fbpx
ದೇವರು

ಅಮೇರಿಕಾದ ಹಾವರ್ಡ್ ಯೂನಿವರ್ಸಿಟಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಮಾಯಣ ಮತ್ತು ಮಹಾಭಾರತದ ಕೋರ್ಸ್ ಗಳು ಪ್ರಾರಂಭವಾಗಿದೆ ಇದು ಭಾರತೀಯರಿಗೆ ಹೆಮ್ಮೆಯ ವಿಷಯ !

ಅಮೆರಿಕದಲ್ಲಿ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಮಾಯಣ ಮತ್ತು  ಮಹಾಭಾರತದ ಕೋರ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ  .

 

ಭಾರತ ದೇಶವು ದೇವಾನುದೇವತೆಗಳ ನೆಲೆಬೀಡು . ಭಕ್ತಿ, ಶ್ರದ್ಧೆ, ಸಂಪ್ರದಾಯವನ್ನು ಪಾಲಿಸಿಕೊಂಡು ಬoದಿರುವ ದೇಶ ನಮ್ಮ ಭಾರತ ದೇಶ. ಅಂತಹ ನಮ್ಮ ಭಾರತ ದೇಶದಲ್ಲಿ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಬಿಂಬಿಸುವ ರಾಮಾಯಣ  ಮತ್ತು ಮಹಾಭಾರತದ ಮಹಾಕಾವ್ಯಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ  ಈ ಸಂದರ್ಭದಲ್ಲಿ ಭಾರತೀಯರಿಗೆ ಮಾರ್ಗದರ್ಶನ ವಾಗಬಲ್ಲ ಸುದ್ದಿಯು  ಇಲ್ಲಿದೆ ನೋಡಿ …..

 

 

ಅಮೆರಿಕದ ಪ್ರಾಚೀನ ಹಾಗೂ ಪ್ರಸಿದ್ಧ ವಿಶ್ವವಿದ್ಯಾನಿಲಯವೇ ಆಗಿರುವ ಹಾವರ್ಡ್ ವಿಶ್ವವಿದ್ಯಾನಿಲಯ ಕ್ರಿಸ್ತ ಶಕ 1636 ರಲ್ಲಿಯೇ ಸ್ಥಾಪಿತವಾಗಿರುವ ಈ ವಿಶ್ವವಿದ್ಯಾನಿಲಯ ವಿಶ್ವದ ಮೊದಲನೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ.

ಈ ವರ್ಷದ ಆರಂಭಕ್ಕೆ ಕೋರ್ಸ್ ಭಾರತೀಯ ಧರ್ಮಗಳ  ( Indian religions through their narrative literature) ಈ ಕೋರ್ಸ್ ಅನ್ನು ಪರಿಚಯಿಸಲು ಅಮೆರಿಕ ಚಿಂತಿಸಲಾಗಿದೆ.

ಭಾರತೀಯ ಧರ್ಮ ಕಲೆ , ವಿನ್ಯಾಸ ಮತ್ತು ವಾಲ್ಮೀಕಿಯ ದೃಷ್ಟಿಕೋನ ಸಿನಿಮಾ ಮತ್ತು ಧಾರಾವಾಹಿ ಮಹಾ ಕಾವ್ಯಗಳನ್ನು ಬಳಸಿಕೊಂಡು ವಿವಿಧ ಬಗೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಸೌತ್ ಏಷ್ಯನ್ ರಿಜಿಸ್ಟರ್ಡ್ ದಕ್ಷಿಣ ಭಾರತದ ಏಷ್ಯಾ ಧರ್ಮದ ಪ್ರೊಫೆಸರ್ ಅಣ್ಣೇ ಈ  ಮೋನಿಸ ತಿಳಿಸಿದ್ದಾರೆ   .

 

 

ದಕ್ಷಿಣ ಏಷ್ಯಾದ ಧಾರ್ಮಿಕ ಸಂಪ್ರದಾಯಗಳು ಮತ್ತು ಸಮುದಾಯಗಳ ಕುರಿತು ಕೋರ್ಸ್ಗಳನ್ನು ಆರಂಭಿಸಲಿದ್ದು ಇದರೊಂದಿಗೆ ನೃತ್ಯ ,ಪ್ರಕಾರಗಳು, ತೊಗಲುಗೊಂಬೆ, ಬೀದಿ ನಾಟಕ, ಆಧುನಿಕ ಕಾಲಘಟ್ಟದಲ್ಲಿ ಮಹಾಕಾವ್ಯಗಳ ಬಳಕೆಯ ಕುರಿತಾದ ವಿಷಯಗಳನ್ನು ಇತಿಹಾಸ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ತಿಳಿಸಿದ್ದಾರೆ .

ಭಾರತೀಯ ಮಹಾಕಾವ್ಯಗಳು ದೀರ್ಘ ಮತ್ತು ಸಂಕೀರ್ಣ ನಿರೂಪಣೆಯನ್ನು ಹೊಂದಿವೆ. ಇದರಲ್ಲಿ ಬರುವ ಪ್ರತಿಯೊಂದು ಅಂಶವೂ ಸಹ ಮಾನವನ ಅನುಭವಕ್ಕೆ ತಲುಪುವ ಅಂತಹುದ್ದೆ ಆಗಿದೆ.

 

 

ಮಹಾಭಾರತವು ಯುದ್ಧದ ದುರಂತದ ಅಂತ್ಯ ಮತ್ತು  ಅವುಗಳಿಂದ ಉಂಟಾಗುವ ಸಾವು ನೋವುಗಳನ್ನು ಅತ್ಯಂತ  ಸೂಕ್ಷ್ಮವಾಗಿ ಹೇಳಿದೆ.

ರಾಮಾಯಣ ಕೂಡ ಒಂದು ಅದ್ಭುತ ಪ್ರೇಮ ಕಾವ್ಯವಾಗಿದೆ ಎಂದಿದ್ದಾರೆ. ಈ ಕೋರ್ಸ್ ಅನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಆನಂತರ ಇದನ್ನು ಕೊಂಡಾಡಲಿದ್ದಾರೆ.

ಮಹಾಕಾವ್ಯಗಳ ಅಧ್ಯಯನ ಹಿಂದೂ ಧರ್ಮದ ವಿವಿಧ ಆಯಾಮಗಳನ್ನು ಸಂಪ್ರದಾಯಗಳನ್ನು ತೋರಿಸಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಪುರಾಣ ಕೃತಿಗಳು ಮೌಲ್ಯ ಭಾರತೀಯರಿಗೆ ಅರ್ಥವಾಗದೆ ಇರುವ  ಈ ಆಧುನಿಕ ಜಗತ್ತಿನ ಸಂದರ್ಭದಲ್ಲಿ. ಈ ವಿಷಯ ಕೇಳಿದ ಮೇಲಾದರೂ  ಭಾರತೀಯರು ಎಚ್ಚರಗೊಳ್ಳುತ್ತಾರೆಯೇ  ಎಂದು ಕಾದು ನೋಡಬೇಕು …..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top