fbpx
ಸಮಾಚಾರ

ಮೋದಿಗೆ ಫೆವರೇಟ್ ಆದ ತಿಂಡಿಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ..?

ಮೋದಿಗೆ ಫೆವರೇಟ್ ಆದ ತಿಂಡಿಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ..?

 

 

ಪ್ರಧಾನಿ ನರೇಂದ್ರ ಮೋದಿ ಅವರ ಫೆವರೇಟ್ ತಿನಿಸುಗಳ ಪೈಕಿ ಒಂದಾದ ಖಿಚಡಿ (ಅಕ್ಕಿ, ಬೇಳೆ, ತರಕಾರಿ ಮಿಶ್ರಣದ ಬಾತ್ ರೀತಿಯ ಆಹಾರ)ಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಗಳಲ್ಲಿ ಹರಿದಾಡುತ್ತಿದೆ.. ಈ ನಿಟ್ಟಿನಲ್ಲಿ ಇದೇ ನವೆಂಬರ್ 3ರಿಂದ ದೆಹಲಿಯಲ್ಲಿ “ಗ್ರೇಟ್ ಇಂಡಿಯಾ ಫುಡ್ ಸ್ಟ್ರೀಟ್” ಎಂಬ ಕಾರ್ಯಕ್ರಮವನ್ನು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದೆ..

 

 

ಈ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಚಾಲನೆ ಕೊಟ್ಟಿದ್ದು ನೆನ್ನೆ ಒಂದೇ ಪಾತ್ರೆಯಲ್ಲಿ 800ಕೆ.ಜಿ ತೂಕದ ದೊಡ್ಡ ಖಿಚಡಿಯನ್ನು ತಯಾರಿಸಲಾಗಿದೆ..ಹಾಗು ಖಿಚಡಿಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ ನೀಡಲಾಗುವುದು ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಚರ್ಚೆಗೆ ಕಾರಣವಾಗಿದೆ. ಆದರೆ ಈ ಸುದ್ದಿ ನಿಜವೋ ಸುಳ್ಳೋ ಅಂದು ಯಾರೊಬ್ಬರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

 

 

ಭಾರತೀಯ ಆಹಾರಗಳನ್ನು ವಿಶ್ವಮಟ್ಟದಲ್ಲಿ ಪ್ರಚಾರಗೊಳಿಸಲು ಕೇಂದ್ರ ಸರ್ಕಾರ “ಗ್ರೇಟ್ ಇಂಡಿಯಾ ಫುಡ್ ಸ್ಟ್ರೀಟ್” ಎಂಬ ಆಹಾರ ಮೇಳ ಕಾರ್ಯಕ್ರಮವನ್ನು ದೆಹಲಿಯಲ್ಲಿಆಯೋಜಿಸಿದೆ ಅದು ಬಿಟ್ಟರೆ, ಕಿಚಡಿಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ ನೀಡುವ ಯಾವುದೇ ನಿರ್ಧಾರವಿಲ್ಲ ಎಂಬ ಮಾತುಗಳೂ ಕೇಳಿ ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top