fbpx
ಭವಿಷ್ಯ

ನವೆಂಬರ್ 7 :ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 7 :ನಿತ್ಯಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೦೭ ನವೆಂಬರ್ ೨೦೧೭
ಸೂರ್ಯೋದಯ : ೦೬:೧೮
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ
ನಕ್ಷತ್ರ : ಮಾರ್ಗಶಿರ
ಯೋಗ : ಶಿವ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ೧೧:೪೦ – ೧೨:೨೬
ಅಮೃತಕಾಲ : ೦೯:೩೫ – ೧೧:೦೨

ರಾಹು ಕಾಲ: ೧೪:೫೫ – ೧೬:೨೧
ಗುಳಿಕ ಕಾಲ: ೧೨:೦೩ – ೧೩:೨೯
ಯಮಗಂಡ: ೦೯:೧೦ – ೧೦:೩೭

ಮೇಷ (Mesha)

ಮಕ್ಕಳು ಜೀವನದ ಅನುಭವವಿಲ್ಲದೆ ಗೋಳಾಡಿಸುವರು. ಹಾಗಾಗಿ ಅವರ ಮೇಲೆ ಕೋಪ-ತಾಪಗಳು ಬರುವುದು ಸಹಜ. ಆದರೆ ಹಿರಿಯರಾದ ನೀವು ತಾಳ್ಮೆ ವಹಿಸಿ ಅವರಿಗೆ ಸರಿಯಾದ ಬುದ್ಧಿವಾದವನ್ನು ಹೇಳುವಿರಿ.

 

 

ವೃಷಭ (Vrushabha)

ಬಾಳಸಂಗಾತಿಯು ನಿಮ್ಮ ವಿಚಾರದಲ್ಲಿ ಪ್ರಸನ್ನತೆ ಪ್ರದರ್ಶಿಸಲಿದ್ದಾರೆ. ಅವರು ಕೊಡುವ ಸಲಹೆಗಳನ್ನು ಸ್ವೀಕರಿಸಿ. ಇದಕ್ಕಿಂತ ಹೆಚ್ಚಿನ ಸಂತೋಷ ಜೀವನದಲ್ಲಿ ಇರುವುದಿಲ್ಲ. ಮಕ್ಕಳು ಸಹ ನಿಮ್ಮ ವಿಚಾರಗಳನ್ನು ಗೌರವಿಸಿ ಪಾಲಿಸುವರು.

 

ಮಿಥುನ (Mithuna)

ನಿಮ್ಮನ್ನು ಎದುರಿಗೆ ಹೊಗಳಿ ಹಿಂದೆ ತೆಗಳುವ ಮಂದಿಯೇ ಜಾಸ್ತಿ. ಹಾಗಾಗಿ ಇಂತಹ ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ಆಸ್ತಿಯ ವಿಷಯದ ಬಗ್ಗೆ ತಕರಾರು ಎದುರಿಸಬೇಕಾಗುವುದು.

 

ಕರ್ಕ (Karka)

ಹಳೆಯ ದಸ್ತಾವೇಜು, ಕಡತ ಫೈಲುಗಳನ್ನು ಕಳಕೊಂಡು ಸಿಡಿಮಿಡಿ ಮಾಡಿಕೊಳ್ಳದಿರಿ. ಸ್ವಲ್ಪ ತಾಳ್ಮೆ ವಹಿಸಿದಲ್ಲಿ ಅವು ಶೀಘ್ರವೇ ದೊರೆಯುವುದು. ವಿಳಂಬವಿಲ್ಲದೆ ಈ ದಿನ ಆದಷ್ಟು ಕಡತಗಳನ್ನು ವಿಲೇವಾರಿ ಮಾಡಿರಿ.

 

ಸಿಂಹ (Simha)

ಗುರು ಸಮಾನರೆನಿಸಿದ ಹಿರಿಯ ವ್ಯಕ್ತಿಯೊಬ್ಬರಿಂದ ಜೀವನದಲ್ಲಿ ಮಹತ್ತರ ಬದಲಾವಣೆಯ ಗಾಳಿ ಬೀಸುವುದು. ಮಗನಿಗೆ ಕನ್ಯೆ ದೊರೆಯುವ ಸಂಭವ. ಮಾತಿನಲ್ಲಿ ಹಿಡಿತವಿರಲಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಕನ್ಯಾರಾಶಿ (Kanya)

ಸಾಲ ಕೊಡಲು ಬ್ಯಾಂಕ್‌ ಮುಂದೆ ಬರುವುದು. ಅಂತೆಯೆ ನಿಮ್ಮ ಹಿತೈಷಿಗಳು ನಿಮಗೆ ಹಣದ ಸಹಾಯ ಮಾಡಲು ಹಾತೊರೆಯುವರು. ಆದರೆ ಈ ಸಂದರ್ಭದಲ್ಲಿ ಸಾಲ ಪಡೆದರೆ ಸಾಲ ತೀರಿಸುವ ಬಗೆ ಹೇಗೆ ಎಂದು ಚಿಂತಿಸುವಿರಿ.

 

ತುಲಾ (Tula)

ನೀವು ಸರಳವಾಗಿ ಇಡಬೇಕೆಂಬ ಹೆಜ್ಜೆಗಳು ತಪ್ಪಾಗುವ ಸಂಭವ ಜಾಸ್ತಿ. ನಿಮ್ಮ ಜಾಣ್ಮೆ ತರ್ಕಗಳು ಇಂದು ಉಪಯೋಗಕ್ಕೆ ಬರುವುದಿಲ್ಲ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.

 

 

ವೃಶ್ಚಿಕ (Vrushchika)

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ನಿಮಗೆ ಬುದ್ಧಿವಾದ ಹೇಳುವವರೇ ಆಗಿರುತ್ತಾರೆ. ಆದರೆ ಅವರ ಮಾತುಗಳಿಗೆ ಹೆಚ್ಚಿನ ಗಮನ ಕೊಡದಿರಿ. ನಿಮ್ಮ ಕಾರ್ಯಗಳಿಗೆ ಗುರುವಿನ ಬೆಂಬಲವಿರುತ್ತದೆ. ಸಾವಧಾನದಿಂದ ಸಕಲ ಕಾರ್ಯಗಳನ್ನು ಮಾಡಿರಿ.

 

ಧನು ರಾಶಿ (Dhanu)

ಹಳೆಯ ಆಸ್ತಿಯ ವಿಷಯದ ಕುರಿತು ಒತ್ತಡ ಉಂಟಾಗುವುದು. ನ್ಯಾಯಾಲಯದ ತೀರ್ಮಾನವು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಬರುವುದು. ನಿಮ್ಮ ಆಪ್ತರ ಸಲಹೆಯನ್ನು ಪಡೆಯಿರಿ.

 

ಮಕರ (Makara)

ಸಂಶೋಧನ ಶಕ್ತಿಯು ನಿಮ್ಮ ಮನಸ್ಸು ವಿಕಸನ ಹೊಂದುವಂತೆ ಮಾಡುವುದು. ಪ್ರವಾಸಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಅತ್ಯಂತ ಸೂಕ್ತವಾದ ದಿನ. ನಿಮ್ಮ ಕಾರ್ಯಕ್ಷೇತ್ರವು ವಿಸ್ತಾರಗೊಳ್ಳುವುದು.

 

ಕುಂಭರಾಶಿ (Kumbha)

ಮನದ ಸಂಕಲ್ಪಕ್ಕೆ ವಿಘ್ನಗಳು ಬರುತ್ತವೆ. ಎದೆಗುಂದದಿರಿ. ನಿಮ್ಮನ್ನು ಟೀಕಿಸುವವರು ಬಹಳ ಮಂದಿ. ಹಾಗಾಗಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರಿ. ಆದಷ್ಟು ಗುರುವಿನ ಸೇವೆ ಮಾಡಿರಿ.

 

ಮೀನರಾಶಿ (Meena)

ನೇರವಾಗಿ ನಿಮ್ಮ ಯೋಜನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಳ್ಳಿರಿ. ಸಾರ್ವಜನಿಕ ಮನ್ನಣೆಯೇ ನಿಮಗೆ ನೆರವು ನೀಡುವುದು. ಇದರಿಂದ ಹಣಕಾಸಿನ ತೊಂದರೆ ಕಡಿಮೆ ಆಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top