fbpx
ಭವಿಷ್ಯ

ನವೆಂಬರ್ 4ನೇ ತಾರೀಖು ಕಾರ್ತಿಕ ಮಾಸದ ಅತ್ಯಂತ ದೊಡ್ಡ ಪೌರ್ಣಮಿ ಆ ದಿನ ಈ ಆರು ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತೆ !

ನವೆಂಬರ್ ನಾಲ್ಕನೇ ತಾರೀಖು  ಕಾರ್ತಿಕ ಮಾಸದ ಅತ್ಯಂತ ದೊಡ್ಡ ಪೌರ್ಣಮಿಯಾಗಿದೆ. ಕಾರ್ತಿಕ ಮಾಸದ ಪೌರ್ಣಮಿಯ ದಿನ ಈ ಆರು  ರಾಶಿಗಳಲ್ಲಿ ಬದಲಾವಣೆಯಾಗುವುದು.

 

 

ಈ ಕಾರ್ತಿಕ ಪೌರ್ಣಮಿಯ ದಿನ ಗ್ರಹ ನಕ್ಷತ್ರಗಳ ಸಂಯೋಗ ಮತ್ತು ಅವುಗಳ ಮಹತ್ವ ಕೂಡ ಹೆಚ್ಚಿದೆ. ಈ ಆರು ರಾಶಿಗಳಿಗೆ ಅದೃಷ್ಟ, ದೇವರಿಂದ ಆಶೀರ್ವಾದ ಪಡೆಯುವರು. ಈ ಆರು ರಾಶಿಗಳಿಗೆ ಅತ್ಯಂತ ದೊಡ್ಡದಾಗಿ ಬದಲಾವಣೆಯೂ ಕಂಡು ಬರುವುದು. ಇವರ ಜೀವನದಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊಂದುವರು. ಈಗ ಆರು ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ….

 

 

ತುಲಾ ರಾಶಿ, ಸಿಂಹ ರಾಶಿ, ಕುಂಭ ರಾಶಿ, ಮೇಷ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿ .

ತುಲಾ ರಾಶಿ .

 

 

ತುಲಾ ರಾಶಿಯವರಿಗೆ ಈ ನಕ್ಷತ್ರಗಳ ಸಂಯೋಗ ಅತ್ಯಂತ ಖುಷಿ ತಂದುಕೊಡುವುದು. ನಿಮ್ಮ ಮನಸ್ಸಿನಲ್ಲಿರುವ ಅಶಾಂತಿಯ ವಾತಾವರಣವೂ ಬೇಗನೆ ದೂರವಾಗುವುದು. ಶಾರೀರಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು.ನಿಮ್ಮ ಮನೆಗೆ ಧನ ಆಗಮನವಾಗುವುದು. ಪರಿಶ್ರಮ ಮತ್ತು ಪ್ರಯತ್ನವನ್ನು ಮಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ನೀವು ವ್ಯಾಪಾರಿಯಾಗಿದ್ದರೆ ಅಥವಾ ಕೆಲಸ ಮಾಡುತ್ತಿದ್ದಲ್ಲಿ ಈ ಸಮಯದಲ್ಲಿ ಅವಶ್ಯವಾಗಿ ಯಶಸ್ಸು ದೊರೆಯುವುದು.

ನಿಮ್ಮ ಮೇಲೆ ಯಾವುದಾದರೂ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಸಾಲವನ್ನು ಯಾರಿಗಾದರೂ ಕೊಟ್ಟಿದ್ದರೆ ಅಥವಾ ನೀವು ಯಾರಿಗಾದರೂ ಹಣವನ್ನು ಕೊಡಬೇಕು ಎಂದಿದ್ದರೆ ಹಣದ ಸಮಸ್ಯೆಗಳು ಬೇಗನೆ ತೀರುವವು. ಹೊಸ ಯೋಜನೆಗಳನ್ನು ರೂಪಿಸಬೇಕೆಂದಿದ್ದರೆ ಅನುಭವವುಳ್ಳ ವ್ಯಕ್ತಿಗಳಲ್ಲಿ ವಿಚಾರ ವಿಮರ್ಶೆ ಮಾಡಿ ಯೋಜನೆಯನ್ನು ರೂಪಿಸಿಕೊಳ್ಳಿ. ನಿಮಗೆ ಅವಶ್ಯಕವಾಗಿ ಯಶಸ್ಸು ದೊರೆಯುವುದು.

 

 ಸಿಂಹ ರಾಶಿ.

 

 

ಸಿಂಹ ರಾಶಿಯವರಿಗೆ ಈಗ ಬರುವ ಸಮಯ ಅತ್ಯಂತ ಅನುಕೂಲಕರವಾಗಿದ್ದು. ನಿಮ್ಮ ನಿಂತು ಹೋಗಿರುವ ಕಾರ್ಯಗಳು ಸಂಪೂರ್ಣವಾಗಿ ನೆರವೇರುವವು.ಕಾರ್ಯಕ್ಷೇತ್ರದಲ್ಲಿ ಮನಸ್ಸಿಟ್ಟು ಕೆಲಸ ಮಾಡಿ. ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಗೌರವ ಸನ್ಮಾನಗಳು ನಿಮ್ಮ ಕಚೇರಿಯ ಸ್ಥಳದಲ್ಲಿ ದೊರೆಯುವವು.  ಇಷ್ಟು ದಿನದ ಪರಿಶ್ರಮದ  ಫಲಿತಾಂಶ ಬರುವ ಸಮಯವಾಗಿದೆ. ನೀವು ಸಿಹಿಯಾದ ಮತ್ತು ಒಳ್ಳೆಯ ಮಾತುಗಳನ್ನು ಆಡಿ. ನೀವು ಚೆನ್ನಾಗಿ ಮಾತನಾಡುವುದರಿಂದ ನಿಮ್ಮ ಎಷ್ಟೇ ಕಷ್ಟಕರ   ಕೆಲಸವಾದರೂ ಸರಿ ಸರಾಗವಾಗಿ ಈಡೇರುವವು.

ನೀವು ಕೆಲಸಗಾರರಾಗಿದ್ದಲ್ಲಿ ಸ್ವಲ್ಪ ಸಂಯಮದಿಂದ ವರ್ತಿಸಿ. ಹಣದ ಸ್ಥಿತಿ ಅಧಿಕವಾಗಿ ಸುಧಾರಣೆಯಾಗುವುದು. ನಿಮ್ಮ ಊಹೆಗಿಂತಲೂ ಹೆಚ್ಚು ಲಾಭ ಪಡೆಯುವಿರಿ.ನಿಮ್ಮ ವ್ಯವಹಾರಗಳಲ್ಲಿ  ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಿ. ನೀವು ಮಾತನಾಡುವ ರೀತಿಯಿಂದ ಮತ್ತು ನಿಮ್ಮ ವರ್ತನೆಯಿಂದ  ಬಂಧು, ಮಿತ್ರ ಮತ್ತು ಪರಿವಾರ, ಕಾರ್ಯಕ್ಷೇತ್ರದಲ್ಲಿ ದುಃಖವನ್ನು ಉಂಟು ಮಾಡುವಿರಿ. ಕೆಲವರ ಹೃದಯವನ್ನು ಸಹ ಒಡೆದು ಹಾಕುವಿರಿ. ಆದ್ದರಿಂದ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಇದರಿಂದ ನಷ್ಟವಾಗುವ ಸಂಭವ ಹೆಚ್ಚಿದೆ. ಮಕ್ಕಳ ವಿಷಯದಲ್ಲೂ ಸಹ ಶುಭ ಸುದ್ದಿ ಕೇಳಿಬರಲಿದೆ. ನಿಮ್ಮ ಸಹೋದರ ಮತ್ತು ಮಿತ್ರ ವರ್ಗದವರಿಂದ ದೊಡ್ಡ ಯೋಜನೆಯ ಸಹಾಯ ಸಿಗಲಿದೆ. ಇದರಿಂದ ಅತ್ಯಂತ ದೊಡ್ಡ ಸುಧಾರಣೆ ನಿಮ್ಮ ಜೀವನದಲ್ಲಿ ಆಗುವುದು.

 

 ಕುಂಭ ರಾಶಿ.

 

 

ಈಗ ಬರುವ ಸಮಯ ಕುಂಭ ರಾಶಿಯವರಿಗೆ ತುಂಬಾ ಚೆನ್ನಾಗಿದೆ. ಈ ದೊಡ್ಡ ಬದಲಾವಣೆಯಿಂದ ತುಂಬಾ ಲಾಭ ಕುಂಭ ರಾಶಿಯವರಿಗೆ ಆಗುತ್ತದೆ.ನಿಮ್ಮ ಯಾವುದೇ ಕೆಲಸ ಅರ್ಧಕ್ಕೆ ನಿಂತು ಹೋಗಿದ್ದರೆ. ನೀವು ಮಹತ್ವಪೂರ್ಣ ಯೋಜನೆ ಮಾಡಿದ್ದಲ್ಲಿ ಅಥವಾ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಆಸೆ ಇದ್ದಲ್ಲಿ ಬೇಗನೆ ಅವು ಎಲ್ಲವೂ ಈಡೇರುತ್ತದೆ. ನಿಂತು ಹೋಗಿರುವ ಕೆಲಸವು  ಯಶಸ್ವಿಯಾಗಿ ನೆರವೇರುತ್ತವೆ. ನಿಮಗೆ ನಿಮ್ಮ ಸ್ನೇಹಿತರ ಮತ್ತು ಪರಿವಾರದವರ ಸಂಪೂರ್ಣ ಸಹಾಯ ದೊರೆಯುವುದು. ಅವಿವಾಹಿತರಿಗೆ ವಿವಾಹವಾಗುವ ಸಂಭವವಿದೆ. ಸಂತಾನದ ಸಮಸ್ಯೆ ಇದ್ದಲ್ಲಿ ಅವರಿಗೂ ಸಹ ಶುಭ ಸುದ್ದಿ ದೊರೆಯುವುದು. ಇದೆಲ್ಲದರಿಂದ ಅತ್ಯಂತ ದೊಡ್ಡದಾಗಿ ಲಾಭವಾಗುವುದು. ನೌಕರಿ ಬಡ್ತಿ ಮತ್ತು ವ್ಯಾಪಾರದಲ್ಲಿ ಸ್ಥಾನ ಬದಲಾವಣೆಯಾಗಲಿದೆ. ಯಾವುದೇ ನಿರ್ಣಯವನ್ನು ಯೋಚಿಸಿ ಸಮಾಧಾನದಿಂದ ತೆಗೆದುಕೊಳ್ಳಿ. ಅದೃಷ್ಟ ನಿಮ್ಮ ಜೊತೆಗಿದೆ.

 

 ಮೇಷ ರಾಶಿ.

 

 

ನೀವು ಬಹಳ ದಿನಗಳಿಂದ ಯಾವುದೋ ಒಂದು ಕಾರ್ಯ ನೆರವೇರದೆ ನಿಂತು ಹೋಗಿದ್ದರೆ ಸಂಪೂರ್ಣವಾಗದೆ ಅರ್ಧಕ್ಕೆ ನಿಂತು ಹೋಗಿದ್ದಲ್ಲಿ ಎಲ್ಲವೂ ನೆರವೇರುವವು. ಸರಾಗವಾಗಿ ಯಶಸ್ವಿಯಾಗಿ ಈಡೇರುವವು . ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕೆಲಸದ ನಿಮಿತ್ತ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಮನೆಯಲ್ಲಿ ಮತ್ತು ಕಚೇರಿಯಲ್ಲಿಯೂ ಸಹ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ದೊರೆಯುವುದು. ನಿಮ್ಮ ಮೇಲೆ ಜವಾಬ್ದಾರಿಯ ಭಾರ ಹೆಚ್ಚಾಗುವುದು. ಅದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಲ್ಲಿ  ಹಿಂದೇಟು ಹಾಕಬೇಡಿ. ಮುಂದೆ ಹೋಗುವ ಅವಕಾಶ ಇಲ್ಲಿಂದಲೇ ದೊರೆಯುವುದು. ಹಗಲು ರಾತ್ರಿ ಸತತ ಪರಿಶ್ರಮದಿಂದ ದುಡಿದರೆ ಅವಶ್ಯವಾಗಿ ಯಶಸ್ವಿಯಾಗುವಿರಿ.

 

ಕನ್ಯಾ ರಾಶಿ .

 

 

ಕನ್ಯಾ ರಾಶಿಯವರಿಗೆ ಈ ಸಮಯ ಬಹಳ ಉಪಯೋಗವಾಗಲಿದೆ ಎಂದು ಸಾಬೀತಾಗಲಿದೆ. ನಿಮ್ಮ ಹತ್ತಿರದ ಸಂಬಂಧದಲ್ಲೂ ಸಹ ಸುಧಾರಣೆಯಾಗುವುದು. ನಿಮಗೆ ಯಶಸ್ಸು ದೊರೆಯುವುದು ಎಂದು ನೀವು ಊಹೆ ಮಾಡಿರುವುದಿಲ್ಲ. ಈ ಪ್ರಕಾರವಾಗಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಮಸ್ಯೆಗಳಿದ್ದರೆ ,ನಿಮ್ಮ ನಿಂತುಹೋಗಿದ್ದ ಕೆಲಸಗಳು ಸಹ ಈಡೇರುವವು. ನೀವು ವ್ಯಾಪಾರಿಗಳಾಗಿದ್ದರೆ ಅದರಲ್ಲೂ ಸಹ ಯಶಸ್ಸು ದೊರೆಯುವುದು . ಮನೆಯ ಮನೆಯನ್ನು ಕಟ್ಟಿಸಲು ಸಹ ಒಳ್ಳೆಯ ಸಮಯವಾಗಿದೆ. ಅನ್ಯರ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ಅವರ ಯೋಚನೆ ಮಾಡಬೇಡಿ ನೀವು ಏನು ಹೇಳುತ್ತೀರಾ ಎಂದು ತಿಳಿದುಕೊಂಡು ನಂತರ ಇದರಿಂದಾಗಿ  ನಿಮಗೆ ನಷ್ಟವಾಗುವ ಸಂಭವವಿದೆ. ನಿಮ್ಮ ಯೋಜನೆಯನ್ನು ಧನಾತ್ಮಕ ರೀತಿಯಲ್ಲಿ ಪರಿವರ್ತನೆ ಮಾಡಿ. ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಹ ದೂರವಾಗಲಿವೆ.

 

 ವೃಶ್ಚಿಕ ರಾಶಿ.

 

 

ಈ ದೊಡ್ಡ ಬದಲಾವಣೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಗಳಿಸುವಿರಿ. ಜೊತೆಗೆ ನಿಮಗೆ ಆತ್ಮ ಗೌರವ ಸಮ್ಮಾನಗಳು ಸಹ  ದೊರೆಯುವವು.  ನಿಶ್ಚಿಂತರಾಗಿ ಇನ್ನು ಮುಂದೆ ಹಣದ ಸಮಸ್ಯೆ ಇರುವುದಿಲ್ಲ. ಹೊಸ ವಾಹನ ಮತ್ತು ಮನೆ ಖರೀದಿಯ ಯೋಗ ಉಂಟಾಗಲಿದೆ.ಮುಂದೆ ಇನ್ನೂ ಪ್ರಬಲ ಯೋಗವೂ ಉಂಟಾಗಲಿದ್ದು ಆದರೆ ಅವಶ್ಯವಾಗಿ ಪರಿಶ್ರಮದ ಅವಶ್ಯಕತೆ ಇದೆ. ಹೊಸ ಸಂಬಂಧವನ್ನು ನಿಮ್ಮ ವ್ಯಾಪಾರ ಸ್ಥಳದಲ್ಲಿ ಮಾಡಿಕೊಳ್ಳಿ ಮಿತ್ರರಿಂದಲೂ ಸಹ ಸಹಾಯ ದೊರೆಯುವುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top