fbpx
ಭವಿಷ್ಯ

ಮಹಿಳೆಯರು ಯಾವ ತರಹದ ಹೂವು ಮುಡಿದರೆ ಆರೋಗ್ಯ ಮತ್ತು ಅದೃಷ್ಟದ ವಿಷಯದಲ್ಲಿ ಒಳ್ಳೆಯದು

ಮಹಿಳೆಯು ಯಾವ ತರದ ಹೂವನ್ನು ಮುಡಿದರೆ ಆರೋಗ್ಯ ಮತ್ತು ಅದೃಷ್ಟವು ಒಲಿದು ಬರುವುದು.

 

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ತಲೆಯಲ್ಲಿ ಹೂ ಮುಡಿಯುವುದು ತುಂಬಾ ಸಾಮಾನ್ಯ ವಿಷಯ. ಪ್ರತಿದಿನ ಮಹಿಳೆಯರು ಅವರ ಅಲಂಕಾರದಲ್ಲಿ ಹೂವನ್ನು ಬಳಸುತ್ತಾರೆ .ಆದರೆ ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಹಲವು ಧಾರ್ಮಿಕ ಉಪಯೋಗಗಳು ಸಹ ಇದರಲ್ಲಿ ಅಡಗಿವೆ. ಒಂದೊಂದು ಹೂವು ಸಹ ಒಂದೊಂದು ವಿಶೇಷ ವೈಶಿಷ್ಟ್ಯತೆಯನ್ನು ಹೊಂದಿದೆ. ಹೂವು ಪ್ರೀತಿ, ಸಂತೋಷ , ಅದೃಷ್ಟದ ಮತ್ತು  ಶ್ರೇಯಸ್ಸಿನ  ಪ್ರತೀಕವೆಂದು ಭಾವಿಸಲಾಗಿದೆ.

 

ಮಲ್ಲಿಗೆ ಹೂವು.

 

 

ಸುವಾಸನೆಯಿಂದ ಕೂಡಿದ ಈ ಮಲ್ಲಿಗೆ ಹೂವು ಶ್ರೇಯಸ್ಸು ಮತ್ತು ಅದೃಷ್ಟಕ್ಕೂ ಪ್ರತೀಕವಾಗಿದ್ದು ಹೂವುಗಳ ರಾಣಿ ಎಂದೇ ಮಲ್ಲಿಗೆಯನ್ನು ಕರೆಯಲಾಗುತ್ತದೆ. ವೇದಗಳಲ್ಲಿ ಮಲ್ಲಿಗೆ ಹೂವನ್ನು ಉಲ್ಲೇಖಿಸಲಾಗಿದೆ. ಹೂವೆಂದರೆ ಭಗವಾನ್ ಶ್ರೀ ವಿಷ್ಣು ದೇವರಿಗೆ ತುಂಬಾ ಪ್ರೀತಿ ಮತ್ತು ಇಷ್ಟ ಇದರ ಸುವಾಸನೆಯಿಂದ ಮನಸ್ಸಿನಲ್ಲಿ  ಶಾಂತಿಯ ಭಾವನೆ ಮೂಡುತ್ತದೆ ಆದ್ದರಿಂದ ಮಹಿಳೆಯರು ಮಲ್ಲಿಗೆ ಹೂವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

 

ಗುಲಾಬಿ.

 

ಇದು ಪ್ರೀತಿ ಪ್ರೇಮ ಮತ್ತು ಸ್ನೇಹದ ಸಂಕೇತವಾಗಿದೆ. ಪ್ರೀತಿ ,ಪ್ರೇಮವನ್ನು ವ್ಯಕ್ತಪಡಿಸಲು ಈ ಹೂವನ್ನು ಅಧಿಕವಾಗಿ ಬಳಸಲಾಗುತ್ತದೆ. ಈ ಗುಲಾಬಿ ಹೂವಿನಿಂದ ಮಹಾದೇವನಾದ ಶಿವನಿಗೆ ಮತ್ತು ಗಣೇಶನಿಗೆ ಪೂಜೆ ಮಾಡಿದರೆ ಅವರ ಅನುಗ್ರಹ ಶೀಘ್ರವಾಗಿ ದೊರೆಯುವುದು. ಈ ಹೂವನ್ನು ಮಹಿಳೆಯರು ಮುಡಿಯುವುದರಿಂದ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ.

 

ಸೇವಂತಿಗೆ ಹೂವು.

 

 

ಈ ಹೂವು ಸಂತೋಷದ ಸಂಕೇತವಾಗಿದೆ.ಮಹಿಳೆಯರು ಈ ಹೂವನ್ನು ಮುಡಿಯುವುದರಿಂದ ಅವರ ಕುಟುಂಬದಲ್ಲಿ ಸಂತೋಷ ಮತ್ತು ಅದೃಷ್ಟ ಒಲಿದು ಬರುತ್ತದೆ.ಲ ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ. ಈ ಹೂವನ್ನು ಮಹಿಳೆಯರು ಮುಡಿಯುವುದರಿಂದ ಐಷಾರಾಮಿ ಜೀವನ ಹೊಂದುವ ಅದೃಷ್ಟ ಅವರದ್ದಾಗುವುದು.

 

ದಾಸವಾಳದ ಹೂವು.

 

 

ಈ ಹೂವನ್ನು ಶಕ್ತಿಯ ಪ್ರತಿರೂಪವಾದ ಕಾಳಿಕಾ ದೇವಿಯನ್ನು ಪೂಜಿಸಲು ಹೆಚ್ಚಾಗಿ ಬಳಸಲಾಗುತ್ತದೆ.ಆದ್ದರಿಂದ ಈ ಹೂವು ಶಕ್ತಿಯ ಸಂಕೇತವಾಗಿದೆ.ಈ ದಾಸವಾಳದ ಹೂವನ್ನು ಮಹಿಳೆಯರು ಮುಡಿಯುವುದರಿಂದ ಬೇರೆಯವರ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಇದು ತಡೆಯುತ್ತದೆ. ಅಷ್ಟೇ  ಅಲ್ಲದೆ ಸಾಲದ ಬಾಧೆಯ ಸುಳಿಯಿಂದ ಶೀಘ್ರವೆೇ ದೂರವಾಗಿ  ಐಶ್ವರ್ಯಗಳನ್ನು ಸಹ ಪಡೆಯಬಹುದಾಗಿದೆ.

ಮಹಿಳೆಯರು ಈ ಎಲ್ಲ ಹೂವುಗಳನ್ನು ಮುಡಿಯುವುದರಿಂದ ಸುಖ, ಸಂತೋಷದ ಜೊತೆಗೆ ಅಷ್ಟೈಶ್ವರ್ಯಗಳು ಸಹ  ನಿಮಗೆ ಜೀವನದಲ್ಲಿ ಲಭಿಸುತ್ತವೆ. ಇದರ ಜೊತೆಗೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸ್ಥಿರವಾಗಿ ನೆಲೆಸಲು ಈ ಹೂವುಗಳು ಸಹಾಯ ಮಾಡುತ್ತವೆ. ಆದ್ದರಿಂದ ಮಹಿಳೆಯರು ಹೂವನ್ನು  ಮುಡಿಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top