fbpx
ಕಿರುತೆರೆ

ದಿನಕ್ಕೆ ನೂರು ಸಿಗರೇಟು ಸೇದೋ ಸರದಾರ ಯಾರು? ಗೀತಾ ಮೇಡಂಗೂ ಸಿಹಿಕಹಿ ಪ್ರೇಮ್ ಕಹಾನಿ..!

ದಿನಕ್ಕೆ ನೂರು ಸಿಗರೇಟು ಸೇದೋ ಸರದಾರ ಯಾರು? ಗೀತಾ ಮೇಡಂಗೂ ಸಿಹಿಕಹಿ ಪ್ರೇಮ್ ಕಹಾನಿ..!

 

 

ಮುಂದೆ ಅದೇನೇನು ಅಧ್ವಾನಗಳಾಗುತ್ತವೋ ಬಿಗ್‌ಬಾಸೇ ಬಲ್ಲ. ಆದರೆ ಸದ್ಯದ ಒಂದು ವಾರದ ವಾಯಾವರಣ ಗಮನಿಸಿ ಹೇಳೋದಾದರೆ ಬಿಗ್‌ಬಾಸ್ ಮನೆಯೊಳಗೆ ಈ ಹಿಂದಿನ ನಾಲಕ್ಕು ಸೀಜನ್‌ಗಳಿಗಿಂತವೂ ಭಿನ್ನವಾದ ಛಾಯೆ ಕಾಣಿಸುತ್ತಿದೆ. ಇದರಿಂದ ಪ್ರೇಕ್ಷಕರೂ ಒಂದಷ್ಟು ಖುಷಿಯಾಗಿರೋದು ನಿಜ.

 

 

ಈ ಹಿಂದಿನ ಸೀಜನ್‌ಗಳಲ್ಲಿ ಟಾಸ್ಕುಗಳು ಅದದೇ ಪುನರವರ್ತನೆಯಾಗುತ್ತಿದ್ದವು. ಆದರೀಸಲ ಅದರಲ್ಲಿಯೂ ಸಂಪೂರ್ಣ ಹೊಸತನ ಕಾಣಿಸುತ್ತಿದೆ. ಇಂದಿನ ಸಂಚಿಕೆಯಲ್ಲಿ ಒಂದು ವಿಚಾರವನ್ನು ಉದ್ದೇಶಿಸಿ ತಮ್ಮ ಜೀವನದಲ್ಲಿ ಆ ವಿಚಾರಕ್ಕನುಗುಣವಾದ, ಈ ವರೆಗೆ ಯಾರಲ್ಲಿಯೂ ಹೇಳಿಕೊಳ್ಳದ ಸಂಗತಿಗಳನ್ನು ಜಾಹೀರು ಮಾಡೋ ಟಾಸ್ಕ್ ಒಂದಿತ್ತು. ಆದರೆ ಒಂದು ತಂಡದ ಸ್ಪರ್ಧಿಗಳು ಹೇಳಿಕೊಂಡ ಇಂಥಾ ಸತ್ಯಗಳ ಒರಿಜಿನಾಲಿಟಿಯನ್ನು ಪ್ರಶ್ನೆ ಮಾಡೋ ಅವಕಾಶವನ್ನು ಎದುರಾಳಿ ತಂಡಕ್ಕೆ ಮಾಡಿಕೊಡಲಾಗಿತ್ತು..

 

 

ಈ ಟಾಸ್ಕ್‌ನಲ್ಲಿ ಬಿಗ್‌ಬಾಸ್‌ನೊಳಗಿನ ಎನರ್ಜಿಟಿಕ್ ಸ್ಪರ್ಧಿ ಸಿಹಿಕಹಿ ಚಂದ್ರು ಅವರ ಮೊದಲ ಪ್ರೇಮದ ದುರಂತ ಕಥೆಯೊಂದು ರಸವತ್ತಾಗಿ ಅನಾವರಣಗೊಂಡಿತ್ತು. ಕಾಲೇಜು ದಿನಗಳಲ್ಲಿ ಓರ್ವ ಹುಡುಗಿಯನ್ನು ಉತ್ಕಟವಾಹಿ ಪ್ರೀತಿಸಿ ಇನ್ನೇನು ಮದುವೆಗೆಂದು ಸೀರೆಯನ್ನೂ ಕೊಂಡು ತಯಾರಾಗಿದ್ದ ಚಂದ್ರು ಜೀವನದಲ್ಲೆಂದೂ ಮರೆಯಲಾರದ ಶಾಕ್ ತಗುಲಿಸಿಕೊಂಡಿದ್ದರಂತೆ. ಯಾಕೆಂದರೆ ಆ ಹುಡುಗಿ ಚಂದ್ರು ಅವರದ್ದೇ ನಾಟಕ ತಂಡದ ಯುವಕನನ್ನು ಮದುವೆಯಾಗಿ ಪ್ರತ್ಯಕ್ಷಳಾಗಿದ್ದಳಂತೆ..!

 

 

ಇದೇ ಸಂದರ್ಭದಲ್ಲಿ ಎಂಥವರೂ ಅವಕ್ಕಾಗೋವಂಥಾ ಚಂದ್ರು ಅವರ ಸಿಗರೇಟು ಚಟವನ್ನೂ ಅವರೇ ಹೇಳಿಕೊಂಡಿದ್ದಾರೆ. ತೊಂಭತ್ತರ ದಶಕದಲ್ಲಿ ಚಂದ್ರು ಯಾಪಾಟಿ ಸಿಗರೇಟು ಸೇದುತ್ತಿದ್ದರೆಂದರೆ, ಸಿನಿಮಾ ಶೂಟಿಂಗ್‌ಗೆ ಹೋಗೋವಾಗ ದರೋಡೆಕೋರರು ಬುಲೆಟ್ ಬೆಲ್ಟ್ ಕಟ್ಟಿಕೊಂಡಿರ‍್ತಾರಲ್ಲಾ? ಅದೇ ರೀತಿ ಸೊಂಟದ ಸುತ್ತಾ ಬರೋಬ್ಬರಿ ಹತ್ತು ಪ್ಯಾಕು ಸಿಗರೇಟನ್ನು ಕಟ್ಟಿಕೊಂಡು ಹೋಗುತ್ತಿದ್ದರಂತೆ. ಅಂದಹಾಗೆ ಇದೇನು ವಾರದ ಖರ್ಚಿಗಾಗುತ್ತಿರಲಿಲ್ಲ. ಅದವರ ಒಂದು ದಿನದ ಪ್ಯಾಕೇಜು. ಅಂದರೆ ದಿನವೊಂದಕ್ಕೆ ಚಂದ್ರು ಭರ್ತಿ ನೂರು ಸಿಗರೇಟು ಸುಡುತ್ತಿದ್ದರಂತೆ!

 

 

ಅಷ್ಟು ಸಿಗರೇಟು ಸುಟ್ಟರೂ ಈ ಪರಿ ಫಿಟ್ ಆಗಿ ಬದುಕೇ ಇದ್ದಾರಲ್ಲಾ ಅನ್ನೋ ಅಚ್ಚರಿ ಕಾಡೋದು ಸಹಜವೆ. ಅದನ್ನೂ ಕೂಡಾ ಅವರೇ ಪರಿಹಾರ ಮಾಡಿದ್ದಾರೆ. ಅದೊಂದು ಸಲ ಸಿಗರೇಟು ಮರೆತು ಶೂಟಿಂಗಿಗೆ ಹೋಗಿ ಸಿಗರೇಟು ಸಿಗದೇ ಕಂಗಾಲಾದ ಚಂದ್ರು ಯಾರ ಬಳಿಯೋ ಒಂದು ಸಿಗರೇಟು ಕೇಳಿದ್ದರಂತೆ. ಅದರೆ ಅದನ್ನು ಸೇದುತ್ತಿದ್ದಾಗ ಒಂದು ಸಿಗರೇಟಿಗಾಗಿ ಭಿಕ್ಷುಕನಾದೆ ಅನ್ನಿಸಿದ್ದೇ ಆ ಕ್ಷಣವೇ ಅರ್ಧ ಸೇದಿದ್ದ ಸಿಗರೇಟನ್ನು ಎಸೆದಿದ್ದರಂತೆ. ಹಾಗೆ ೧೯೯೩ರಲ್ಲಿ ಸಿಗರೇಟು ಎಸೆದ ಚಂದ್ರು ಈವರೆಗೂ ಮತ್ತೆ ಕೈಗೆತ್ತಿಕೊಂಡಿಲ್ಲವಂತೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top