ಬಿಜೆಪಿ ಹೆಸರಿನಿಂದ ಕನ್ನಡ ವಿರೋಧಿ ಹೇಳಿಕೆ..!ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ.
ಕಳೆದ ಎರಡು ಮೂರು ದಿನಗಳಿಂದ ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ರೀತಿಯಲ್ಲಿ ಮಾಡಿರುವ ಟ್ವೀಟ್’ವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗುತ್ತಿದೆ. BJP ತುಳುನಾಡು ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಈ ಟ್ವೀಟ್ ಪೋಸ್ಟ್ ಆಗಿದೆ. ಮುಂದೆ ಓದಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನರು “ಇಂದು ಪಕ್ಷದ ಕಚೇರಿಯಲ್ಲಿ ಕನ್ನಡ ಬಾವುಟ ಹಾರಿಸಿ, ಕನ್ನಡಾಂಬೆಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು” ಎಂದು ಟ್ವೀಟ್ ಮಾಡಿದ್ದರು.. ಈ ಟ್ವೀಟ್ ಗೆ BJP ತುಳುನಾಡು ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ರಿಪ್ಲೆ ಬಂದಿದೆ.
1956 ನವೆಂಬರ್ 01 ರಂದು ಕರ್ನಾಟಕ, ಕೇರಳ ನಡುವೆ ತುಳುನಾಡು ಹಂಚಿ ಹೋಗಿದ್ದು, ಕರ್ನಾಟಕ ರಾಜ್ಯೋತ್ಸವ ತುಳುನಾಡಿನ ಪಾಲಿಗೆ ಕರಾಳ ದಿನಾಚರಣೆ ಎಂದು `@Bjp4Tulunad ಹೆಸರಿನ ಟ್ವಿಟ್ಟರ್ ಖಾತೆ ಯಡಿಯೂರಪ್ಪನವರ ಟ್ವಿಟರ್’ಗೆ ರಿಪ್ಲೆ ಬಂದಿದೆ. ಈಗ ಈ ಟ್ವೀಟ್’ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಬಿಜೆಪಿಯ ದಕ್ಷಿಣಕನ್ನಡ ಘಟಕವೇ ಈ ಟ್ವೀಟ್ ಮಾಡಿದೆ ಎಂದು ಭಾವಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. .ಆದರೆ ಈ ಟ್ವೀಟ್ ಮಾಡಿರುವ ಅಕೌಂಟ್ ಬಿಜೆಪಿಯ ಅಧಿಕೃತ ಖಾತೆಯಲ್ಲ ಎಂದು ಬಿಜೆಪಿ ಹೇಳಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
