fbpx
ಕ್ರೀಡೆ

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮೇಲೆ ಲೈಂಗಿಕ ಕಿರುಕುಳ..!

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮೇಲೆ ಲೈಂಗಿಕ ಕಿರುಕುಳ..!

 

 

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಬ್ಯಾಡ್ಮಿಟನ್ ತಾರೆ ಪಿವಿ ಸಿಂಧು ಅವರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಇಂದು (ನವೆಂಬರ್ 04) ನಡೆದಿದೆ. ತಮಗೆ ಲಿಂಗಿಕ ಕಿರುಕುಳ ವಾಗಿರುವ ಬಗ್ಗೆ ಸ್ವತಃ ಪಿವಿ ಸಿಂಧುರವರೇ ಹೇಳಿಕೊಂಡಿದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾದ ಈ “ಕೆಟ್ಟ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ. ಮುಂದೆ ಓದಿ.

 

 

ಇಂದು ಬೆಳಿಗ್ಗೆ ಪಿವಿ ಸಿಂಧು ಅವರು 6E-608ನ ಇಂಡಿಗೋ ಏರ್’ಲೈನ್ಸ್’ನಲ್ಲಿ ಮುಂಬಯಿಗೆ ಹೋಗುತ್ತಿದ್ದಾಗ ವಿಮಾನ ಸಂಸ್ಥೆಯ ಸಿಬ್ಬಂದಿಯಾದ ಅಜಿತೇಶ್ ಎಂಬಾತ ಪಿವಿ ಸಿಂಧು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.. ವಿಮಾನ ಸಿಬ್ಬಂದಿ ತೋರಿದ ದುರ್ವರ್ತನೆಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆತನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ವಿಮಾನ ಸಂಸ್ಥೆಗೆ ಆಗ್ರಹಿಸಿದ್ದಾರೆ.

 

 

ಈತನ ಕೆಟ್ಟ ವರ್ತನೆಯ ಬಗ್ಗೆ ಟ್ವೀಟ್ ಮಾಡಿರುವ ಸಿಂಧೂ “ಇದನ್ನು ಹೇಳಲು ತುಂಬಾ ನೋವಾಗುತ್ತದೆ, ಇಂದು ನನಗೆ ಒಂದು ಕೆಟ್ಟ ಅನುಭವವಾಗಿದೆ..6E-608ನ ಇಂಡಿಗೋ ಏರ್’ಲೈನ್ಸ್’ನಲ್ಲಿ ಮುಂಬಯಿಗೆ ಹೋಗುತ್ತಿದ್ದಾಗ ವಿಮಾನ ಸಂಸ್ಥೆಯ ಸಿಬ್ಬಂದಿಯಾದ ಅಜಿತೇಶ್ ಎನ್ನುವವನು ನನ್ನ ಹತ್ತಿರ ಕೆಟ್ಟದಾಗಿ ವರ್ತಿಸಿದ್ದಾನೆ..ಈ ವಿಚಾರವಾಗಿ ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ದಯವಿಟ್ಟು ಗಗನಸಖಿ Ms ಅಶಿಮಾರನ್ನು ಸಂಪರ್ಕಿಸಿ.” ಎಂದು ಟ್ವೀಟ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top