fbpx
ದೇವರು

ಮದುವೆಯಾಗಿ ಬಹಳ ದಿನ ಕಳೆದ್ರೂ ಮಕ್ಕಳಾಗಿಲ್ಲ ಅನ್ನೋರು ಈ ದೇವರಲ್ಲಿ ಹರಕೆ ಮಾಡ್ಕೊಂಡು ಒಂದು ದಿನ ಈ ದೇವಾಲಯದಲ್ಲಿ ಮಲಗಿ ಬನ್ನಿ ಸಾಕು ಸಂತಾನ ಫಲ ಸಿಗುತ್ತೆ

ಮದುವೆಯಾಗಿ ಬಹಳ ದಿನ ಕಳೆದ್ರೂ ಮಕ್ಕಳಾಗಿಲ್ಲ ಅನ್ನೋರು ಈ ದೇವರಲ್ಲಿ ಹರಕೆ ಮಾಡ್ಕೊಂಡು ಒಂದು ದಿನ ಈ ದೇವಾಲಯದಲ್ಲಿ ಮಲಗಿ ಬನ್ನಿ ಸಾಕು ಸಂತಾನ ಫಲ ಸಿಗುತ್ತೆ

 

 

ಮಕ್ಕಳಾಗದಿರುವ ಕೊರಗು ಇತ್ತೀಚಿನ ದಿನಗಳಲ್ಲಿ ಬಹಳ ಜನರನ್ನು ಹೀನಾಯವಾಗಿ ಕಾಡುತ್ತಿದೆ , ಅಂತಹ ಜನರು ಕಂಗೆಟ್ಟು ಬಹಳಷ್ಟು ದುಡ್ಡು ಖರ್ಚು ಮಾಡಿದರು ಪರಿಣಾಮಕಾರಿಯಾಗಿ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ , ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಅಥವಾ ಖಾಸಗಿ ಸಮಾರಂಭಗಳಲ್ಲಿ ಯಾರನ್ನು ಭೇಟಿ ಮಾಡಿದರು ‘ನಿಮಗೆ ಮಗು ಯಾವಾಗ?’ ಎಂದು ಕೇಳುವ ಸಂಗತಿ ಬಹಳ ಮುಜುಗರಕ್ಕೆ ದಾರಿ ಮಾಡಿಕೊಡುತ್ತದೆ .

ಆದ್ರೆ ಈ ದೇವಸ್ಥಾನಕ್ಕೆ ಹೋಗಿ ಹರಕೆ ತೀರಿಸಿ ಬಂದರೆ ಮಕ್ಕಳಾಗುತ್ತವೆ ಎಂದು ಅನೇಕ ಭಕ್ತಾದಿಗಳು ನಂಬಿದ್ದಾರೆ , ಆ ದೇವಿಗೆ ಅಂತಹ ಶಕ್ತಿ ಇದ್ದು , ಯಾವುದೇ ವಿಗ್ನವಾದರೂ ಆದಷ್ಟು ಬೇಗ ನಿವಾರಿಸುತ್ತಾಳೆ ಎಂದು ನಂಬಲಾಗಿದೆ , ಇಲ್ಲಿ ಅಷ್ಟೇ ಅಲ್ಲ ವಿದೇಶಗಳಿಂದಲೂ ಮಹಿಳೆಯರು ಬಂದು ದೇವರಲ್ಲಿ ಬೇಡಿಕೊಂಡು ಸಂತಾನ ಫಲ ಪಡೆದ ನಿದರ್ಶನಗಳು ಇವೆ .

 

ಈ ದೇವಾಲಯ ಇರುವುದು ಹಿಮಾಚಲ ಪ್ರದೇಶದ ಲದ್ಭಾರೋಲ್ ನಗರದ ಸಿಮಾಸ್ ಎಂಬ ಗ್ರಾಮದಲ್ಲಿ ಇಲ್ಲಿರುವ ದೇವಾಲಯ ರಸ್ತೆಯಲ್ಲಿ ಈ ದೇವಾಲಯವಿದೆ.

ಈ ದೇವಾಲಯಕ್ಕೆ ಬಂದು ದೇವಸ್ಥಾನದ ಆವರಣದಲ್ಲಿ ಒಂದು ರಾತ್ರಿ ಮಲಗಿದರೆ ಸಾಕು ದೇವಿ ಸಂತಾನ ಫಲ ಕರುಣಿಸುತ್ತಾಳಂತೆ.

 

 

ನವರಾತ್ರಿಯ ಸಂಧರ್ಭದಲ್ಲಿ ನಡೆಯುವ ವಿಶಿಷ್ಟ ವ್ರತದ ಸಮಯದಲ್ಲಿ ಹಿಮಾಚಲ ಪ್ರದೇಶದ ತಪ್ಪಲಿನಲ್ಲಿರುವ ಈ ದೇವಾಲಯಕ್ಕೆ ಲಕ್ಷಾಂತರ ಮಕ್ಕಳಾಗದೇ ಇರುವ ದಂಪತಿಗಳು ಆಗಮಿಸುತ್ತಾರೆ , ಉತ್ತರ ಭಾರತವಷ್ಟೇ ಅಲ್ಲ ನೆರೆ ದೇಶಗಳ ಜನರು ಬಂದು ತಾಯಿಯಲ್ಲಿ ಭಕ್ತಿಯಿಂದ ಬೇಡಿಕೊಂಡು ವ್ರತವನ್ನು ಆಚರಿಸುತ್ತಾರೆ .

ಗಾಢ ನಿದ್ರೆಗೆ ಹೋದ ಬಳಿಕ ತಾಯಿ ಕನಸಿನಲ್ಲಿ ಕಾಣಿಸಿಕೊಂಡು ವರವನ್ನು ಕರುಣಿಸುತ್ತಾಳೆ , ಇಲ್ಲಿನ ದೇವಿಗೆ ‘ಸಿಮ್ಸ’ ಸಿಮಾಸ್ ಎಂಬ ಗ್ರಾಮದಲ್ಲಿ ಇರುವ ಕಾರಣ ಈ ಹೆಸರು ಬಂದಿರಬಹುದು ಎಂಬುದು ಹಲವರ ಅಭಿಪ್ರಾಯ.

 

 

ಇನ್ನು ಅನೇಕರು ಅನುಭವ ಹೊಂದಿರುವ ಪ್ರಕಾರ ಹೆಣ್ಣು ಮಗು ಹುಟ್ಟುವುದಾದರೆ ಸೀಬೆ ಕಾಯಿ ಕನಸಲ್ಲಿ ಬರುವುದಂತೆ ಗಂಡು ಮಗುವಾದರೆ ಬೆಂಡೆ ಕಾಯಿ ಕಾಣಿಸಿಕೊಳ್ಳುವುದಂತೆ , ಒಂದು ವೇಳೆ ಇತರ ಘನ ವಸ್ತುಗಳು ಕಾಣಿಸಿಕೊಂಡರೆ ಆ ತಾಯಿಗೂ ಮಕ್ಕಳಾಗುವುದಂತೆ , ಇಲ್ಲಿನ ವಾಡಿಕೆಯ ಪ್ರಕಾರ ಕನಸು ಬಿದ್ದ ನಂತ್ರ ದೇವಾಲಯದ ಆವರಣದಿಂದ ಹೊರಟು ಬಿಡಬೇಕು ಇಲ್ಲವಾದರೆ ಚರ್ಮ ವ್ಯಾಧಿ ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತದೆ .

 

 

ಅನೇಕರು ಮೂಢನಂಬಿಕೆ ಎನ್ನಬಹುದು ಆದರೆ ಈ ದೇವಿಯ ಆಶೀರ್ವಾದ ಪಡೆದು ಎಷ್ಟೋ ದಂಪತಿಗಳಿಗೆ ಮಕ್ಕಳಾಗಿರುವುದು ಮಾತ್ರ ಸುಳ್ಳಲ್ಲ , ಮಕ್ಕಳಾದ ಮೇಲೆ ಮಕ್ಕಳ ದೀರ್ಘಾಯುಷ್ಯಕ್ಕೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರಂತೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top