fbpx
ಮನೋರಂಜನೆ

50 ದಿನಗಳನ್ನು ಪೂರೈಸಿ ಶತಕದತ್ತ ಮುನ್ನುಗ್ಗುತ್ತಿರುವ ಭರ್ಜರಿ ಚಿತ್ರ ಬಾಕ್ಸ್ ಆಫೀಸ್’ನಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

50 ದಿನಗಳನ್ನು ಪೂರೈಸಿ ಶತಕದತ್ತ ಮುನ್ನುಗ್ಗುತ್ತಿರುವ ಭರ್ಜರಿ ಚಿತ್ರ ಬಾಕ್ಸ್ ಆಫೀಸ್’ನಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

 

 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಸಿನಿಮಾ ಮೊನ್ನೆ ಅರ್ಧ ಶತಕವನ್ನು ಪೂರೈಸಿ 100ನೇ ದಿನದತ್ತ ದಾಪುಗಾಲು ಹಾಕುತ್ತಿದೆ.. ಚಿತ್ರ ಮಂದಿರಗಳಲ್ಲಿ ಸತತ ಐವತ್ತು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಗೊಂದಿಯುವ ಭರ್ಜರಿ ಚಿತ್ರ ರಾಜ್ಯದ ಸುಮಾರು 129 ಚಿತ್ರ ಮಂದಿರಗಳಲ್ಲಿ 50 ದಿನಗಳನ್ನ ಪೂರೈಸಿದೆ.. ಐವತ್ತು ದಿನಗಳಲ್ಲಿ ಭರ್ಜರಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು ಕೋಟಿ ಗೊತ್ತಾ? ಮುಂದೆ ಓದಿ

 

 

ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನ ಭರ್ಜರಿ ಸಿನಿಮಾ ವಾಪಸ್ ಪಡೆದುಕೊಂಡಿತ್ತು.ಬಿಡುಗಡೆಯಾದ ಒಂದೇ ವಾರದಲ್ಲಿ 25 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈ ಮೂಲಕ ಧ್ರುವ ಸರ್ಜಾ ಅಭಿನಯದ ಮೂರನೇ ಚಿತ್ರವೂ ಸೂಪರ್‌ ಹಿಟ್‌ ಆಗಿ ಹ್ಯಾಟ್ರಿಕ್ ಆಕ್ಷನ್ ಪ್ರೈನ್ಸ್ ಆಗಿ ಮಿಂಚಿದ್ದರು.

 

 

ಗಾಂಧಿನಗರದ ಡಿಸ್ಟ್ರಿಬ್ಯುಟರ್’ಗಳ ಪ್ರಕಾರ ‘ಭರ್ಜರಿ’ ಚಿತ್ರ ಐವತ್ತು ದಿನಗಳಿಗೆ 69 ಕೋಟಿ ಗಳಿಕೆ ಮಾಡಿದ್ದು ಚಿತ್ರಕ್ಕೆ ಈಗಲೂ ಬಹಳ ಬೇಡಿಕೆ ಇದೇ ಎಂದು ವಿತರಕರು ಹೇಳುತ್ತಾರೆ. ವಿಶೇಷವೆಂದರೆ ಉತ್ತರಕರ್ನಾಟಕ ಭಾಗದ ಥಿಯೇಟರ್ ಗಳಲ್ಲಿ ಇಂದಿಗೂ ಭರ್ಜರಿ ಚಿತ್ರವು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆಯಂತೆ.

 

 

ಅಂದಹಾಗೆ ಭರ್ಜರಿ ಚಿತ್ರವನ್ನು ಬಹದ್ದೂರ್ ಖ್ಯಾತಿಯ ಖ್ಯಾತಿಯ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಚಿತ್ರದಲ್ಲಿ ದ್ರುವ ಸರ್ಜಾ ಅವರಿಗೆ ರಚಿತಾ ರಾಮ್ ಮತ್ತು ಹರಿಪ್ರಿಯಾ ನಾಯಕಿಯರಾಗಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಭರ್ಜರಿ’ ಚಿತ್ರವನ್ನು ಕನಕಪುರ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top