fbpx
ಭವಿಷ್ಯ

ಕನ್ಯಾ ರಾಶಿಯವರ ವ್ಯಕ್ತಿತ್ವ ಹೇಗಿದೆ ಅಂತ ಗೊತ್ತಾ ? ಈ ರಾಶಿಯವರ ವ್ಯಕ್ತಿತ್ವಕ್ಕೂ ರಾಶಿ ನಕ್ಷತ್ರಕ್ಕೂ ಇರುವ ಸಂಬಂಧವೇನು ತಿಳ್ಕೊಳ್ಳಿ..

ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣ, ಸ್ವಭಾವ ಮತ್ತು ವಿಶೇಷತೆಗಳು.

 

 

ರಾಯಭಾರಿ ಮತ್ತು ರಾಜತಾಂತ್ರಿಕತೆಯ ಗುಣದ ಮತ್ತೊಂದು ಹೆಸರೇ ಕನ್ಯಾ ರಾಶಿ.  ಈ ರಾಶಿಯವರು ಯಾವುದೇ ಸಮಸ್ಯೆಯನ್ನು ಸರಳ ಹಾಗೂ ಸುಲಭವಾಗಿ ಪರಿಹರಿಸಬಲ್ಲರು.

ಇವರು ತುಂಬಾ ಪ್ರಭಾವಶಾಲಿ ಅಂತ ಅಲ್ಲ . ಇವರಿಗೆ ಸಮಸ್ಯೆಯೂ ಸಿಕ್ಕರೂ ಅದನ್ನು  ಭರಿಸುವ ಗುಣ ಇವರಲ್ಲಿ ಇದೆ.ಆದು ರಕ್ತಗತ ಇವರಂತಹ ಉತ್ತಮ ಕೆಲಸಗಾರರು ಮತ್ತೊಬ್ಬರಿಲ್ಲ ಎಂದೇ ಹೇಳಬಹುದು .

ಕೆಲಸ ಯಾವುದೇ ಆಗಿರಲಿ ಸಣ್ಣ ಪುಟ್ಟ ಸಂಗತಿಗೂ ಹೆಚ್ಚಿನ ಗಮನ ಕೊಡುತ್ತಾರೆ. ಯಾವುದೇ ಸಂಗತಿ ಜಟಿಲ ಆಗುವ ತನಕ ಬಿಡುವುದಿಲ್ಲ. ಇದು ಅವರ ಸಂಗಾತಿಗೆ ತುಂಬಾ ಸಹಾಯ ಮಾಡುತ್ತದೆ. ಪತಿ ದೇವರು ತಮ್ಮ ಪತ್ನಿ ಸಾರಿಗೆ ಉಪ್ಪು ಜಾಸ್ತಿ ಹಾಕಿದ್ದರೂ ಸಹ ಸಿಟ್ಟಾಗದೆ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಂಡು ವಾತಾವರಣವನ್ನು ಹಗುರಗೊಳಿಸುತ್ತಾರೆ . ಈ ಅಂಶವೂ ಅವರ ಗೆಲುವಿಗೆ ದಾರಿ ಮಾಡಿಕೊಡುವ ಅತಿ ಮುಖ್ಯ ಸಂಗತಿಗಳಲ್ಲಿ ಒಂದಾಗಿದೆ.

 

 

ಇವರಿಗೆ ಓದುವುದಕ್ಕೆ ತುಂಬಾ ಇಷ್ಟ. ಅವರ ಅಕ್ಷರ ಪ್ರಯತ್ನ ಕಾರಣದಿಂದ ಪುಸ್ತಕ ಪತ್ರಿಕೆ ಅವರ ಕೈ ಅಲಂಕರಿಸಿ ಇರುತ್ತದೆ. ನಾವು ಯಾವುದನ್ನೇ ಆಗಲಿ ದರ್ಪ ಮಾಡುವ ಗುಣ ಇವರದ್ದು .ಮಜ್ಜಿಗೆ ಹುಳಿಗೆ ಮಜ್ಜಿಗೆ ಯಾಕೆ ಬೇಕು?  ಎನ್ನುವ ಸಂಗತಿಯು ತರ್ಕಕ್ಕೆ ಸಿಕ್ಕದೆ ಇರದು. ಸುಮ್ಮನೆ ಇರುವ ಜಾಯಮಾನ ಇವರದ್ದಲ್ಲ.

ಇವರಿಗೆ ವಿಜ್ಞಾನ, ಕಲೆ ಹಾಗೂ ಭಾಷೆಗಳ ಕಲಿಕೆಯಲ್ಲಿ ಅಪಾರವಾದ ಆಸಕ್ತಿ. ರಾಶಿಗಳಲ್ಲಿ ಆರನೇ ಸ್ಥಾನ ಪಡೆದಿರುವ  ಈ ರಾಶಿಗೆ ಅಧಿಪತಿ ಬುಧ ಗ್ರಹ. ಆದ್ದರಿಂದ  ಈ ಬುಧ  ಗ್ರಹದವರಿಗೆ ಬುದ್ಧಿ ಜಾಸ್ತಿ .

ಈ ಬುಧ ಗ್ರಹದ ರಾಶಿಯವರಿಗೆ ಹೆಚ್ಚಾಗಿ ಆಮಶಂಕೆ ಭೇದಿ, ಮಲಬದ್ಧತೆ, ಪೋಷಕಾಂಶದ ಕೊರತೆ,  ಸಹ ಉಂಟಾಗಲಿದೆ ಇದರ ಜೊತೆಗೆ ಅಪೆಂಡಿಸೈಟಿಸ್ ಮತ್ತು  ಕಾಲರಾದಂತಹ ಸಮಸ್ಯೆಗಳು ಸಹ ಕಾದು ಕುಳಿತಿರುತ್ತವೆ.

 

 

ಬೇಸಿಗೆ ಕಾಲದಲ್ಲಿ ತಂಪಾಗಿ   ಫ್ಯಾನ್ ಇಲ್ಲವೇ ಹವಾ ನಿಯಂತ್ರಕಗಳು ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಹೀಟರ್ ಇರುವ ಕಡೆ ಕೆಲಸ ಮಾಡಿಕೊಂಡು ಇರುವುದಕ್ಕೆ ತಕ್ಕರಾದವರು. ಕಚೇರಿಯ ಕೆಲಸ ನೂರಕ್ಕೆ ನೂರರಷ್ಟು ಹೊಂದುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top