fbpx
ಕಿರುತೆರೆ

ತನ್ನ ಹಳೆ ಲವರ್ ಜಗನ್ ಜೊತೆಗೆ ಇದ್ದ ಸ್ನೇಹವನ್ನು ನೆನೆದು ಗೊಳೋ ಅಂತ ಕಣ್ಣೀರು ಸುರಿಸಿದ ಅನುಪಮಾ..!

ತನ್ನ ಹಳೆ ಲವರ್ ಜಗನ್ ಜೊತೆಗೆ ಇದ್ದ ಸ್ನೇಹವನ್ನು ನೆನೆದು ಗೊಳೋ ಅಂತ ಕಣ್ಣೀರು ಸುರಿಸಿದ ಅನುಪಮಾ..!

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ. ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ಈಗ ಬಿಗ್ ಬಾಸ್ ಮನೆಯ ಮಾಜಿ ಲವರ್ಸ್ ಗಳು ಸಕತ್ ಸುದ್ದಿಯಲ್ಲಿದ್ದಾರೆ.. ಅಕ್ಕ ಧಾರಾವಾಹಿಯ ಅನುಪಮಾ ಗೌಡ ಮತ್ತು ಗಾಂಧಾರಿ ಧಾರಾವಾಹಿಯ ಜಗನ್ನಾಥ ಈ ಮಾಜಿ ಲವರ್ಸ್ ಗಳು. ಮುಂದೆ ಓದಿ

 

 

ಬಿಗ್‌ಬಾಸ್‌ ಪ್ರಾರಂಭವಾದಾಗಿನಿಂದಲೂ ಮನೆಯಲ್ಲಿ ಅನುಪಮಾ ಗೌಡ ಮತ್ತು ಜಗನ್‌ ಮಧ್ಯೆ ಏನು ನಡೀತಿದೆ ಎಂಬ ಗೊಂದಲ ಪ್ರೇಕ್ಷಕರನ್ನು ಕಾಡುತ್ತಿತ್ತು. ನೆನ್ನೆ ತೇಜಸ್ವಿನಿ ಬಳಿ ಮಾತನಾಡುತ್ತಿದ್ದ ಅನುಪಮಾ ಜಗನ್ ವಿಚಾರ ಪ್ರಸ್ತಾಪಿಸಿದ್ದಾರೆ. ಜಗನ್ ಹೆಸರು ಹೇಳದೇ ಪರೋಕ್ಷವಾಗಿ ತಮ್ಮಿಬ್ಬರ ನಡುವಿನ ಸ್ನೇಹವನ್ನು ನೆನೆದು ಗಳಗಳನೆ ಕಣ್ಣೇರು ಸುರಿಸಿದ್ದಾರೆ.

 

 

ತನ್ನ ಮಾಜಿ ಲವರ್ ತನ್ನ ಕಣ್ಣು ಮುಂದೆ ಓಡಾಡಿಕೊಂಡು ಇರುವಾಗಲೇ ಅನುಪಮಾ ಗೌಡಗೆ ಹಳೆಯದ್ದೆಲ್ಲ ನೆನಪಾಗಿ ಅವರ ಪ್ರೀತಿ ಮುರಿದುಬಿದ್ದಿದ್ದು ಯಾಕೆ ಎಂಬ ಎಂಬ ಸಂಗತಿಯನ್ನ ನೆನೆದು ‘ಬಿಗ್ ಬಾಸ್’ ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಅನುಪಮಾರನ್ನ ಪ್ರೀತಿಸುತ್ತಿದ್ದ ಜಗನ್ನಾಥ್ ‘ಮದುವೆ ಆಗುವ ಬಗ್ಗೆ’ ಎಲ್ಲೂ, ಯಾರೊಂದಿಗೂ ಹೇಳಲೇ ಇಲ್ವಂತೆ ಆದರೆ ಜಗನ್ನಾಥ್ ರವರನ್ನ ಮದುವೆ ಆಗಬೇಕು ಎಂದು ಅನುಪಮಾಗೆ ಆಸೆ ಇತ್ತಂತೆ ಮತ್ತು ಮದುವೆಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶವನ್ನು ಅನುಪಮಾ ಕೇಳಿದ್ದರಂತೆ..

 

 

“ಲವ್ ಬ್ರೇಕಪ್ ಆಗಿರುವುದನ್ನ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗೆ ತುಂಬಾ ಕಷ್ಟ ಆಗ್ತಿದೆ. ಬ್ರೇಕ್ ಅಪ್ ಆಗಿ ಸುಮಾರು ಎರಡು ವರ್ಷ ಆಗಿದೆ. ಯಾವ ಕಾರಣಕ್ಕೆ ಬ್ರೇಕಪ್ ಆಗಿದ್ದು ಎಂದು ಇನ್ನು ನನಗೆ ಹೇಳಿಲ್ಲ. ನಾನಿನ್ನೂ ಅದೇ ನೋವಿನಲ್ಲಿ ಆ ನೋವಿನಿಂದ ಆಚೆ ಬರಲು ಆಗುತ್ತಿಲ್ಲ. ಜಗನ್ ಬರ್ತ್ಡೇ ದಿನ ನಾವಿಬ್ಬರು ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದೋ ಅದರ ನೆನಪಿಗೆ ನಮ್ಮಿಬ್ಬರ ಕೈ ಮೇಲೆ ಒಂದೇ ರೀತಿಯ ಟಾಟ್ಯೂ ಹಾಕಿಸಿಕೊಂಡಿದ್ದೆವು. ಆದರೆ ಜಗನ್ ಟಾಟ್ಯೂನ ಜಗನ್ ಬದಲಿಸಿಕೊಂಡಿದ್ದಾರೆ.” ಎಂದು ಅನುಪಮಾ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ.

 

 

ಇನ್ನು ಮಧ್ಯಾಹ್ನದ ವೇಳೆ ಅನುಪಮಾರ ಬಳಿ ಬಂದ ಜಗನ್‌, ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ರು. ನೀನೇ ನನ್ನನ್ನು ದೂರ ಇಟ್ಟಿದ್ದಿಯಾ ಎಂದು ಅನುಪಮಾರನ್ನು ದೂರಿ ಹೊರತು ಹೋದರು. ಅಷ್ಟಕ್ಕೂ ಜಗನ್‌-ಅನುಪಮಾ ಮಧ್ಯೆ ಬಿಗ್‌ಬಾಸ್‌ ಮುಂಚಿತವಾಗಿ ಏನೆಲ್ಲ ನಡೆದಿದೆ? ಎಂಬ ಪ್ರಶ್ನೆಗಳು ಪ್ರೇಕ್ಷಕರ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top