fbpx
ಮನೋರಂಜನೆ

ಸಾಯುವ ಮುನ್ನ ನೋಡಲೇಬೇಕಾದ ಕನ್ನಡ ಸಿನಿಮಾ ಬಂಗಾರದ ಮನುಷ್ಯ

ಸಾಯುವ ಮುನ್ನ ನೋಡಲೇಬೇಕಾದ ಕನ್ನಡ ಸಿನಿಮಾ ಬಂಗಾರದ ಮನುಷ್ಯ

ಚಿತ್ರ: ಬಂಗಾರದ ಮನುಷ್ಯ

ಬಿಡುಗಡೆ ವರ್ಷ: 1972

ನಿರ್ಮಾಣ ಸಂಸ್ಥೆ : ಶ್ರೀನಿಧಿ ಪ್ರೊಡಕ್ಷನ್ಸ್

ನಿರ್ದೇಶನ: ಸಿದ್ದಲಿಂಗಯ್ಯ

ತಾರಾಗಣ: ರಾಜಕುಮಾರ್, ಭಾರತಿ, ಅರತಿ, ಶ್ರೀನಾಥ್, ಅದವಾನಿ ಲಕ್ಷ್ಮೀದೇವಿ..

ವಸ್ತು/ವಿಭಾಗ: ಕಾದಂಬರಿ, ಸಾಮಾಜಿಕ, ಸಾಂಸಾರಿಕ

ಬಂಗಾರದ ಮನುಷ್ಯ ಚಿತ್ರದ ಸಾರಾಂಶ :

ರಾಜೀವಪ್ಪ ಪಟ್ಟಣದಲ್ಲಿ ಓದಿ ಬೆಳೆದವನು, ತನ್ನ ಭಾವ ಅಕಾಲ ಮರಣಕ್ಕೆ ತುತ್ತಾದಾಗ ಅಕ್ಕನ ಸಂಸಾರದ ಜವಾಬ್ದಾರಿ ಹೊರಲು ಪಟ್ಟಣದಿಂದ ಹಳ್ಳಿಗೆ ಬರುತ್ತಾನೆ ರಾಜೀವಪ್ಪ. ಅಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದರಿಂದ ತಾನೆ ಅಲ್ಲಿ ಉಳಿದು ಅಕ್ಕನ ಸಂಸಾರವನ್ನು ಸರಿ ಮಾಡಲು ನಿರ್ಧರಿಸುತ್ತಾನೆ. ಕುಟುಂಬದ ಆತ್ಮೀಯ, ಊರಿನ ಮುಖಂಡನಾದ ರಾಚುತಪ್ಪನ ಸಹಾಯದಿಂದ ಕುಟುಂಬಕ್ಕೆ ಸೇರಿದ ಜಮೀನನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ವ್ಯವಸಾಯಮಾಡತೊಡಗುತ್ತಾನೆ. ಅಕ್ಕನ ಮಕ್ಕಳಾದ ಕೇಶವ ಮತ್ತು ಚಕ್ರಪಾಣಿಯನ್ನು ಪಟ್ಟಣಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ  ಕಳುಹಿಸುತ್ತಾನೆ. ಇಡಿ ಊರಿನ ಜನ ಬಂಜರು ಭೂಮಿಯನ್ನು ತೆಗೆದುಕೊಂಡು ಬಾವಿ ತೋಡಿಸಿ ಫಲವತ್ತಾದ ಭೂಮಿಯನ್ನಾಗಿ ಮಾಡುತ್ತಾನೆ.

ಎದುರು ಮನೆಯ ಲಕ್ಷ್ಮಿಯೊಂದಿಗೆ ರಾಜೀವಪ್ಪನಿಗೆ ಪ್ರೇಮಾಂಕುರವಾಗುತ್ತದೆ. ಅವಳನ್ನು ಮದುವೆಯಾಗಬೇಕೆಂದು ನಿರ್ಧರಿಸುತ್ತಾನೆ ಆದರೆ ವಿದ್ಯಾಭ್ಯಾಸ ಮುಗಿಸಿಕೊಂಡು ಬರುವ ಅಕ್ಕನ ಮಕ್ಕಳು ರಾಜೀವನ ನೀಯತ್ತಿನ ಮೇಲೆ ಪ್ರಶ್ನೆಮಾಡುತ್ತಾರೆ.. ಲಕ್ಷ್ಮಿ ಆಕಸ್ಮಿಕವಾಗಿ ಸಾವನ್ನಪ್ಪುತ್ತಾಳೆ. ಇದೆಲ್ಲದರಿಂದ ನೊಂದ ರಾಜೀವಪ್ಪ ಆಸ್ತಿ, ಹಣ ಎಲ್ಲವನ್ನೂ ಅಕ್ಕನ ಮಕ್ಕಳಿಗೆ ಬಿಟ್ಟು ಊರನ್ನೇ ಬಿಟ್ಟು ಹೊರಟುಹೋಗುತ್ತಾನೆ.

ಈ ಸಿನಿಮಾದ ವಿಶೇಷ:

*’ಟಿ.ಕೆ.ರಾಮರಾವ್’ರವರ ಇದೇ ಹೆಸರಿನ ಕಾದಂಬರಿ ಆಧರಿಸಿದ ಚಲನಚಿತ್ರ “ ಬಂಗಾರದ ಮನುಷ್ಯ “

*ಎಲ್ಲಾ ವಿಭಾಗಗಳಲ್ಲೂ ಉತ್ಕ್ರಷ್ಟವಾಗಿ ಮೂಡಿ ಬಂದ ಬಂಗಾರದ ಮನುಷ್ಯ ಕನ್ನಡದ ಸಾರ್ವಕಾಲಿಕ ದಾಖಲೆ ಮಾಡಿದ ಚಿತ್ರ.

*ಸತತ ಎರಡು ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಚಿತ್ರ.

*ಈ ಚಿತ್ರದ ಪ್ರಭಾವದಿಂದಾಗಿ ಸಾವಿರಾರು ಯುವಕರು ನಗರ ತೊರೆದು ಹಳ್ಳಿಗೆ ಹಿಂದಿರುಗಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದು ಚಿತ್ರದ ಸಾಕ್ಷಿ.

“ ನಗು ನಗುತಾ ನಲಿ “, “ ಆಗದು ಎಂದು…”  “ ಬಾಳ ಬಂಗಾರ ನೀನಿ…” ಎಂದೆಂದೂ ಮರೆಯದ ಮಧುರ ಅರ್ಥಪೂರ್ಣಗೀತೆಗಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top