fbpx
ದೇವರು

ಭಗವಂತನಾದ ಶಿವನಿಗೆ ಇರುವುದು ಇಬ್ಬರು ಮಕ್ಕಳಲ್ಲ ಬದಲಾಗಿ ಆರು ಜನ ಮಕ್ಕಳು. ಈ ಕಥೆ ಓದಿ ಆಶ್ಚರ್ಯ ಆಗ್ದೇ ಇರಲ್ಲ !

ಭಗವಂತನಾದ ಶಿವನಿಗೆ ಇರುವುದು ಇಬ್ಬರು  ಮಕ್ಕಳಲ್ಲ ಬದಲಾಗಿ ಆರು ಜನ ಮಕ್ಕಳು. ಈ ಕಥೆಯನ್ನು ಒಮ್ಮೆ ಓದಿ…..

 

 

ನಿಮಗೆಲ್ಲ ಗೊತ್ತಿರಬಹುದು. ಶಿವನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು  ಅವರು ಕಾರ್ತಿಕೇಯ ಮತ್ತು ಗಣೇಶ ದೇವನು.ಆದರೆ ನಿಮಗೆ ಗೊತ್ತಾ ಶಿವನಿಗೆ ಆರು ಜನ ಪುತ್ರರಿದ್ದಾರೆ ಎಂದು ?

ಇನ್ನೂ ಮುಂತಾದವುಗಳಲ್ಲಿ ಶಿವನಿಗೆ ಏಳು ಜನ ಮಕ್ಕಳಿದ್ದಾರೆ ಎಂದು ಸಹ ಹೇಳಲಾಗಿದೆ. ಇದರ ಬಗ್ಗೆ ತುಂಬಾ ಜನರಿಗೆ ತಿಳಿದಿಲ್ಲ. ಅವರ ಪ್ರತಿಯೊಂದು ಪುತ್ರರ ಕಥೆಯೂ ಸಹ ಇಲ್ಲಿದೆ..

 

ಶಿವ ಮತ್ತು ಮೋಹಿನಿಯ ಪುತ್ರ .

 

 

ಅಯ್ಯಪ್ಪ ದೇವನನ್ನು ಸಸತ್ವ ಎಂದು ಕರೆಯಲಾಗುತ್ತದೆ .ಅವನು ಹಿಂದೂ ದೇವತೆಗಳಲ್ಲಿ ಅತ್ಯಂತ ಶಕ್ತಿಶಾಲಿ ದೇವರೆಂದು ಹೇಳಲಾಗುತ್ತದೆ. ಇವನನ್ನು ಕೇರಳ ರಾಜ್ಯದಲ್ಲಿ ಅಯ್ಯಪ್ಪ ಎಂಬ ಹೆಸರಿನಿಂದ ಪೂಜಿಸುತ್ತಾರೆ ಮತ್ತು ತಮಿಳುನಾಡು ರಾಜ್ಯದಲ್ಲಿ ಅಯ್ಯನಾರ್ ಎಂಬ ಹೆಸರಿನಿಂದ ಪೂಜಿಸುತ್ತಾರೆ. ಅಯ್ಯಪ್ಪನ ಶಿವನು ಮೋಹಿನಿಯನ್ನು ಮದುವೆಯಾದ ಮೇಲೆ ಹುಟ್ಟಿದವನು ಎಂದು ಹೇಳಲಾಗಿದೆ .ಸಾಕ್ಷಾತ್ ವಿಷ್ಣು ದೇವನೇ ಮೋಹಿನಿ ಅವತಾರವನ್ನು ತಾಳಿದ್ದು .ಅಯ್ಯಪ್ಪನ ಪರಶುರಾಮನಿಂದ  ವಿದ್ಯೆಗಳನ್ನು ಅನೇಕ ಕಲೆಗಳನ್ನು ಕಲಿತನು.

 

ಅಂಧಕ -ಶಿವನ ಬೆವರ ಹನಿಯ ನೀರಿನಿಂದ ಹುಟ್ಟಿದವನು.

 

 

ಇವನು ಹುಟ್ಟಿನಿಂದಲೇ ಕುರುಡು. ಅಂಧಕನ ಒಬ್ಬ ರಾಕ್ಷಸನಿಂದ ಬೆಳೆದವನು ಅವನೇ ಹಿರಣ್ಯಾಕ್ಷ .ಹಿರಣ್ಯಾಕ್ಷನು ಅನೇಕ ವರ್ಷಗಳ ಕಾಲ ಶಿವನಿಗೆ ಪೂಜೆ ಮತ್ತು ಪ್ರಾರ್ಥನೆಯನ್ನು ಒಂದು ಮಗುವನ್ನು ಪಡೆಯಲು ಮಾಡಿದ್ದಕ್ಕಾಗಿ ಈ ಮಗುವನ್ನು ಶಿವನು ಕರುಣಿಸಿದನು. ಅವನು ಕುರುಡನಾಗಿ ಹುಟ್ಟಿದ ಕಾರಣ ಅವನಿಗೆ ಅಂಧಕ ಎಂದು ಹೆಸರಿಡಲಾಯಿತು. ಅಂದರೆ ಹುಟ್ಟಿನಿಂದಲೇ ಅವನು ಕುರುಡನು ಎಂದರ್ಥ. ಮುಂದೆ ಅವನು ಶಿವನಿಂದಲೇ ಹತನಾಗುತ್ತಾನೆ  ಯಾಕೆಂದರೆ ಅವನು ಪಾರ್ವತಿ ದೇವಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾನೆ ಆದ್ದರಿಂದ ಶಿವನು ಅಂಧಕನನ್ನು ಸಂಹರಿಸುತ್ತಾನೆ.

 

ಭೌಮ -ಇವನನ್ನು ಭೂಮಿಯ ಪುತ್ರ ಎಂದು ಕರೆಯಲಾಗುತ್ತದೆ.

 

 

ಇವನೂ ಕೂಡ ಶಿವನ ಬೆವರ ಹನಿಯಿಂದ ಹುಟ್ಟಿದವನು. ಬೌಮನು  ಜನಿಸಿದ್ದು ಭಗವಂತನಾದ ಶಿವನ ಬೆವರ ಹನಿಯ ನೀರು ಭೂಮಿಯ ಮೇಲೆ ಬಿದ್ದ ನಂತರ. ಆ ಸಮಯದಲ್ಲಿ ಶಿವನು ಗಾಢವಾದ ಧ್ಯಾನದಲ್ಲಿ ಮುಳುಗಿದ್ದನು. ಆದ್ದರಿಂದಲೇ ತನ್ನ ಸ್ವಂತ ಮಕ್ಕಳನ್ನು ಭೂದೇವಿಯು ಹುಟ್ಟಿಸಿದಳು.ಶಿವನು ಭೂದೇವಿಯು ತನ್ನ ಮಕ್ಕಳನ್ನು ಹುಟ್ಟಿಸಿದ್ದಾಳೆ ಎಂದು ಅರಿತಾಗ ಶಿವನು ಅತ್ಯಂತ ಪ್ರಸನ್ನನಾಗಿ ಅವನಿಗೆ ಭೂದೇವಿಯ ಜ್ಞಾಪಕಾರ್ಥವಾಗಿ ಮತ್ತು ಗೌರವಾರ್ಥವಾಗಿ ಭೌಮ ಎಂಬ ಹೆಸರನ್ನು ಇಟ್ಟನು. ಅವನು ಕೆಂಪು ಚರ್ಮವನ್ನು ಮತ್ತು ನಾಲ್ಕು ಕೈಗಳನ್ನು ಹೊಂದಿದವನಾಗಿದ್ದನು.

 

ಕುಜ- ಶಿವನು ಧ್ಯಾನ ಮಾಡುತ್ತಿರುವ ಹೃದಯ ಭಾಗದಿಂದ ಹೊರಹೊಮ್ಮಿದ ಶಕ್ತಿಶಾಲಿ ಕಿರಣಗಳಿಂದ ಹುಟ್ಟಿದವನು.

 

 

ಈ ಕಿರಣಗಳು ಭೂಮಿಯ ಮೇಲೆ ಬಿದ್ದಾಗ ಭೂಮಿಯೊಳಗೆ ಸಿಕ್ಕಿ ಹಾಕಿಕೊಂಡಾಗ ಭೂಮಿಯ ಒಳಗಿನಿಂದ ಭೂದೇವಿಯ ಒಡಲಿನಿಂದ ಕುಜನು ಹುಟ್ಟಿದನು.ಕುಜನನ್ನು ಕಬ್ಬಿಣ ವೆಂದು ಭಾವಿಸಿ ಭೂಮಿಯ ಮೇಲೆ ಪೂಜಿಸಲಾಗುತ್ತದೆ ಪುರಾಣ ಕಥೆಗಳ ಪ್ರಕಾರ ಕುಜನು ದೊಡ್ಡವನಾಗಿ ಬೆಳೆದಾಗ ಅವನು ಭೂಮಿಯಿಂದ ಬೇರೆಯಾಗಿ ಅಂತರಿಕ್ಷಕ್ಕೆ ತಲುಪಿದನು ಜನರು ಕುಜನನ್ನು ಕುಜ ಗ್ರಹದ ಅಧಿಪತಿ ಎಂದು ನಂಬಿದ್ದಾರೆ.

 

ಗಣೇಶ -ಈ ದೇವನು ಎಲ್ಲ ದುಃಖಗಳನ್ನು ವಿಘ್ನಗಳನ್ನು ನಿವಾರಿಸುವವನು. ಶಿವ ಮತ್ತು ಪಾರ್ವತಿ ದೇವಿಯ ಪುತ್ರ.

 

 

ಗಣೇಶನನ್ನು ಗಣಪತಿ ಎಂದು ಸಹ ಕರೆಯಲಾಗುತ್ತದೆ .ಗಣೇಶನು ಶಿವ ಗಣಗಳ ಒಡೆಯ ಇವನನ್ನು ಭಾರತದಲ್ಲಿ ವಿಶಾಲವಾಗಿ ವೈಭವದಿಂದ ಪೂಜಿಸಲಾಗುತ್ತದೆ. ಕೆಲವರು ಗಣೇಶನನ್ನು ಬ್ರಹ್ಮಚಾರಿ ಎಂದು ಸಹ ನಂಬುತ್ತಾರೆ. ಇವನು ವಿವಾಹವನ್ನು ಪ್ರತಿದಿನವೂ ನಿರಾಕರಿಸಿ ಪ್ರತಿದಿನವೂ ಮುಂದೂಡುತ್ತಿದ್ದನು. ಆದರೆ ಪದ್ಮ ಪುರಾಣದಲ್ಲಿ ಹೇಳುವ ಪ್ರಕಾರ ಗಣೇಶನನ್ನು ಸಿದ್ಧಿ ಮತ್ತು ಬುದ್ಧಿಯನ್ನು ವಿವಾಹವಾದನು. ಸಿದ್ಧಿ ಎಂದರೆ ಕೌಶಲ್ಯ ಬುದ್ಧಿ ಎಂದರೆ ಬುದ್ಧಿವಂತಿಕೆ. ವೇದವ್ಯಾಸರು ಮಹಾಭಾರತದ ಕಥೆಯನ್ನು ಗಣೇಶನಿಗೆ ವಿವರವಾಗಿ ತಿಳಿಸಿ ಕಥೆಯನ್ನು ಬರೆಸಿದರು.

 

ಕಾರ್ತಿಕೇಯ -ಯುದ್ಧದ ದೇವರು. ಶಿವ ಮತ್ತು ಪಾರ್ವತಿಯ ಪುತ್ರ.

 

 

ಇವನು ರಾಕ್ಷಸರನ್ನು ನಾಶ ಮಾಡಲು ಹುಟ್ಟಿದವನು ತಾರಕಾಸುರ ಮತ್ತು ಅವನ ಸೈನ್ಯವನ್ನು ನಾಶ ಮಾಡಿದವನು.ಇವನ್ನು ಅತ್ಯಂತ ಪ್ರಸಿದ್ಧವಾದ ದೇವರಾಗಿದ್ದು ವಿವಿಧ ಹೆಸರುಗಳಿಂದ ದಕ್ಷಿಣ ಭಾರತದಲ್ಲಿ ಇವನನ್ನು ಪೂಜಿಸಲಾಗುತ್ತದೆ. ಅವುಗಳಾದ  ಮುರುಗನ್, ಸುಬ್ರಹ್ಮಣ್ಯ ಮತ್ತು ಸೆಂಥಿಲ್ ಇನ್ನೂ ಮುಂತಾದವು.ಇವನ ವಾಹನ ನವಿಲು ಇವನು ನವಿಲಿನ ಮೇಲೆ ಕುಳಿತು ಲೋಕದಲ್ಲಿ ಸಂಚರಿಸುವನು ಎಂದು ಹೇಳಲಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top