fbpx
ಸಮಾಚಾರ

ಕೊಡಗಿನಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಪುತ್ತಳಿ ಅನಾವರಣ…!

ಕೊಡಗಿನಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಪುತ್ತಳಿ ಅನಾವರಣ…!

 

 

ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಪುತ್ತಳಿಯನ್ನು ಕೊಡಗಿನಲ್ಲಿ ಸ್ಥಾಪಿಸಲಾಗಿದೆ. ಕೊಡಗು ಜಿಲ್ಲೆಯ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸಿದ್ದರು. ಮುಂದೆ ಓದಿ

 

 

ಕೊಡಗು ಜಿಲ್ಲೆಯ ಗೋಣಿಕೊಪ್ಪಲ್ ಕಾವೇರಿ ಕಾಲೇಜಿನ ಆವರಣದಲ್ಲಿ ಇಂದು(ನವೆಂಬರ್ 04) ಬೆಳಿಗ್ಗೆ 10.30 ಫೀಲ್ಡ್ ಮಾರ್ಷಲ್ ಕ್ಯಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಹೊಸದಾಗಿ ಮಾಡಿದ ಕಂಚಿನ ಪ್ರತಿಮೆಯನ್ನು ಜನರಲ್ ಬಿಪಿನ್ ರಾವತ್ ಅನಾವರಣಗೊಳಿಸಲಿದ್ದಾರೆ. ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದು ಯಶಸ್ವಿಯಾಗಿದೆ. ಈ ಸಂದರ್ಭ ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

 

 

ಕೊಡಗಿನ ಕೊಡವ ಮನೆತನದ ಕೊಡಂದೆರಾ ಮಾದಪ್ಪ ಕಾರಿಯಪ್ಪ 28 ಜನವರಿ 1900 ರಲ್ಲಿ ಕೊಡಗಿನ ಶನಿವಾರಸಂತೆ ಹಳ್ಳಿಯಲ್ಲಿ ಹುಟ್ಟಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಭಾರತ ಪಾಕಿಸ್ಥಾನ ವಿಭಜನೆಯಾದಾಗ ಸೇನಾ ಪಡೆಯನ್ನು ಸಮಾನವಾಗಿ ಇಬ್ಭಾಗ ಮಾಡುವ ಜವಾಬ್ಧಾರಿಯನ್ನು ಕೆ. ಎಂ. ಕಾರಿಯಪ್ಪನವರು ವಹಿಸಿಕೊಂಡಿದ್ದರು.

 

 

1949 ಜನವರಿ 15 ರಂದು ಭಾರತೀಯ ಸೇನಾ ಪಡೆಗಳ (ಭೂ ಸೇನೆ, ವಾಯು ಸೇನೆ, ನೌಕಾಪಡೆ) ಪ್ರಥಮ ಮುಖ್ಯಸ್ಥ ” ಪ್ರಥಮ ಕಮಾಂಡರ್ ಇನ್ ಚೀಫ್” ಪಧವಿಯನ್ನು ಪಡೆದು ಬ್ರಿಟಿಷ್ ಸೇನಾಧಿಕಾರಿ ಜನರಲ್ ರಾಯ್ ಬುಚ್ಚರ್’ನಿಂದ ಅಧಿಕಾರವನ್ನು ತೆಗೆದುಕೊಂಡಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top