ಮೊಳಕೆ ಬಂದ ಕಾಳುಗಳು ಹೆಚ್ಚು ಪುಷ್ಟಿಕರ ಎನ್ನುತ್ತಾರೆ. ಏಕೆ?
ಬಹಳಷ್ಟು ಕೊಬ್ಬು (fats), ಶರ್ಕರ ಪಿಷ್ಠಾದಿಗಳು (carbohydrate) ಪ್ರೊಟೀನ್ ಗಳ ಅತಿ ಸಂಕೀರ್ಣ ರೂಪದಲ್ಲಿ ಬೀಜದಲ್ಲಿ ಒಟ್ಟಾಗಿರುವುದರಿಂದ ಬೀಜಗಳು ಶಕ್ತಿ ಹಾಗೂ ಪೌಷ್ಠಿಕತೆಯ ಹುಣಗಳೇ ಸರಿ. ಸಸ್ಯಕ್ಕೆ ಉಪಯೋಗವಾಗಬೇಕಾದರೆ ಈ ಸಂಕೀರ್ಣ (complex) ವಸ್ತುಗಳು. ಅಮೈನೊ ಆಮ್ಲ. ಲಿಪಿಡ್ ಮತ್ತುಗ್ಲುಕೋಸ್ ಗಳಂತಹ ಸರಳ ವಸ್ತಗಳಾಗಿ ಬದಲಾಗಬೇಕು. ನಮ್ಮ ದೇಹಕ್ಕೂ ಈ ರೂಪದಲ್ಲಿರುವ ಸಂಯುಕ್ತಗಳನ್ನು ಅರಗಿಸಿಕೊಳ್ಳುವುದು ಸುಲಭ.
ಬೀಜದಲ್ಲಿರುವ ಕೋಶಗಳು ನಿಷ್ಕ್ರಿಯ ಸ್ಥಿತಿಯಲ್ಲಿರುವುದರಿಂದ ಅವು ಬಹು ದೀರ್ಘಕಾಲ ಸುಪ್ತಾವಸ್ಥೆಯಲ್ಲಿರುತ್ತವೆ. ಒಮ್ಮೆ ಬೀಜವನ್ನು ಒದ್ದೆ ಮಾಡಿ ಅದು ನೀರು ಹೀರಿತೆಂದು ಸಾಕು. ಬೀಜ ಮೊಳೆಯುತ್ತದೆ. ಹೀಗಾದಾಗ ಸುಪ್ತವಾಗಿರುವ ಕೋಶಗಳು ಮತ್ತೆ ಕ್ರೀಯಾಶೀಲವಾಗಿ ಅತ್ಯಲ್ಪ ಕಾಲದಲ್ಲಿ ಕೋಡಿಟ್ಟ ವಸ್ತುಗಳನ್ನು ಜೀರ್ಣಿಸುವ ಕಿಣ್ವಗಳನ್ನು ತಯಾರಿಸುತ್ತವೆ, ಹೀಗೆ ಮೊಳಕೆಯೊಡೆಯುವಾಗ ಉತ್ಪತ್ತಿಯಾಗುವ ಅಧಿಕ ಮೊತ್ತದ ಕಿಣ್ವಗಳು ಪ್ರೊಟೀನಿನ ಖಜಾನೆಗಳೂ ಹೌದು.
ಕಿಣ್ವಗಳು ಜೀರ್ಣಿಸದಂತಹ ಈ ವಸ್ತುಗಳನ್ನು ಮನುಷ್ಯರು ಸರಾಗವಾಗಿ ಅರಗಿಸಿಕೊಳ್ಳಬಹುದು. ಮೊಳೆತ ಕಾಳುಗಳನ್ನು ಜೀವ ಸತ್ವಗಳು (vitamin) ಹಾಗು ಪ್ರೊಟೀನ್ ಗಳಿಗಾಗಿ ಜನರು ತಿನ್ನುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
