ಭವಿಷ್ಯ

ಸರ್ಪ ದೋಷಗಳಲ್ಲಿ ಎಷ್ಟು ತರ ಇದೆ ಗೊತ್ತಾ ? ನಿಮ್ಮ ಜಾತಕದಲ್ಲಿ ಸರ್ಪ ದೋಷ  ಇದ್ಯಾ ಅಂತ ತಿಳ್ಕೊಳೋದು ಹೇಗೆ ಗೊತ್ತಾ ? ತಿಳ್ಕೊಂಡು ಪರಿಹಾರ ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸರ್ಪ ದೋಷ ವಿವಿಧ ವಿಧಗಳು.

ಸರ್ಪಗಳ ಬಗ್ಗೆ ನಮಗೆಲ್ಲರಿಗೂ ಗೊತ್ತು. ಸರ್ಪವನ್ನು ಹೊಡೆದರೆ,ಹೊಡೆದು ಸಾಯಿಸಿದರೆ,ಹೊಡೆದು ಸಾಯಿಸಿ ಸುಟ್ಟುಹಾಕಿದರೆ ಜನ್ಮ ಜನ್ಮಾಂತರದಲ್ಲೂ ಕಷ್ಟಗಳು ಕಟ್ಟಿಟ್ಟ ಬುತ್ತಿ ನಮ್ಮ ಏಳೇಳು ತಲೆಮಾರಿನವರೂ ಕೂಡ ಇನ್ನು ಸರ್ಪದೋಷವನ್ನು ಅನುಭವಿಸಬೇಕಾಗುತ್ತದೆ.

 

 

ಒಟ್ಟಿಗೆ 9 ಸರ್ಪಗಳಿವೆ ಅನಂತ, ವಾಸುಕಿ,ಪದ್ಮನಾಭ, ಕಂಬಲಾ,ಶಂಕಪಾಲ, ದೃತರಾಷ್ಟ್ರ, ತ್ತಾಕ್ಷಕ,ಶೇಷಾಹ, ಕಾಳಿಂಗ ಇವೆ ಆ ಒಂಬತ್ತು ಸರ್ಪಗಳ ಹೆಸರು.

ಇದ್ದಕ್ಕೆ ಅನುಗುಣವಾಗಿ ನಮ್ಮ ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತು ಯಾವ ಮನೆಯಲ್ಲಿ ಸ್ಥಿತರಿರುತ್ತಾರೋ ಅದಕ್ಕೆ ಅನುಗುಣವಾಗಿ ನಮಗೆ ಸರ್ಪದೋಷ ಬರುತ್ತದೆ.

 

ನಮ್ಮ ಜನ್ಮ ಕುಂಡಲಿಯಲ್ಲಿ ಒಟ್ಟು ಹನ್ನೆರಡು ಮನೆಗಳಾಗಿ ವಿಂಗಡಿಸಲಾಗಿದೆ.

1,2,5,7,8,ನೆ ಮನೆಯಲ್ಲಿ ರಾಹು,ಕೇತು ಸ್ಥಿತರಿದ್ದರೆ ಅದನ್ನು ಸರ್ಪದೋಷ ಎಂದು ಪರಿಗಣಿಸಲಾಗುತ್ತದೆ.

1 ಮತ್ತು 2 ನೆ ಮನೆಯಲ್ಲಿ ರಾಹು ಕೇತು-ತುಂಬಾ ವರ್ಷಗಳ ನಂತರ ವಿವಾಹ ವಾಗುವುದು.

5 ನೆ ಮನೆಯಲ್ಲಿ ರಾಹು ಕೇತು-ತುಂಬಾ ವರ್ಷಗಳ ನಂತರ  ಮಕ್ಕಳಾಗುವುದು.

7 ನೆ ಮನೆಯಲ್ಲಿ ರಾಹು ಕೇತು ಸಾಂಸಾರಿಕ ಜೀವನದಲ್ಲಿ ತೊಂದರೆಗಳು,ಕಷ್ಟಗಳು.

8ನೆ ಮನೆಯಲ್ಲಿ ರಾಹು ಕೇತು ಆರೋಗ್ಯ ಸಮಸ್ಯೆಗಳು.

 

ವಿವಿಧ ಸರ್ಪ ದೋಷಗಳು.

1.ಅನಂತ ಕಾಲ ಸರ್ಪ ಯೋಗ:

ರಾಹು ಒಂದನೇ ಮನೆಯಲ್ಲಿದ್ದು ಕೇತು ಏಳನೇ ಮನೆಯಲ್ಲಿದ್ದರೆ ಇಪ್ಪತ್ತೆಳು ವರ್ಷಗಳ ವರೆಗೆ ಸರ್ಪದೋಷ ಇರುತ್ತದೆ,ಮತ್ತು ಬಾಕಿ ಎಲ್ಲಾ ಗ್ರಹಗಳು  ಈ ಅಕ್ಷರೇಖೆಯೊಳಗೆ  ಇದ್ದರೆ ಇದ್ದನ್ನು ಅನಂತ ಕಾಲ ಸರ್ಪ ಯೋಗ ಅಥವಾ ವಿಪರೀತ ಕಾಲ ಸರ್ಪಯೋಗ ಎನ್ನುತ್ತಾರೆ.ಆದರೂ ಈ ಯೋಗಕ್ಕೆ ಜಾಸ್ತಿ ಹಣಕಾಸಿನ ಹೊಳೆ ಹರಿಸುವ ಶಕ್ತಿಯಿದ್ದರು ಇದು ಮದುವೆ ವೈವಾಹಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಯೋಗದಲ್ಲಿ ಜನಿಸಿದವನು ಸಾಮಾನ್ಯವಾಗಿ ತುಂಬಾ ವರ್ಷಗಳ ನಂತರ ಮದುವೆಯಾಗುತ್ತಾನೆ ಕೋಪ ಮತ್ತು ಅವರನ್ನು ಅವರೇ ಕೀಳು ಮನೋಭಾವ ದಿಂದ ನೋಡುತ್ತಾರೆ,ಜಗಳ,ಕೆಲಸವನ್ನು ಕಳೆದುಕೊಳ್ಳುವುದು.

2.ಕುಳಿಕ ಕಾಲ ಸರ್ಪ ಯೋಗ:

2 ನೆ ಮನೆಯಲ್ಲಿ ರಾಹು 8 ನೆ ಮನೆಯಲ್ಲಿ ಕೇತು ಇದ್ದರೆ ಅದು ಕುಳಿಕ ಕಾಲಸರ್ಪ ಯೋಗ.ಇದು ಮೂವತ್ಮರೂ ವರ್ಷಗಳ ವರೆಗೆ ಇದ್ದು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ,ಬಡತನ, ಚಿಂತೆ,ನಷ್ಟಗಳು,ಅಪಘಾತಗಳು ಇವರಲ್ಲಿ ಜಾಸ್ತಿ. ಹಣಕಾಸಿನ ವ್ಯವಸ್ಥೆ ಮೇಲು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

 

3.ವಾಸುಕಿ ಕಾಲಸರ್ಪ ಯೋಗ:

ರಾಹು 3ನೆ ಮನೆಯಲ್ಲಿದ್ದು ಕೇತು 9 ನೆ ಮನೆಯಲ್ಲಿ ಇದ್ದರೆ ಈ ಯೋಗ ಮೂವತ್ತಾರು ವರ್ಷಗಳ ವರೆಗೆ ಉಂಟಾಗುತ್ತದೆ.ಸಂಸಾರದಲ್ಲಿ ಕಷ್ಟಗಳ ಹೊರೆ,ಉದ್ಯೋಗದಲ್ಲಿ ತೊಂದರೆ,ಸ್ವಾರ್ಥಿ,ಅಧಿಕ ರಕ್ತದೊತ್ತಡ, ಶೀಘ್ರ ನಿಧನ್ ಮತ್ತು ನಷ್ಟಗಳು ಅವರ ಸಂಭದಿಕರಿಂದ  ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

4.ಶಂಕಪಾಲ ಕಾಲಸರ್ಪ ಯೋಗ:

ರಾಹು 4 ನೇ ಮನೆಯಲ್ಲಿದ್ದು ಕೇತು 10 ನೆ ಮನೆಯಲ್ಲಿದ್ದರೆ ನಲ್ವತ್ತೆರಡು ವರ್ಷಗಳ ವರೆಗೆ ದೋಷ ಇರುತ್ತದೆ.ಹೀಗಿದ್ದರೆ ಕೆಲಸ ಮಾಡುವ ಸ್ಥಳದಲ್ಲಿ ತೊಂದರೆಗಳು ಮತ್ತು ಒತ್ತಡಗಳು ಮತ್ತು ಆತಂಕಗಳನ್ನು  ಜೀವನದಲ್ಲಿ ಎದುರಿಸಬೇಕಾಗುತ್ತದೆ.ಇಷ್ಟೇ  ಅಲ್ಲದೆ ಸ್ವಲ್ಪ ಸಮಯದ ವರೆಗೂ ರಾಜಕೀಯ ಶಕ್ತಿಯಲ್ಲಿ ಅಧಿಕ ಯಶಸ್ವಿಯಾಗಿ ಅನೇಕ ಲಾಭಗಳನ್ನು ತಂದುಕೊಡುತ್ತದೆ.

 

 

5.ಪದ್ಮ ಕಾಲಸರ್ಪ ಯೋಗ:

ರಾಹು 5ನೆ ಮನೆಯಲ್ಲಿದ್ದು ಕೇತು 11ನೆ ಮನೆಯಲ್ಲಿದ್ದರೆ  48 ವರ್ಷಗಳ ವರೆಗೆ ಈ ಯೋಗವಿರುತ್ತದೆ. ಮಕ್ಕಳ ಸಂತತಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ನೇಹಿತರಿಂದ ಮೋಸ ಹೋಗುವ ಸಂಭವವಿದೆ.

6.ಮಹಪದ್ಮ ಕಾಲಸರ್ಪ ಯೋಗ:

ರಾಹು 6ನೆ ಮನೆಯಲ್ಲಿ ಕೇತು 12 ನೆ ಮನೆಯಲ್ಲಿದ್ದರೆ 54 ವರ್ಷಗಳ ವರೆಗೆ ಈ ಯೋಗ ಉಂಟಾಗುತ್ತದೆ.ಈ ಜಾತಕದ ವ್ಯಕ್ತಿಯಲ್ಲಿ ತುಂಬಾ ಶತ್ರುಗಳನ್ನು ಹೊಂದಿರುತ್ತಾರೆ ಮತ್ತು ಅನೇಕ ಖಾಯಿಲೆಯಿಂದ ಬಳಲುತ್ತಿರುತ್ತಾರೆ.ರಾಜಕೀಯದಲ್ಲಿ ಯಶಸ್ಸನ್ನು ಪಡೆಯಲು ಈ ಯೋಗ ಅನುಕೂಲಕರವಾಗಿದೆ.

 

7.ತಕ್ಷಕ ಕಾಲಸರ್ಪ ಯೋಗ:

ರಾಹು 7 ನೆ ಮನೆಯಲ್ಲಿ ಕೇತು 1 ನೆ ಮನೆಯಲ್ಲಿದ್ದರೆ ಈ ಯೋಗ ಬರೋದು.ಈ ಜಾತಕವಿರುವ ವ್ಯಕ್ತಿಯಲ್ಲಿ ಊಹಾತ್ಮಕ ಪ್ರವೃತ್ತಿಗಳು ಇರುತ್ತವೆ,ಹಣವನ್ನು ಇವರು ಹೆಣ್ಣು,ಹೆಂಡಕ್ಕೆ ಇಂತಹ ಚಟಗಳಿಗೆ ವ್ಯಯಿಸುತ್ತಾರೆ.ಸಾಂಸಾರಿಕ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ.

8.ಕಾರ್ಕೋಟಕ ಕಾಲಸರ್ಪ ಯೋಗ:

ರಾಹು 8 ನೆ ಮನೆಯಲ್ಲಿ ,ಕೇತು 2 ನೆ ಮನೆಯಲ್ಲಿದ್ದರೆ ಈ ಯೋಗ ಬರುವುದು.ಬೇಗ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾರೆ, ತುಂಬಾ ಜನ ಶತ್ರುಗಳು, ಸಮಾಜಕ್ಕೆ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಾರೆ.ಈ ಜಾತಕದ ವ್ಯಕ್ತಿಯು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಳ್ಳುವ ಸಂಭವ ಇದೆ ಮತ್ತು ಲೈಂಗಿಕ ಖಾಯಿಲೆಗೆ ತುತ್ತಾಗುತ್ತಾರೆ.

 

9.ಶಂಕಚೂಡ ಕಾಲಸರ್ಪ ಯೋಗ:

ರಾಹು 9 ನೆ ಮನೆಯಲ್ಲಿ ಕೇತು 3 ನೆ ಮನೆಯಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಜೀವನದಲ್ಲಿ ತುಂಬಾ ಏರಿಳಿತಗಳನ್ನು ಕಾಣುತ್ತಾರೆ,ಸುಳ್ಳು ಹೇಳುತ್ತಾರೆ, ಧರ್ಮಕ್ಕೆ ವಿರುದ್ಧವಾಗಿ ಕೆಲಸಗಳನ್ನು ಮಾಡುವರು.ಬೇಗ ಕೋಪ ಬರುವುದು,ಅಧಿಕ ರಕ್ತದೊತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ.

10.ಘಟಕ ಕಾಲಸರ್ಪ ಯೋಗ:

ರಾಹು 10ನೇ ಮನೆಯಲ್ಲಿದ್ದು ಕೇತು 4 ನೆ ಮನೆಯಲ್ಲಿದ್ದರೆ ದಾವೆಯಲ್ಲಿ ತೊಂದರೆ,ಕಾನೂನಿನಿಂದ ಶಿಕ್ಷೆ. ರಾಜಕೀಯದಲ್ಲಿ ತುಂಬಾ ಅಧಿಕವಾಗಿ ಯಶಸ್ಸನ್ನು ತಂದುಕೊಡುವ ಯೋಗವಾಗಿದೆ.

 

11.ವಿಷದರ್ ಕಾಲಸರ್ಪ ಯೋಗ:

ರಾಹು 11 ನೆ ಮನೆಯಲ್ಲಿ ಕೇತು 5 ನೆ ಮನೆಯಲ್ಲಿದ್ದು,ಅಗಾಗ್ಗೆ ಪ್ರಯಾಣ ಮತ್ತು ನಿಲ್ಲದೆ ಒಂದಾದ ಮೇಲೆ ಇನ್ನೊಂದು ತೊಂದರೆಗಳು ಮಕ್ಕಳಿಂದ ಬರುತ್ತವೆ,ಬಂಧನಕ್ಕೆ ಬಳಗಾಗುವ ಭೀತಿ,ಅಣ್ಣ ತಮ್ಮಂದಿರಲ್ಲಿ ಜಗಳ. ಹೇಗಾದರೂ ಇವರು ತಮ್ಮ ಮುಂದಿನ ಜೀವನದ ಕೊನೆಯಲ್ಲಿ ಯಶಸ್ಸನ್ನು ಕಾಣುತ್ತಾರೆ.

12.ಶೇಷನಾಗ ಕಾಲಸರ್ಪ ಯೋಗ:

ರಾಹು 12 ನೆ ಮನೆಯಲ್ಲಿ ಕೇತು 6 ನೇ ಮನೆಯಲ್ಲಿದ್ದರೆ ತೊಂದರೆಗಳು,ಸೋಲು,ದೌರ್ಭಾಗ್ಯ. ಶತ್ರುತ್ವ ಎದುರಾಗುವಿಕೆ,ಆರೋಗ್ಯ ಸಮಸ್ಯೆಗಳು ವಿಶೇಷವಾಗಿ (ಕಿವಿ,ಮೂಗು,ಕಣ್ಣು,ಚರ್ಮ) ಸಂವೇದಾನಶೀಲತೆಯ ಅಂಗಾಗಗಳಲ್ಲಿ ಉಂಟಾಗುತ್ತದೆ.

 

ಪರಿಹಾರ:

ಈ ಎಲ್ಲಾ ಕಾಲಸರ್ಪ ದೋಷದಿಂದ ಬಕಳುತ್ತಿರುವವರಿಗೆ ಸುಲಭವಾದ ಪರಿಹಾರ ಎಂದರೆ ಒಂದು ಜೋಡಿ ನಾಗ ಮತ್ತು ನಾಗಿಣಿಯನ್ನು ಬೆಳ್ಳಿಯಿಂದ ಮಾಡಿಸಿ  ಗರುಡ ಗೋವಿಂದನಿಗೆ ಭಕ್ತಿಯಿಂದ ಅರ್ಪಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top