಆದರೆ ಮದುವೆಯಾಗಿ ಗಂಡನ ಮನೆಗೆ ತೆರಳಿದ ಹೆಣ್ಣು ಮಕ್ಕಳನ್ನು ಹೊರತುಪಡಿಸಿ ವಾರ್ಷಿಕ ವಂತಿಗೆ ಪಾವತಿಸಿ ಸದಸ್ಯರಾಗಬಹುದಾಗಿದೆ. .

 

ವಿಶೇಷ ವೈಶಿಷ್ಟ್ಯಗಳು

 

  • ಯೋಜನೆಯಡಿ 14 ವೈದ್ಯಕೀಯ ವಿಭಾಗಗಳಲ್ಲಿ 823 ಗುರುತಿಸಿದ ಶಸ್ತ್ರಚಿಕಿತ್ಸೆಗಳನ್ನು ರಾಜ್ಯದದ್ಯಾಂತ ಇರುವ 496 ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ .
  • ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಮೊದಲೇ ಇರುವ ಖಾಯಿಲೆಗಳಿಗೆ ನಿರ್ಭಂದವಿರುವುದಿಲ್ಲ .
  • ರೈತರು ಈ ಯೋಜನೆಯ ಲಾಭ ಪಡೆಯಲು ಕನಿಷ್ಠ 3 ತಿಂಗಳು ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದರು ಇರಬೇಕು .
  • ಪ್ರತಿ ಸದಸ್ಯರೂ ಗರಿಷ್ಟ 1.25 ಲಕ್ಷದವರೆಗಿನ ಶಸ್ತ್ರಚಿಕಿತ್ಸೆ ಒಂದು ಬಾರಿ ಆಸ್ಪತ್ರೆಗೆ ದಾಖಲಾದಲ್ಲಿ ಅನೇಕ ಬಾರಿ ದಾಖಲಾದಲ್ಲಿ ಗರಿಷ್ಟ 2.00 ಲಕ್ಷದವರೆಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿನಿ ಟ್ರಸ್ಟನಿಂದ ಗುರುತಿಸಿದ ನೆಟ್ ವರ್ಕ್ ಆಸ್ಪತ್ರೆಯಲ್ಲಿ ಒಂದು ವರ್ಷದಲ್ಲಿ ನಗದು ರಹಿತ ಶಸ್ತ್ರಚಿಕಿತ್ಸೆಯನ್ನು ಪಡೆಯಬಹುದಾಗಿದೆ..
  • ತುರ್ತು ಪರಿಸ್ಥಿತಿ ಶಸ್ತ್ರ ಚಿಕಿತ್ಸೆಗಳಾದ ನೀರಿನಲ್ಲಿ ಮುಳುಗಡೆ , ನಾಯಿಕಡಿತ , ಹಾವು ಕಡಿತ , ಹೋರಿ ಇರಿತ , ವಿದ್ಯುತ್ ಶಾಖ್ , ವ್ಯವಸಾಯ ಉಪಕರಣಗಳಿಂದ ಗಾಯಗಳು ಇತ್ಯಾದಿಗಳಿಗೆ ಯಶಸ್ವಿನಿ ಯೋಜನೆಯಡಿಯಲ್ಲಿ ಚಿಕಿತ್ಸೆ ಲಭ್ಯವಿದೆ .
  • 2013-14 ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯಡಿ ಬರುವ ಹೃದಯ ಮತ್ತು ಅಸ್ತಿ ಶಸ್ತ್ರ ಚಿಕಿತ್ಸೆಗಳಲ್ಲಿ ಅವಶ್ಯವಿರುವ ಇಂಪ್ಲಾಂಟ್ಸ್ ಗಳನ್ನು ಟ್ರಸ್ಟ್ ನಿಂದಲೇ ಒದಗಿಸುವ ನಿರ್ಧಾರ ಕೈಗೊಂಡ 01-10-2013 ರಿಂದ ಜಾರಿಗೆ ತಂದಿದೆ.
  • 2013-14 ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯಡಿ ಕ್ಯಾನ್ಸರ್ ರೋಗಕ್ಕೆ ಅಗತ್ಯವಿರುವ ” Radiation Therapy” ವಿಕಿರಣ ಚಿಕಿತ್ಸೆ ಗಳನ್ನು 01-10-2013 ಸೇರ್ಪಡೆ ಮಾಡಲಾಗಿದೆ. .

      ಒಬ್ಬ ವ್ಯಕ್ತಿ ಗ್ರಾಮೀಣ ಸಹಕಾರ ಸಂಘಗಳಾದ ಸಹಕಾರ ಕೃಷಿಪತ್ತಿನ/ ಕೃಷಿಯೇತರ ಸಹಕಾರ ಸಂಘಗಳ, ವಿವಿದ್ಧೋದ್ಧೇಶ ಸಹಕಾರ ಸಂಘಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ, ತೋಟಗಾರಿಕಾ ಸಹಕಾರ ಸಂಘಗಳ (ಕೃಷಿ/ತೋಟಗಾರಿಕೆ/ಹೈನುಗಾರಿಕೆ/ ಹೈನುಗಾರಿಕೆ ಉತ್ಪನ್ನಗಳ ಸಂಸ್ಕರಣ ಸಹಕಾರ ಸಂಘಗಳೂ ಸೇರಿ), ಸಹಕಾರಿ ಸಕ್ಕರೆ ಕಾರ್ಖಾನೆಗಳ, ಸಹಕಾರಿ ಭೂ ಅಭಿವೃದ್ದಿ ಬ್ಯಾಂಕುಗಳ, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಮೀನುಗಾರರ, ಬೀಡಿ ಕಾರ್ಮಿಕರ ಮತ್ತು ನೇಕಾರ ಸಹಕಾರ ಸಂಘ ಇತ್ಯಾದಿಗಳೊಂದರ ಸದಸ್ಯನಾಗಿ ಕನಿಷ್ಠ ಆರು ತಿಂಗಳಾಗಿದ್ದಲ್ಲಿ, ಆತನು ಹಾಗೂ ಅವನ ಕುಟುಂಬದ ಎಲ್ಲಾ ಸದಸ್ಯರು ಪ್ರತಿವರ್ಷ ನಿಗದಿತ ವಂತಿಗೆಯನ್ನು ಪಾವತಿ ಮಾಡುವ ಮೂಲಕ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬಹುದು .

ಅಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶದ ಚಲನಚಿತ್ರಕಲಾವಿದರುಗಳ, ರಂಗಭೂಮಿಲಾವಿದರುಗಳ, ಜಾನಪದಕಲಾವಿದರುಗಳು ಸಾಂಸ್ಕೃತಿಕ ಅಭಿವೃದ್ದಿ ಸಹಕಾರ ಸಂಘಗಳು, ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದು ಕಾಫಿ ಬೆಳೆಯುವ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಪ್ಲಾಂಟೇಷನ್ ಕಾರ್ಮಿಕರುಗಳು, ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ರೈತ ಪ್ರತಿನಿಧಿಗಳು, ರಾಜ್ಯದ ಪತ್ರಕರ್ತರ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಗ್ರಾಮೀಣ ಪತ್ರಕರ್ತರಗಳು (ಪಟ್ಟಣ ಪ್ರದೇಶದ ಪತ್ರಕರ್ತ ಸದಸ್ಯರನ್ನು ಹೊರತುಪಡಿಸಿ ).

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಅಲೆಮಾರಿ, ಅರೆ-ಅಲೆಮಾರಿ ಜನಾಂಗಗಳ ವಿವಿದ್ದೋದ್ದೇಶ ಸಹಕಾರಿ ಸಂಘಗಳು ಹಾಗೂ ಇತರೆ ವಿವಿದ್ದೋದ್ದೇಶ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪು ಮತ್ತು ಸ್ತ್ರೀ-ಶಕ್ತಿ ಗುಂಪುಗಳ ಸದಸ್ಯರು, ಗ್ರಾಮೀಣ ಪ್ರದೇಶದಲ್ಲಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಲೈಂಗಿಕ ಅಲ್ಪಸಂಖ್ಯಾತರು (ಮಂಗಳ ಮುಖಿಯರು), ಅಲ್ಲದೇ ಸಹಕಾರ ಸಂಘ/ಬ್ಯಾಂಕ್ ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲಿರುವ ಸ್ವ-ಸಹಾಯ ಗುಂಪು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು.

2014-15ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ನಗರ ಸಹಕಾರಿಗಳಿಗೂ ವಿಸ್ತರಿಸಲಾಗಿದ್ದು ನಗರ ಯಶಸ್ವಿನಿ ಯೋಜನೆಯ ಸಂಕ್ಷಿಪ್ತ ವಿವರ ಹೀಗಿದೆ.

 

ಯೋಜನೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ಕಾರ್ಯನಿರತ ಸಹಕಾರ ಸಂಘದ ಸದಸ್ಯನು, ಸದಸ್ಯನಾಗಿ ಮೂರು ತಿಂಗಳು ಗತಿಸಿದ್ದರೆ ಈ ಯೋಜನೆಯಡಿ ಸದಸ್ಯನಾಗಬಹುದು ಮತ್ತು ಅವರ ಕುಟುಂಬದವರನ್ನು ಸಹ ಯೋಜನೆಯಡಿ ನೋಂದಾಯಿಸಬಹುದು .

ಪ್ರತಿಯೊಬ್ಬ ಸದಸ್ಯರು ವಾರ್ಷಿಕ ವಂತಿಗೆಯಾಗಿ ರೂ. 710/- ಪಾವತಿಸಬೇಕು ಮತ್ತು ಸದಸ್ಯರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಾಗಿದ್ದರೆ ಅವರ ‍ಮತ್ತು ಅವರ ಕುಟುಂಬ ವರ್ಗದ ಸದಸ್ಯರಿಗೆ ರೂ.510/- ವಂತಿಗೆಯನ್ನು ನಗರ ಸಹಕಾರ ಸಂಘಗಳಿಗೆ ಪಾವತಿಸಿ ನಗರ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಉಳಿದ ವಂತಿಗೆ ರೂ.200/-ಗಳನ್ನು ಸರ್ಕಾರವು ಎಸ್.ಸಿ.ಪಿ/ಟಿ,ಎಸ್.ಪಿ ಫಂಡ್ ನಿಂದ ಭರಿಸಲಿದೆ .

ನಗರ ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ಹಾಗೂ ಗುರುತಿನ ಕಾರ್ಡಗಳನ್ನು ಸಹಕಾರ ಸಂಘಗಳ ಸದಸ್ಯರು ಆಯಾ ಸಹಕಾರ ಸಂಘಗಳಲ್ಲೇ ಪಡೆಯಬಹುದು.

ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ಸದಸ್ಯರು ಜೂನ್ 1,2014 ರಿಂದ ಯಶಸ್ವಿನಿ ಟ್ರಸ್ಟ್ ಗುರುತಿಸಿದ ಚಿಕಿತ್ಸೆ ಗಳನ್ನು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಬಹುದು

ಸಹಾಕರ ಸಂಘದ ಸದಸ್ಯರು ತಮ್ಮ ಜೀವಾತಾವಧಿಯವರೆಗೆ ಈ ಯೋಜನೆಯಡಿ ನೋಂದಾಯಿಸಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top