fbpx
ಮನೋರಂಜನೆ

ಸಂಯುಕ್ತ-2 ಚಿತ್ರಕ್ಕೆ ಸ್ಟಾರ್ ನಟರೂ ಮನಸೋತಿದ್ದೇಕೆ?

ಸಂಯುಕ್ತ-2 ಚಿತ್ರಕ್ಕೆ ಸ್ಟಾರ್ ನಟರೂ ಮನಸೋತಿದ್ದೇಕೆ?

 

 

ಗಿಮಿಕ್ಕುಗಳಿಗೆ ಆಯಸ್ಸು ಕಡಿಮೆ. ಅದರಾಚೆಗೆ ತನ್ನ ಗಟ್ಟಿತನದಿಂದ ಮಾತ್ರವೇ ಸದ್ದು ಮಾಡೋದಿದೆಯಲ್ಲಾ? ಅದು ನಿಜವಾದ ಖದರ್ ಮತ್ತು ಅದೇ ಶಾಶ್ವತ. ಅಕ್ಷರಶಃ ಇದೇ ಗಾದಿಯಲ್ಲಿ ಸಾಗುತ್ತಾ ಎಲ್ಲರ ದೃಷ್ಟಿಯನ್ನೂ ತನ್ನತ್ತ ಸೆಳೆದುಕೊಂಡಿರೋ ಚಿತ್ರ ಸಂಯುಕ್ತ-2.

 

 

ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರೂ ಮನಸೋತಿದ್ದಾರೆಂಬುದು ಅಸಲೀ ವಿಶೇಷ. ಅಂದಹಾಗೆ, ಈ ಚಿತ್ರ ಆರಂಭವಾದಾಗ ಕ್ಲ್ಯಾಪ್ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ನಂತರ ಈ ಚಿತ್ರಕ್ಕಾಗಿ ಹಾಡೊಂದನ್ನು ಹಾಡೋ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪ್ರೋತ್ಸಾಹ ನೀಡಿದ್ದರು. ಇದಾದ ನಂತರ ಟೀಸರ್ ರಿಲೀಸ್ ಮಾಡಿದವರು ರೋರಿಂಗ್ ಸ್ಟಾರ್ ಶ್ರೀಮುರಳಿ. ಸಂಯುಕ್ತಾ-2 ಚಿತ್ರದ ಹಾಡುಗಳನ್ನು ಅನಾವರಣಗೊಳಿಸುತ್ತಿರೋದು ರಾಕಿಂಗ್ ಸ್ಟಾರ್ ಯಶ್!

 

 

ಹೀಗೆ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್‌ಗಳೂ ಉತ್ತೇಜನ ನೀಡಿ ಮೆಚ್ಚಿಕೊಂಡಿರೋ ಅಪರೂಪದ ಚಿತ್ರ ಸಂಯುಕ್ತ-೨. ಹೀಗೆ ಎಲ್ಲ ನಟರೂ ಈ ಚಿತ್ರವನ್ನು ಸುಮ್ಮನೇ ಮೆಚ್ಚಿಕೊಂಡರೆಂದುಕೊಂಡರೆ ತಪ್ಪಾಗುತ್ತದೆ. ಈ ಚಿತ್ರದಲ್ಲಿ ಅಂಥಾ ವಿಶಿಷ್ಟವಾದ ಅಂಶವಿರೋದರಿಂದಲೇ ಇಂಥಾದ್ದೊಂದು ಉತ್ತೇಜನ ಮತ್ತು ಬೆಂಬಲ ಸಿಗುತ್ತಿದೆ. ಈ ಮೂಲಕವೇ ಸಂಯುಕ್ತ-2 ಚಿತ್ರದೆಡೆಗಿನ ನಿರೀಕ್ಷೆ ದಿನ ದಿನವೂ ನಿಗಿನಿಗಿಸಲಾರಂಭಿಸಿದೆ!

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top