fbpx
ದೇವರು

ಕಾರ್ತಿಕ ಮಾಸದ ಕಾರ್ತಿಕ ಪೌರ್ಣಮಿಯ ದಿನ ಈ 10 ಉಪಾಯಗಳನ್ನು ಪಾಲಿಸಿದ್ರೆ ಹಣ ಕಾಸಿನ ತೊಂದರೆ ನಿವಾರಣೆಯಾಗುತ್ತೆ

ಕಾರ್ತಿಕ ಮಾಸದ ಕಾರ್ತಿಕ ಪೌರ್ಣಮಿಯ ದಿನ ಯಾವ ಕೆಲಸಗಳನ್ನು ಮಾಡಬೇಕೆಂದು ಇಲ್ಲಿ ಹೇಳಲಾಗಿದೆ .

 

ಭವಿಷ್ಯ ಪುರಾಣದ ಪ್ರಕಾರ ವೈಶಾಖ ಮಾಸ ಮತ್ತು ಕಾರ್ತಿಕ ಮಾಸದ ಕಾರ್ತಿಕ ಪೌರ್ಣಮಿಯ ದಿನ ಸ್ನಾನ ಮತ್ತು ದಾನಕ್ಕಾಗಿ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ. ಈಗ ಇದೇ ನವೆಂಬರ್ ನಾಲ್ಕನೇ ತಾರೀಖಿನಂದು ಶನಿವಾರ ಶುಕ್ಲಪಕ್ಷದ ಕಾರ್ತಿಕ ಮಾಸದ ಕಾರ್ತಿಕ ಪೂರ್ಣಮಿಯು ಬಂದಿದೆ .

 

 

ಈ ಕಾರ್ತಿಕ ಪೌರ್ಣಮಿ ದಿನದಲ್ಲಿ ಸ್ನಾನ ಮಾಡುವವರು ಆ ನೀರಿನಲ್ಲಿ ಒಂದು ಸ್ವಲ್ಪ ಗಂಗಾಜಲವನ್ನು ನೀರಿನೊಳಗೆ ಹಾಕಿ ಮಿಶ್ರಣ ಮಾಡಿ ಸ್ನಾನ ಮಾಡಬೇಕು .ನಂತರ ಭಗವಂತನಾದ ವಿಷ್ಣುವಿಗೆ ವಿಧಿವತ್ತಾಗಿ ಪೂಜೆ ,ಪ್ರಾರ್ಥನೆ ಮತ್ತು ಅರ್ಚನೆಯನ್ನು ಮಾಡಬೇಕು. ಈ ದಿನ ಪೂರ್ತಿ ಉಪವಾಸವಿರಬೇಕು. ಒಂದು ಬಾರಿ ಮಾತ್ರ ಊಟವನ್ನು ಮಾಡಬೇಕು. ಅದು ರಾತ್ರಿ ಚಂದ್ರ ದರ್ಶನವಾದ ನಂತರ.

ನಿಮ್ಮ ಸಾಮರ್ಥ್ಯಕ್ಕೆ ಅನುಸಾರ ಹಸುವಿನ ಹಾಲು, ಬಾಳೆಹಣ್ಣು ,ಖರ್ಜೂರ, ತೆಂಗಿನ ಕಾಯಿಗಳನ್ನು ಮತ್ತು ಇನ್ನು ಮುಂತಾದವುಗಳನ್ನು ದಾನ ಮಾಡಬೇಕು. ಬ್ರಾಹ್ಮಣರು, ತಂಗಿಯರು ಮತ್ತು ವಯಸ್ಸಾದ ಅಜ್ಜಿಯರಿಗೆ ಕಾರ್ತಿಕ ಪೌರ್ಣಮಿಯ ದಿನ ದಾನ ಮಾಡುವುದರಿಂದ ಅಕ್ಷಯ ಪುಣ್ಯ ಲಭಿಸುವುದು ಎಂದು ಹೇಳಲಾಗಿದೆ.

ಸಂಜೆಯ ಸಮಯದಲ್ಲಿ ನೀವು ಚಂದ್ರನು ಉದಯಿಸಿದಾಗ ಮೊದಲು ಚಂದ್ರನಿಗೆ ಅರ್ಘ್ಯವನ್ನು ನೀಡಬೇಕು. ಅರ್ಘ್ಯವನ್ನು ಅರ್ಪಿಸುವ ಸಮಯದಲ್ಲಿ ಈ ಮಂತ್ರವನ್ನು ಹೇಳಬೇಕು ಆ ಮಂತ್ರ ಹೀಗಿದೆ

 “ವಸಂತ ಬಾಂಧವ್ಯಬೋ  ಶೀತಾಂಶ   ಸ್ವಾಸ್ಥ್ಯ ಸಹಕುರು” ಈ ಮಂತ್ರವನ್ನು ಹೇಳುತ್ತಾ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು.  

 

ಕಾರ್ತಿಕ  ಪೌರ್ಣಮಿಯ ದಿನ ಗಂಗಾ ಸ್ನಾನವನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ ಇದರ ಜೊತೆಗೆ ಪಾಲಿಸಬೇಕಾದ ಇನ್ನೂ ಹತ್ತು ಉಪಾಯಗಳನ್ನು ತಿಳಿಯೋಣ  ……

 

 

1.ಕಾರ್ತಿಕ ಪೌರ್ಣಮಿಯ ಸ್ನಾನದ ಬಗ್ಗೆ ಖುಷಿ ಅಂಗೀರಕರು ಬರೆದಿರುವ ಪ್ರಕಾರ ಮೊದಲಿಗೆ ಕಾಲು ಕೈಗಳನ್ನು ತೊಳೆಯಬೇಕು. ನಂತರ ಆಚಮನ ಮಾಡಬೇಕು. ಆಚಮನ ಎಂದರೆ ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಕುಡಿಯಬೇಕು. ಇದಕ್ಕೆ ಆಚಮನ ಎಂದು ಕರೆಯಲಾಗುತ್ತದೆ. ನಂತರ ಕೈಯಲ್ಲಿ ಕೋಶವನ್ನು ಹಿಡಿದು ಸ್ನಾನ ಮಾಡಬೇಕು ಕುಶ ಎಂದರೆ ಒಂದು ಪ್ರಕಾರದ ಹುಲ್ಲು.

2.ದಾನ ಮಾಡುವಾಗ ಜಾತಕನ ಕೈಯಲ್ಲಿ ನೀರನ್ನು ಮತ್ತು ಕುಶವನ್ನು ಹಿಡಿದಿರಬೇಕು. ಗೃಹಸ್ಥ ಅಂದರೆ ಸಂಸಾರಿಯಾಗಿರುವ ವ್ಯಕ್ತಿಯು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಬಹಳ ಪುಣ್ಯ ಲಭಿಸುವುದು.

3.ಸನ್ಯಾಸಿಗಳು ಸ್ನಾನ ಮಾಡುವಾಗ  ತುಳಸಿಯ ಗಿಡದ ಬಳಿ ಇರುವ ಮಣ್ಣನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು.ನಂತರ  ಈ ರೀತಿಯಲ್ಲಿ ಭಗವಂತನಾದ ವಿಷ್ಣುವಿಗೆ

“ಓಂ    ಅಚ್ಯುತಾಯ ನಮಃ” ಮತ್ತು  “ಓಂ ಕೇಶವಾಯ ನಮಃ” ಮತ್ತು “ಓಂ ಅನಂತಾಯ ನಮಃ” ಎಂದು ಜಪಿಸಬೇಕು.

ಕಾರ್ತಿಕ ಮಾಸದ ಪೌರ್ಣಮಿಯ ದಿನ ಏನು ಮಾಡಿದರೆ ಶ್ರೀ ಮಹಾಲಕ್ಷ್ಮೀ ದೇವಿಯ ಪ್ರಸನ್ನಳಾಗುವಳು ಎಂದು ತಿಳಿಯೋಣ …..

 

4.ಕಾರ್ತಿಕ  ದಿನ ಎಂದರೆ ಮಹಾಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯ. ಈ ದಿನ ಶ್ರೀ ಮಹಾ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷಕ್ಕೆ ಮತ್ತು ಸುಖಕ್ಕೆ ಎಂದಿಗೂ ಕಡಿಮೆ ಇರುವುದಿಲ್ಲ .  ಶ್ರೀ ಮಹಾಲಕ್ಷ್ಮೀ ದೇವಿಯ ಮುಂದೆ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿ ದೀಪವನ್ನು ಬೆಳಗಿಸಿ. ನಂತರ ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಬೇಕು. ಆ ಮಂತ್ರ ಹೀಗಿದೆ

 “ಓಂ ಶ್ರೀ ಶ್ರೀ  ಕಮಲಾಲಯೇ  ಪ್ರಸಿದ್ಧೇ ಪ್ರಸಿದ್ಧೇ ಶ್ರೀ ಶ್ರೀ ಶ್ರೀ ಮಹಾಲಕ್ಷ್ಮಿಯೇ ನಮಃ”

5.ಕಾರ್ತಿಕ ಪೌರ್ಣಮಿಯ ದಿನ ಬೆಳಗ್ಗೆ ಐದು ಗಂಟೆಯಿಂದ ರಾತ್ರಿ 10:30 ರವರೆಗೂ ಅರಳಿ ಮರದ ಬಳಿ ಮಹಾಲಕ್ಷ್ಮಿ ದೇವಿಯ ವಾಸಿಸುತ್ತಾಳೆ .ಈ ದಿನ ನೀರಿನಲ್ಲಿ ಹಾಲು, ಸಕ್ಕರೆ  ಅಥವಾ ಬೆಲ್ಲವನ್ನು ಮಿಶ್ರಣ ಮಾಡಿ ಅರಳಿ ಮರಕ್ಕೆ ಸಮರ್ಪಿಸಿ. ಇದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುವಳು.

6.ಕಾರ್ತಿಕ ಪೌರ್ಣಮಿಯ ದಿನ ಬಡವರಿಗೆ ಅಕ್ಕಿಯನ್ನು ದಾನ ಮಾಡಿದರೆ ಚಂದ್ರ ದೇವನು ಪ್ರಸನ್ನನಾಗುವನು. ಯಾರೂ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಬಳಲುತ್ತಿದ್ದರು ಈ ಕೆಲಸವನ್ನು ಅವಶ್ಯಕವಾಗಿ ಮಾಡಬೇಕು ಜನ್ಮ ಕುಂಡಲಿಯಲ್ಲಿ ಚಂದ್ರ ದೋಷವಿದ್ದರೆ ಅವಶ್ಯವಾಗಿ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಕಾಯಿಲೆಗಳು ಸಹ ವಾಸಿಯಾಗುತ್ತವೆ.

 

 

7. ಕಾರ್ತಿಕ ಪೌರ್ಣಮಿಯ ದಿನ ಶಿವಲಿಂಗಕ್ಕೆ ತಾಜಾ ಹಸುವಿನ ಹಾಲು,ಗಂಗಾಜಲ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಶಿವಲಿಂಗಕ್ಕೆ ಅರ್ಪಿಸಿ ಪೂಜೆ ಪ್ರಾರ್ಥನೆ ಅರ್ಚನೆ ಧೂಪ ದೀಪಗಳ ನಂತರ ಅದನ್ನು ಪ್ರಸಾದವಾಗಿ ಸೇವಿಸಿ ಇದರಿಂದ ಮಾನಸಿಕ ಶಾಂತಿ ದೊರೆಯುವುದು ಜೊತೆಗೆ ಆರ್ಥಿಕವಾಗಿ ಲಾಭವು ಸಹ ಆಗುವುದು. ಹಾಗೇ ಇದು ಶಿವನನ್ನು ಪ್ರಸನ್ನಗೊಳಿಸುವ ಅತ್ಯಂತ ಸುಲಭ ವಿಧಾನವಾಗಿದೆ.

8. ಕಾರ್ತಿಕ ಪೂರ್ಣಿಮೆಯ ದಿನ ರಾತ್ರಿ ಮನೆಯ ಮುಖ್ಯದ್ವಾರದಲ್ಲಿ ಮಾವಿನ ಎಲೆಗಳಿಂದ ಮಾಡಿದ ಮಾವಿನ ತೋರಣವನ್ನು ಕಟ್ಟಬೇಕು. ಇದರಿಂದ ಬಹಳ ಶುಭವಾಗುವುದು . ಹಾಗೆ ಮನೆಯಲ್ಲಿರುವ ವಾಸ್ತು ಸಮಸ್ಯೆಗಳು ಕೂಡ ದೂರವಾಗುತ್ತವೆ.

9.ವೈವಾಹಿಕ ಜೀವನ ನಡೆಸುತ್ತಿರುವ ವ್ಯಕ್ತಿಯು ಕಾರ್ತಿಕ ಪೌರ್ಣಮಿಯ ದಿನ ಬ್ರಹ್ಮಚರ್ಯವನ್ನು ಪಾಲಿಸಬೇಕು ಅಥವಾ  ಆ ಒಂದು ದಿನವಾದರೂ ಸನ್ಯಾಸತ್ವವನ್ನು  ಪಾಲಿಸಬೇಕು ಇಲ್ಲವಾದಲ್ಲಿ  ಚಂದ್ರ ದೇವನು ನಿಮ್ಮ ಮೇಲೆ ದುಷ್ಪರಿಣಾಮವನ್ನು ಬೀರುವನು.

 

 

10.ಕಾರ್ತಿಕ ಪೌರ್ಣಮಿಯ ದಿನ ಸಂಜೆ ಚಂದ್ರನು ಉದಯಿಸಿದ ನಂತರ ಪಾಯಸ ಪ್ರಸಾದದಲ್ಲಿ ಗಂಗಾಜಲವನ್ನು ಮಿಶ್ರಣ ಮಾಡಿ ಲಕ್ಷ್ಮೀದೇವಿಗೆ ಪ್ರಸಾದವಾಗಿ ಸಮರ್ಪಿಸಿ. ನಂತರ ಪ್ರಸಾರವನ್ನು ನೀವು ಸಹ ಸೇವಿಸಿ ಇತರರಿಗೂ ವಿತರಣೆ ಮಾಡಬೇಕು.

ಕಾರ್ತಿಕ ಪೌರ್ಣಮಿಯನ್ನು  ತ್ರಿಪುರಿ ಪೌರ್ಣಮಿ ಅಥವಾ  ಗಂಗಾಸ್ನಾನ ಎಂದು ಸಹ ಕರೆಯಲಾಗುತ್ತದೆ. ಆದ್ದರಿಂದ ಭಗವಂತನಾದ ಶಿವನನ್ನು ಪೂಜಿಸುವುದರಿಂದ ನಿಮಗೆ ಒಳಿತಾಗುವುದು ಹಾಗೂ ವಿಷ್ಣು ಸಹ ಈ ದಿನವೇ ಮತ್ಸ್ಯ ಅವತಾರವನ್ನು ಪಡೆದಿದ್ದರಿಂದ ವಿಷ್ಣುವಿಗೆ ಸಹ ಈ ದಿನ ಬಹಳ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಜೊತೆಗೆ ಈ ದಿನ ರಾತ್ರಿ ಚಂದ್ರನಿಗೆ ಅರ್ಘ್ಯವನ್ನು ನೀಡುವುದನ್ನು ಮರೆಯಬೇಡಿ.

 

 

ಈ ಎಲ್ಲಾ ಉಪಾಯಗಳನ್ನು ನಿಮಗೆ ಪಾಲಿಸಲು ಆಗದಿದ್ದರೆ ಇದರಲ್ಲಿ ಯಾವುದಾದರೂ ಒಂದನ್ನಾದರೂ ಅವಶ್ಯವಾಗಿ ಮಾಡಿ ಮತ್ತು ಶಿವ ಮತ್ತು ವಿಷ್ಣು ದೇವರ ಕೃಪೆಗೆ ಪಾತ್ರರಾಗಿ ಚಂದ್ರನ ಆಶೀರ್ವಾದವನ್ನು ಸಹ ಪಡೆಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top