ಭವಿಷ್ಯ

ಮನೆಯಲ್ಲಿ ಪೊರಕೆಯನ್ನು ಬೇಕಾಬಿಟ್ಟಿ ಬಳಸೋ ಹಾಗಿಲ್ಲ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಿಚಾರಗಳನ್ನು ತಿಳ್ಕೊಳ್ಳೆಬೇಕು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪೊರಕೆಯ ಬಗ್ಗೆ ನೀವು ತಿಳಿಯಲೇಬೇಕಾದ  ಕೆಲವು ಸೂಕ್ತವಾದ ವಿಷಯಗಳು.

 

 

ಮನೆಯಲ್ಲಿರುವ ಎಲ್ಲಾ ವಸ್ತುಗಳಿಗೆ ಅದರದ್ದೇ ಆದ ಮಹತ್ವವಿದೆ. ಮನೆಯಲ್ಲಿರುವ ಪೊರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬರನ್ನು ಲಕ್ಷಾಧಿಪತಿಯಾಗಿಯೂ ಸಹ ಮಾಡಬಹುದು ಅದೇ ಪೊರಕೆ ವ್ಯಕ್ತಿಯೊಬ್ಬರನ್ನು ಭಿಕ್ಷಾಧಿಪತಿಯನ್ನಾಗಿಯೂ ಸಹ ಮಾಡಲೂಬಹುದು.

ಶುಭ ಹಾಗೂ ಅಶುಭ ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ತಿಳಿಸಲಾಗಿದೆ. ಪೊರಕೆಯನ್ನು ಶಾಸ್ತ್ರಕ್ಕೆ ಅನುಸಾರವಾಗಿ ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ.ಪೊರಕೆಯನ್ನು ಲಕ್ಷ್ಮೀಗೆ ಹೋಲಿಸಲಾಗುತ್ತದೆ.

ಪೊರಕೆ ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವ ಸಮಯ ಹಾಗೂ ಅದನ್ನು ಇಡುವ ಸ್ಥಳ ಯಾವುದು ಎಂಬುದನ್ನು ಶಾಸ್ತ್ರ ಹೇಳುತ್ತೆ.

ನಿಮಗೆ ಬೇಕಾದ ಸಮಯದಲ್ಲಿ ಪೊರಕೆ ಖರೀದಿ ಮಾಡಬೇಡಿ,ಕೃಷ್ಣ ಪಕ್ಷದಲ್ಲಿ ಪೊರಕೆ ಖರೀದಿ ಮಾಡಿ.ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಮಾಡುವುದರಿಂದ ದುರಾದೃಷ್ಟ ನಿಮ್ಮದಾಗುತ್ತದೆ.

ಶನಿವಾರದ ದಿನ ಹೊಸ ಪೊರಕೆಯನ್ನು ಮನೆಗೆ ಕೊಂಡು ತರುವುದು ಒಳ್ಳೆಯದು ಹಾಗೆ ಅದೇ ದಿನ ಹಳೆ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಲು ಸೂಕ್ತವಾಗಿದೆ.

ಪೊರಕೆಯನ್ನು ಮನೆಯ ಈಶಾನ್ಯ ಕೋಣೆಯಲ್ಲಿ ಎಂದೂ ಇಡಬಾರದು ಪೊರಕೆಯನ್ನು ನೈಋತ್ಯ ಕೋಣೆಯಲ್ಲಿಡುವುದು ಒಳ್ಳೆಯದು.

ಬೆಳಗ್ಗೆ ಪೊರಕೆಯಿಂದ ಮನೆಯನ್ನು  ಸ್ವಚ್ಛಗೊಳಿಸಬೇಕು ಹಾಗೆ ಸೂರ್ಯ ಮುಳುಗಿದ ನಂತರ ಪೊರಕೆಯನ್ನು ಬಳಸಬೇಡಿ ಬಳಸಿ ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಡಿ. ಅದು ಒಳ್ಳೆಯದಲ್ಲ.ಮನೆಗೆ ಶ್ರೇಯಸ್ಕರವಲ್ಲ.

 

 

ಕಸ ಗುಡಿಸುವ ವೇಳೆ ಪೊರಕೆಯನ್ನು ತುಳಿಯಬೇಡಿ.ಹಾಗೆ ಮಾಡಿದರೆ ಲಕ್ಷ್ಮೀಯನ್ನು ಕಾಲಿನಿಂದ ಒದ್ದಂತೆ ಆಗುತ್ತದೆ.ಮತ್ತೆ ಪೋರಕೆಗೆ ನಮಸ್ಕರಿಸಿ ಕಸ ಗುಡಿಸುವುದನ್ನು ಮುಂದುವರಿಸಬೇಕು.

 

 

ಪೊರಕೆಯನ್ನು ಯಾವಾಗಲೂ ಯಾರಿಗೂ ಕಾಣಿಸದೆ ಇರುವಂತಹ ಜಾಗದಲ್ಲಿ ಇಡಬೇಕು ತೆರೆದ ಜಾಗದಲ್ಲಿ ಇಡಬಾರದು.ಮಂಚದ ಕೆಳಗೆ,ಸೋಫಾದ ಕೆಳಗೆ  ಇಡಬಹುದು.ಅಲ್ಲಿ ಇಟ್ಟರೆ ಯಾರಿಗೂ ಕಾಣಿಸುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top