fbpx
ಬಿಗ್ ಬಾಸ್

ಬಿಗ್’ಬಾಸ್’ ಮುಗಿದ ಕೂಡಲೇ ಚಂದನ್ ಶೆಟ್ಟಿ ಮದುವೆ..! ವಧು ಯಾರು?

ಬಿಗ್’ಬಾಸ್’ ಮುಗಿದ ಕೂಡಲೇ ಚಂದನ್ ಶೆಟ್ಟಿ ಮದುವೆ..! ವಧು ಯಾರು?

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ..ಒಂದೆರಡು ದಿನಗಳ ಹಿಂದೆ ಚಂದನ್‌, ಜಗನ್‌ ಹಾಗೂ ಆಶಿತಾ ಮಾತಾಡುತ್ತಾ ಕುಳಿತಿದ್ದರು ಆಗ ಚಂದನ್‌ ‘ನನಗೆ ಲವ್ ಆಗುತ್ತೆ ಅನ್ನಿಸುತ್ತಿದೆ’ ಎಂದು ಹೇಳಿಕೊಂಡರು ಆದರೆ ಯಾರ ಮೇಲೆ ಲವ್‌ ಆಗಿದೆ ಎಂಬ ವಿಚಾರ ಮಾತ್ರ ಹೇಳಿರಲಿಲ್ಲ.

 

 

ನೆನ್ನೆ ಬಿಗ್ ಬಾಸ್ ಮನೆಯ ಸದಸ್ಯರು ನಡೆಸಿದ ಸಂಭಾಷಣೆ ಚಂದನ್ ಗೆ ಲವ್ ಆಗಿರುವದಕ್ಕೆ ಉತ್ತರ ಸಿಕ್ಕಿದೆ.. ಎಲ್ಲರ ಜತೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಅನುಪಮಾರವರು “ಚಂದನ್ ಶ್ರುತಿಯನ್ನು ಲವ್ ಮಾಡುತ್ತಿದ್ದಾನಂತೆ” ತಮಾಷೆಗೆ ಎಂದು ದಯಾಳ್’ಗೆ ಹೇಳಿದರು. ಆಗ “ಚಂದನ್ ನಾನು ಶ್ರುತಿಯನ್ನು ಇಷ್ಟ ಪಡ್ತಿದ್ದೀನಿ ಅವರು ಜೆಕೆಯನ್ನು ಇಷ್ಟ ಪಡ್ತಿದ್ದಾರೆ” ಎಂದು ಶ್ರುತಿಯ ಕಾಲೆಳೆದಿದ್ದರು.

 

 

ಈಗ ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ ತಕ್ಷಣ ಚಂದನ್ ಶೆಟ್ಟಿ ಮದುವೆ ಆಗುತ್ತಾರೆ. ಹಾಗಂತ ಹೇಳಿದ್ದು ಜಯಶ್ರೀನಿವಾಸನ್ ಗುರೋಜಿಯವರು. ಚಂದನ್ ಶೆಟ್ಟಿ ಪಕ್ಕದಲ್ಲಿ ಇರುವಾಗಲೇ ಚಂದನ್ ಶೆಟ್ಟಿ ಮದುವೆಯ ಬಗ್ಗೆ ಜಯಶ್ರೀನಿವಾಸನ್ ‘ಬಿಗ್ ಬಾಸ್’ ಮನೆಯಿಂದ ‘ಪ್ರಚಾರ’ ನೀಡಿದ್ದಾರೆ.. “ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಮದುವೆಗೆ ಸಿದ್ಧರಾಗಿರುವಂತ ವರ,, ವರನ ಹೆಸರು ಚಂದನ್ ಶೆಟ್ಟಿ, ಮೂಲತಃ ಹಾಸನದ ಶಾಂತಿಗ್ರಾಮದಲ್ಲಿ ಹುಟ್ಟಿರುವಂತವರು ಇವರ ಮೂಲ ಸಕಲೇಶಪುರ. ತುಂಬಾ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಹುಟ್ಟಿರುವ ಹುಡುಗ.. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿರುವ ಈ ಹುಡುಗನಿಗೆ ಯಾವುದೇ ದುರಭ್ಯಾಸ ಇಲ್ಲ” ಎಂದು ಮದುವೆ ಜಾಹೀರಾತು ನೀಡಲು ಜಯಶ್ರೀನಿವಾಸನ್ ಪ್ರಾರಂಭಿಸಿದರು.

 

 

 

ಮದುವೆಯಾಗುವವಳನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿಕೊಳ್ಳುತ್ತಾರೆ. 5, 14, 23ನೇ ತಾರೀಖು ಹುಟ್ಟಿರುವ ಅಥವಾ 6, 15, 24ನೇ ತಾರೀಖು ಹುಟ್ಟಿರುವ ಸ್ವಲ್ಪ ಸ್ಫುರದ್ರೂಪಿ ಆಗಿರುವವರು ಚಂದನ್ ಶೆಟ್ಟಿ ರನ್ನ ಮದುವೆ ಆಗಬಹುದು..ಇವರ ತಂದೆ-ತಾಯಿಯನ್ನ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಅನ್ನೋದು ಇವರ ಬಯಕೆ ಇದಕ್ಕೆ ಒಪ್ಪುವ ಹುಡುಗಿಯರು ಇವರನ್ನು ಮದುವೆ ಆಗಬಹುದು” ಎಂದು ಲೆಕ್ಕಾಚಾರ ಮಾಡಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೇಳಿದರು.. ಜಯಶ್ರೀನಿವಾಸನ್ ಇಷ್ಟೆಲ್ಲ ಹೇಳುವಾಗ, ಪಕ್ಕದಲ್ಲೇ ಇದ್ದ ಚಂದನ್ ಶೆಟ್ಟಿ ಕೈಮುಗಿಯುತ್ತಾ ಹೌದು ಹೌದು ಎಂದು ತಲೆ ಆಡಿಸುತ್ತಿದ್ದರು.

 

ಚಂದನ್ ಶೆಟ್ಟಿಯ ಮದುವೆ ಪ್ರಚಾರನ್ನು ಇಲ್ಲಿ ನೋಡಿ.

Chandan’s matrimonial pitch

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top