ತಿಂಡಿ ತೀರ್ಥ

‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ರಾಗಿ ಮುದ್ದೆ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ರಾಗಿ ಮುದ್ದೆ ಮಾಡುವ ವಿಧಾನ

‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎಂಬಂತೆ ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ ಅದ್ದರಿಂದ ದಿನಾಲು ಮನೆಲಿ ಮುದ್ದೆ ಮಾಡಿ ತಿನ್ನಿ 

Related image

ರಾಗಿ ಮುದ್ದೆ ಮಾಡಲು ಬೇಕಾಗಿರುವ ಸಾಮಗ್ರಿಗಳು:

೧ ಲೋಟ ರಾಗಿ ಹಿಟ್ಟು ೨ ಲೋಟ ನೀರು

 

ರಾಗಿ ಮುದ್ದೆ ಮಾಡುವ ವಿಧಾನ:

*ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, ೧೦ ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು.

Image result for ರಾಗಿ ಮುದ್ದೆ

*೧೦ ಅಥವ ೧೫ ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು.

Related image

*ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ,

Image result for ರಾಗಿ ಮುದ್ದೆ

*ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ,

Related image

ಟಿಪ್ಸ್: ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top