fbpx
ದೇವರು

ತುಳಸಿ ಪೂಜೆ ಮಾಡುವಾಗ ಈ ಮಂತ್ರಗಳು ಹೇಳ್ಕೊಂಡ್ರೆ ಮನೆಯ ಕಷ್ಟಗಳು ನಿವಾರಣೆಯಾಗುತ್ತೆ ಅಷ್ಟೇ ಅಲ್ದೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ

ತುಳಸಿ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ.

 

ಪ್ರತಿ ಮನೆಯಲ್ಲಿಯೂ ಖಚಿತವಾಗಿ ತುಳಸಿ ಸಸ್ಯ ಇದ್ದೇ ಇರುತ್ತದೆ. ಪ್ರತಿ ದಿನ ಅದಕ್ಕೆ ನೀರು ಹಾಕುವುದು ಮತ್ತು ಪೂಜಿಸುವುದು ನಮ್ಮ ಹಿಂದೂಗಳ ಸಂಪ್ರದಾಯದಲ್ಲಿ ಬಂದಿರುವ ಆಚರಣೆಯಾಗಿದೆ  .

 

ಆದರೆ ತುಳಸಿ ಗಿಡಕ್ಕೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರದ ಬಗ್ಗೆ ಈಗ ನಾವು ತಿಳಿಯೋಣ. ಹಾಗೆ ಈ ಮಂತ್ರವನ್ನು ಜಪಿಸಿದಾಗ ಆಗುವ ಲಾಭಗಳನ್ನು ಸಹ ತಿಳಿಯೋಣ …

ತುಳಸಿ ಗಿಡವನ್ನು ತುಳಸಿ ದೇವಿಯ ರೂಪದಲ್ಲಿ ಪವಿತ್ರವಾದ ಸಸ್ಯವೆಂದು ಸಹ ಭಾವಿಸುತ್ತೇವೆ. ಪುರಾಣಗಳ ಪ್ರಕಾರ ಯಾರ ಮನೆಯಲ್ಲಿ ತುಳಸಿ ದೇವಿ ನೆಲೆಸಿರುತ್ತಾಳೋ ಅವರ ಮನೆಯಲ್ಲಿ ಕಷ್ಟಗಳು ಇರುವುದಿಲ್ಲವೆಂದು ಹೇಳುತ್ತಾರೆ.

ಪ್ರತಿ ದಿನ ತುಳಸಿ ಗಿಡವನ್ನು ಪೂಜಿಸುವುದು ಅಥವಾ ಕೆಲವು ಸಮಯ ಆ ಗಿಡವನ್ನು ನೋಡುತ್ತಾ ಇದ್ದರೆ ಪಾಪಗಳು ತೊಲಗಿ ಜೀವನದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ.

ತುಳಸಿ ಗಿಡವನ್ನು ತುಂಬಾ ಪವಿತ್ರವಾಗಿ ನೋಡಿಕೊಳ್ಳಬೇಕು. ಅಪವಿತ್ರವಾದ ಸ್ತ್ರೀಯರು ನೆರಳು ಬೀಳದಂತೆ ನೋಡಿಕೊಳ್ಳಬೇಕು.

ಪ್ರತಿದಿನ ಸಂಜೆಯ ಸಮಯದಲ್ಲಿ ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಬೇಕು.

 

 ಪ್ರತಿದಿನ ತುಳಸಿ ದೇವಿಗೆ ಪೂಜೆ ಮಾಡುವಾಗ  ಹೇಳಬೇಕಾದ ಮಂತ್ರ  

ಶ್ರೀ ತುಳಸಿ ಪ್ರಾರ್ಥನೆ 

 

 

“ ಸಮಸ್ತ ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ, ಶುಭ ನಮೋ ಮೋಕ್ಷ ಪ್ರದಾಯಿಕ ದೀಮಿ ನಮಃ ಸ೦ಪತಪ್ರದಾಯಿಕ”

ಭಾವಾರ್ಥ:-  

ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣವಾದ ವಿಷ್ಣು ಪ್ರಿಯೆಯಾದ ತುಳಸಿ, ಶುಭ ಸೂಚಕವಾದ, ಮೋಕ್ಷವನ್ನು ದೊರಕಿಸುವ ಸಂಪತ್ ಪ್ರಧಾಯಿನಿಯಾದ ಜಗನ್ಮಾತೆ ತುಳಸಿ ದೇವಿಗೆ ನಮಸ್ಕರಿಸುತ್ತೇನೆ.

 

ಶ್ರೀ ತುಳಸಿ ಪ್ರದಕ್ಷಿಣೆ ಮಂತ್ರ

 

 

“ಯಾನಿ ಕಾನಿ ಚಪಾಪಾನಿ ಬ್ರಹ್ಮ ಹತ್ಯಾಧಿಕಾನಿ  ಚೇತಾನಿ  ತಾನಿ ಪುನಃ ಶಾಂತಿ ಪ್ರದಕ್ಷಿಣ ಪದೇ ಪದೇ”

 

ಸಂಜೆಯ ಸಮಯದಲ್ಲಿ ತುಳಸಿ ಎಲೆಯನ್ನು ಮುಟ್ಟಬಾರದು. ಕೆಲವು ವಿಶೇಷ ದಿನಗಳಲ್ಲಿ ಅಂದರೆ ಭಾನುವಾರ, ಶುಕ್ರವಾರ, ಏಕಾದಶಿ, ದ್ವಾದಶಿ ದಿನಗಳಲ್ಲಿ ಎಲೆಗಳನ್ನು ಮುಟ್ಟಬಾರದು ಮತ್ತು ಕೀಳಬಾರದು.

ಹಾಗೆಯೇ ಸಾಯಂಕಾಲದ ಸಮಯದಲ್ಲಿ ಎಲೆಗಳನ್ನು ಕೀಳಬೇಕು ಅಂದರೆ ನೀವು ಈ ಮಂತ್ರವನ್ನು ಹೇಳಿಕೊಂಡು ಕೀಳಬಹುದು. ಆ ಮಂತ್ರಗಳು

 

“ಓಂ ಭದ್ರಾಯೇ ನಮಃ”

 “ಓಂ ಸುಪ್ರಭಾಯ ನಮಃ”.

ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ನಿಮ್ಮ ಕಷ್ಟಗಳನ್ನು ತುಳಸಿ ಗಿಡಕ್ಕೆ ಹೇಳಿಕೊಂಡರೆ ಕಷ್ಟಗಳು ದೂರವಾಗುತ್ತವೆ. ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ಯಾವ ಅಡಚಣೆಗಳು ಇಲ್ಲದಂತೆ ನೋಡಿಕೊಳ್ಳಬೇಕು. ಹೀಗೆ ತುಳಸಿ ದೇವಿಗೆ ಪ್ರತಿದಿನ ಪೂಜೆ ಮಾಡುವಾಗ ಈ ತುಳಸಿ ಪ್ರಾರ್ಥನೆ ಅಥವಾ ಮಂತ್ರವನ್ನು ಜಪಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top