ಉಪಯುಕ್ತ ಮಾಹಿತಿ

ಈ ನಡುವೆ ಬ್ಯುಸಿ ಜೀವನದಲ್ಲಿ ಎಲ್ರು ಧ್ಯಾನ ಮಾಡ್ತೀವಿ ಅಂತಾರೆ ಆದ್ರೆ ಧ್ಯಾನ ಅಂದ್ರೆ ಏನು ? ಎಷ್ಟು ಮಟ್ಟಗಳಿವೆ ಗೊತ್ತಾ ? ಧ್ಯಾನ ಸರಿಯಾಗಿ ಹೇಗೆ ಮಾಡೋದು ತಿಳ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಧ್ಯಾನ ಎಂದರೆ ಏನು ? ಧ್ಯಾನವನ್ನು ಹೇಗೆ ಮಾಡಬೇಕು ?

 

 

ಧ್ಯಾನ ಎಂದರೆ ಏನು ಎಂಬುದರ ಅರಿವು  ಮತ್ತು ಹೇಗೆ ಮಾಡಬೇಕು ? ಎಂದು ತುಂಬಾ ಜನರಿಗೆ ತಿಳಿದಿಲ್ಲ ಕಣ್ಣುಮುಚ್ಚಿ ಕುಳಿತುಕೊಳ್ಳುವುದೇ ಧ್ಯಾನ ಎನ್ನುತ್ತಾರೆ ಕೆಲವರು.

ಇನ್ನೂ ಕೆಲವರು ಅವರ ಕೆಲಸಗಳನ್ನು ಪಕ್ಕದಲ್ಲಿ ಇಟ್ಟು ಧ್ಯಾನ ಮಾಡುವ ಅವಶ್ಯಕತೆಯಾದರುೂ ಏನು ಎಂದು ಕೇಳುತ್ತಾರೆ. ಇನ್ನು ಕೆಲವರು ನಮಗೆ ಧ್ಯಾನ ಮಾಡಲು ಏನೂ ನಮಗೆ  ವಯಸ್ಸು ಆಗಿದೆಯಾ ?  ಎಂದು ಪ್ರಶ್ನಿಸುತ್ತಾರೆ.

ಆದರೆ ಧ್ಯಾನ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಲಾಭಗಳು ತುಂಬಾನೇ ಇವೆ. ಇವು ದೆೈಹಿಕ ಮತ್ತು ಮಾನಸಿಕ  ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ  ಎಲ್ಲ ವಯಸ್ಸಿನವರಿಗೂ ಸಹ ಸಹಾಯವಾಗುತ್ತವೆ.

 

 ಪ್ರಸ್ತುತ ಈಗಿನ ಜೀವನ ಶೈಲಿಯಲ್ಲಿ ಒತ್ತಡವನ್ನು ಗೆಲ್ಲಲು ಸುಲಭ ಸಾಧನವೇ ಈ ಧ್ಯಾನ.ಧ್ಯಾನದಲ್ಲಿ ಕೆಲವು ಮಟ್ಟಗಳು ಇವೆ ಅವೇ

 

ಪ್ರತ್ಯಾಹಾರ

ಧಾರಣ

ಧ್ಯಾನ

ಸಮಾಧಿ

ಶೂನ್ಯ  .

ಧ್ಯಾನ ಎನ್ನುವುದು ದೇವರ ಮೇಲೆ, ಒಂದು ವಿಷಯದ ಮೇಲೆ, ಒಂದು ವಸ್ತುವಿನ ಮೇಲೆ, ಒಂದು ಶಬ್ದದ ಮೇಲೆ ,ನಮ್ಮ ಮನಸ್ಸನ್ನು ಸಂಪೂರ್ಣವಾಗಿ  ಒಂದೇ ಕಡೆ ಪೂರ್ತಿಯಾಗಿ ಕೇಂದ್ರೀಕರಿಸುವುದೇ ಧ್ಯಾನ.

 

ಧ್ಯಾನವನ್ನು ಹೇಗೆ ಮಾಡಬೇಕು  ?

 

ಧ್ಯಾನ ಮಾಡಲು ಒಂದು ಸೂಕ್ತವಾದ ಸ್ಥಳವನ್ನು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕು.   ಅಲ್ಲಿ ಪ್ರಶಾಂತವಾದ ವಾತಾವರಣದಲ್ಲಿ  ಶಾಂತಿ, ನೆಮ್ಮದಿ ಇರಬೇಕು. ಯಾವುದೇ ಸದ್ದು ಗದ್ದಲ ಇರಬಾರದು. ಆ ಪ್ರಶಾಂತ ವಾತಾವರಣದಲ್ಲಿ ಕಣ್ಣು ಮುಚ್ಚಿಕೊಂಡು ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಬೇಕು.

ನಮ್ಮ ಮನಸ್ಸು ಮತ್ತು ಆಲೋಚನೆಯನ್ನು ಶ್ವಾಸದ ಮೇಲೆ ಕೇಂದ್ರೀಕರಿಸಬೇಕು. ಮಧ್ಯದಲ್ಲಿ ಅಡಚಣೆ ಉಂಟು ಮಾಡುವ ಆಲೋಚನೆಗಳು ಬಂದರೆ ಅದನ್ನು ಪಕ್ಕದಲ್ಲಿ ಇರಿಸಿ ಮತ್ತೆ ಯಥಾವತ್ತಾಗಿ ಅದೇ ರೀತಿ ಧ್ಯಾನ ಮಾಡಲು ಪ್ರಯತ್ನಿಸಬೇಕು.

 

 

ಮೊದಲಿಗೆ ಮೂವತ್ತು ಸೆಕೆಂಡುಗಳಲ್ಲಿ  ಪ್ರಾರಂಭ ಮಾಡಿ ನಿಧಾನವಾಗಿ ಸಮಯವನ್ನು ಹೆಚ್ಚಿಸುತ್ತಾ ಹೋಗಬೇಕು . ಹೀಗೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಮಾನಸಿಕ ಆರೋಗ್ಯ ಸುಧಾರಣೆ, ದೈಹಿಕ ಆರೋಗ್ಯ ಸುಧಾರಣೆ ಮತ್ತು ಇದರ ಜೊತೆಗೆ ಏಕಾಗ್ರತೆ, ಜ್ಞಾಪಕ ಶಕ್ತಿ, ಸೃಜನಶೀಲತೆ ಸಹ  ಹೆಚ್ಚಾಗುತ್ತದೆ.

ಆದ್ದರಿಂದಲೇ ಎಲ್ಲ ವಯಸ್ಸಿನವರಿಗೂ ಸಹ ಇದು ತುಂಬಾ ಉಪಯೋಗವಾಗಿದ್ದು ಮತ್ತು ಸೂಕ್ತವಾದುದು ಅದರಲ್ಲೂ ಈಗಿನ ಜೀವನ ಶೈಲಿಯಲ್ಲಂತೂ ಅತ್ಯಂತ  ಉಪಯೋಗಕಾರಿಯಾಗಿದೆ. ಆದ್ದರಿಂದ ಎಲ್ಲರೂ ಧ್ಯಾನವನ್ನು ಮಾಡಿ ಆರೋಗ್ಯವನ್ನು  ಕಾಪಾಡಿಕೊಳ್ಳಲು ಇದು ತುಂಬ ಸಹಾಯಕಾರಿಯಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top