fbpx
ಭವಿಷ್ಯ

ನವೆಂಬರ್ 2 ತಾರೀಖಿನಂದು ಬುಧ ಗ್ರಹವು ತುಲಾ ರಾಶಿಯಿಂದ ವೃಷಭ ರಾಶಿಗೆ ಪ್ರವೇಶವಾಗಿದೆ ಇದರಿಂದ ಈ 4 ರಾಶಿಗಳಿಗೆ ಅನೇಕ ರೀತಿಯಲ್ಲಿ ಶುಭವಾಗುವುದು

ನವೆಂಬರ್ ಎರಡನೇ ತಾರೀಖಿನಂದು  ಬುಧ ಗ್ರಹವು ತುಲಾ ರಾಶಿಯಿಂದ ವೃಷಭ ರಾಶಿಗೆ ಪ್ರವೇಶವಾಗಲಿದೆ .ಇದರಿಂದ ಯಾವ ಎಲ್ಲ ರಾಶಿಗಳಿಗೆ ಅನೇಕ ರೀತಿಯಲ್ಲಿ ಶುಭವಾಗುವುದು ಎಂದು  ತಿಳಿಯೋಣ …….

 

ನವೆಂಬರ್ ಎರಡನೇ ತಾರೀಖಿನಂದು  ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಬುಧ ಗ್ರಹವು ಪ್ರವೇಶ ಮಾಡಲಿದ್ದು . ಈ ಬುಧ ಗ್ರಹವು ಎರಡನೇ ತಾರೀಖು  ನವೆಂಬರ್ 2017 ರಿ೦ದ  2018 ಜನವರಿ ಆರು ನೇ ತಾರೀಖಿನವರೆಗೆ ಬುಧನು ವೃಶ್ಚಿಕ ರಾಶಿಯಲ್ಲಿ ಸ್ಥಿತನಿರುತ್ತಾನೆ. ಈ ರಾಶಿಯ ಪರಿವರ್ತನೆಯಿಂದ ಅನೇಕ ರಾಶಿಯವರಿಗೆ ಕೆಟ್ಟ ಪರಿಣಾಮಗಳು ಸಹ ಬೀರುವವು. ಕೆಲವು ರಾಶಿಗಳಿಗೆ ವಿಶೇಷವಾಗಿ ಶುಭವಾಗಿ ಲಾಭವಾಗುವ ಸಂಭವವೂ ಇದೆ ….

 

 

ನಂತರ ಡಿಸೆಂಬರ್ ಹತ್ತನೇ ತಾರೀಖಿನಂದು  ಗುರು ವಕ್ರೀ ಆಗುವನು. ಶಾಸ್ತ್ರಗಳ ಪ್ರಕಾರ ಬುಧನು ಮನಸ್ಪತಿಗೆ  ರಾಜ ಎಂದು ಕರೆಯಲಾಗಿದೆ. ಬುಧನ ಈ ಪರಿಣಾಮವು ಬುದ್ಧಿಯ ಮೇಲೆ ಮತ್ತು ವ್ಯವಹಾರಗಳ ಬೀರುವುದು. ಮುಖ್ಯವಾಗಿ ಮಾತನಾಡುವ ನಾಲಿಗೆ ಮತ್ತು ಕುತ್ತಿಗೆಯ ಮೇಲೂ ಸಹ ಇದರ  ಪರಿಣಾಮ ಬೀರುವುದು.

ಶಾಸ್ತ್ರಗಳ ಪ್ರಕಾರ ಸೂರ್ಯ, ಶುಕ್ರ, ರಾಹು ಗ್ರಹ   ಬುಧ ಗ್ರಹದ ಮಿತ್ರರಾಗಿದ್ದಾರೆ. ಈ ಬುಧ ಗ್ರಹವು ಚಂದ್ರ ಗ್ರಹದ ಶತ್ರು ಗ್ರಹ ಎಂದು ಪರಿಗಣಿಸಲಾಗಿದೆ.  ಕೇತು ಮತ್ತು ಬುಧನ ಸಂಯೋಗದಿಂದ ಒಳ್ಳೆಯ ಫಲವೂ ಸಿಗುವುದು. ಬುಧನು ಅಶುಭನಾದರೆ ಕೆಟ್ಟ ಪರಿಣಾಮಗಳು ಸಹ ಬೀರುವ ಸಂಭವವಿರುತ್ತದೆ .

ಈ ಕೆಳಗಿನ ರಾಶಿಗಳಿಗೆ ಬುಧನ ರಾಶಿ ಪರಿವರ್ತನೆಯಿಂದ ವಿಶೇಷ ಪ್ರಭಾವ ಇರುವುದು ಮೊದಲಿಗೆ…

 

ಮೇಷ ರಾಶಿ.

 

 

ಮೇಷ ರಾಶಿಯಿಂದ ಬುಧನು ಎಂಟನೇ ಮನೆಯಲ್ಲಿ ಸ್ಥಿತ ನಿರುತ್ತಾನೆ. ಬುಧನ ಜೊತೆ ಪುರುಷ ಗ್ರಹ ಇದ್ದರೆ ಇದನ್ನು ಶುಭ ಎಂದು ಪರಿಗಣಿಸಲಾಗಿದೆ. ಈ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರಿಗೆ ಶುಭ ಫಲವು ಪ್ರಾಪ್ತಿಯಾಗುವುದು. ಆದರೆ ಅದಕ್ಕೆ ಕಷ್ಟ ಪಡಬೇಕಾಗುವುದು. ಮೇಷ ರಾಶಿಯವರು ನಿಮ್ಮ ತಾಯಿಯ ಆರೋಗ್ಯದ ಕಡೆಗೆ ಸ್ವಲ್ಪ ಹೆಚ್ಚಿನ ಗಮನ ಕೊಡುವುದು ಉತ್ತಮ .

 

ವೃಷಭ ರಾಶಿ.

ವೃಷಭ ರಾಶಿಯಿಂದ ಬುಧ ಗ್ರಹವು ಏಳನೇ ಸ್ಥಾನದಲ್ಲಿ ಇರುತ್ತಾನೆ. ಈ ಸಮಯ ಅವರಿಗೆ ತುಂಬಾ ಒಳ್ಳೆಯ ಸಮಯವಾಗಿದ್ದು. ಬುಧನು ನಾಲ್ಕು ದಿಕ್ಕುಗಳಿಂದಲೂ ಸಹ ಇವರಿಗೆ ಲಾಭವನ್ನು ಹೊತ್ತು ತರುತ್ತಾನೆ  ಜೊತೆಗೆ ಬುಧನ ಈ ಗೋಚರದಿಂದ ನಿಮಗೆ ಯಾವುದೇ ಕೆಲಸದಲ್ಲಾದರೂ ಜಯವೂ ಪ್ರಾಪ್ತಿಯಾಗುವುದು. ಬೇರೆಯವರಿಗೆ  ಒಳ್ಳೆಯದನ್ನು ಮಾಡುವ ಅವಕಾಶ ಸಿಗುವುದು. ಮನೆಯಲ್ಲಿ ಅಶುಭ ಸ್ಥಿತಿಯ ವಾತಾವರಣ ನಿರ್ಮಾಣವಾಗುವುದರಿಂದ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 

ಮಿಥುನ ರಾಶಿ.

 

ಬುಧನ ಈ ಪರಿವರ್ತನೆಯಿಂದ ನಿಮ್ಮ ನಿಮ್ಮನ್ನು ಪ್ರಭಾವಿತರನ್ನಾಗಿ ಮಾಡುತ್ತದೆ. ಬೇರೆಯವರು ನಿಮ್ಮ ಮಾತುಗಳಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ಈ ಧೈರ್ಯವಂತ ಮಾತುಗಳಿಂದ ಬೇರೆಯವರು ಪ್ರಭಾವಿತರಾಗುತ್ತಾರೆ.  ನೀವೂ ಸಹ ಮನಸ್ಸಿನಲ್ಲಿ ಧೈರ್ಯವನ್ನು ತಂದು ಕೊಳ್ಳುವುದರಿಂದ ಎಲ್ಲ ರೀತಿಯಲ್ಲೂ ಆತ್ಮವಿಶ್ವಾಸದಿಂದ  ಮುನ್ನುಗ್ಗಲು ಸಹಾಯವಾಗುತ್ತದೆ ಮತ್ತು ನಿಮ್ಮ ಕೆಲಸಗಳು ಸಹ ಸರಾಗವಾಗಿ ನಡೆಯುತ್ತವೆ.

 

ಸಿಂಹ ರಾಶಿ.

 

ಸಿಂಹ ರಾಶಿಯಿಂದ ಬುಧನು ನಾಲ್ಕನೇ ಮನೆಯಲ್ಲಿದ್ದು. ಇಲ್ಲಿ ಸ್ತ್ರೀ ಮತ್ತು ಪುರುಷ ಗ್ರಹ ಬದಲಾವಣೆಯಾಗುವುದರಿಂದ ವ್ಯಕ್ತಿಯೂ ಬೇರೆಯವರು ಸಮಸ್ಯೆಯನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ. ಸ್ವಲ್ಪ ಸಮಯದವರೆಗೆ  ಮಾನಸಿಕವಾಗಿ ಧೈರ್ಯವನ್ನು ಇಟ್ಟುಕೊಳ್ಳಬೇಕಾಗುವುದು. ಹಾಗೂ ಕೆಲವು ಸಮಯದವರೆಗೆ ಇವರು ಮಾನಸಿಕವಾಗಿ ಅಶಾಂತಿಯಿಂದ ಕೂಡಿರುತ್ತಾರೆ. ನಿಮಗೆ ಸರ್ಕಾರಿ ನೌಕರಿ ಸಿಗುವ ಸಂಭವ ಹೆಚ್ಚಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Usha says:

Wht about other rashis?

To Top