ದೇವರು

ಶಿವ ದೇವನಿಗೆ ಯಾರೂ ಜನ್ಮ ಕೊಟ್ಟರು ಅಂತಾ ತಿಳ್ಕೊಬೇಕಾ ? ಈ ಕಥೆ ಕೇಳಿದ್ಮೇಲೆ ನಿಮಗೆ ಆಶ್ಚರ್ಯ ಆಗ್ದೇ ಇರಲ್ಲ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಗವಂತನಾದ ಶಿವ   ದೇವನಿಗೆ ಯಾರೂ ಜನ್ಮ ಕೊಟ್ಟರು ಎಂದು ತಿಳಿದುಕೊಳ್ಳಬೇಕಾ ? ನಿಮಗೂ ಸಹ  ಈ ಕಥೆಯನ್ನು ಕೇಳಿದ ಮೇಲೆ ಆಶ್ಚರ್ಯವಾಗುತ್ತದೆ 

 

ಭಗವಂತನಾದ ಶಿವ ದೇವರ ಕೂದಲು ಮನಸ್ಸಿನ ಸಾಮರಸ್ಯವನ್ನು ಸಂಕೇತಿಸುತ್ತದೆ. ತ್ರಿಶೂಲವು ಮನಸ್ಸನ್ನು ಹಿಡಿತದಲ್ಲಿ  ಇಟ್ಟುಕೊಳ್ಳುತ್ತದೆ. ಶಿವನು ಧ್ಯಾನದಲ್ಲಿ ಕುಳಿತಿರುವ ಭಂಗಿಯು ಶಾಂತಿಯನ್ನು ಸೂಚಿಸುತ್ತದೆ. ಶಿವನ ಕೊರಳಿನಲ್ಲಿರುವ ಹಾವು ಅಹಂಕಾರವನ್ನು ಹೊರದೂಡಿಸುವ ಸೂಚನೆಯಾಗಿದೆ. ಅವನೇ ಮಹಾದೇವ. ಈ ಇಡೀ ಜಗತ್ತಿಗೆ ದೇವನಾದ ಶಿವ.

 

 

 

ಶಿವನ ದೇವತಾ ಶಕ್ತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ಅವನು ಹೇಗೆ ಎಲ್ಲಾ ಕೆಟ್ಟದ್ದನ್ನು ನಾಶ ಮಾಡುತ್ತಾನೆ ಎಂದು ಸಹ ಗೊತ್ತಿದೆ. ಶಿವನ ಉಳಿವಿನ ಬಗ್ಗೆ ಅನೇಕ ಸಾಕ್ಷಿ ಆಧಾರಗಳು ಮತ್ತು ವಿಭಿನ್ನ ಕಥೆಗಳು ನಮಗೆ ಸಿಗುತ್ತವೆ. ಆದರೆ ಶಿವನ ತಂದೆ ಯಾರು ? ಎಂಬ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿಲ್ಲ ….

ಸಾಮಾನ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಶಿವನಿಗೆ ಪೋಷಕರೇ ಇಲ್ಲ. ಅಂದರೆ ತಂದೆ ತಾಯಿ ಯಾರೂ ಇಲ್ಲ. ಹಾಗಾದರೆ ಅವನು ಹೇಗೆ ಜನ್ಮ ತಾಳಿದ ? ಈ ಲೋಕದ ಸೃಷ್ಟಿಕರ್ತನಾದ ಬ್ರಹ್ಮನೇ ಶಿವನ ತಂದೆ ಎಂದು ಸಹ ಹೇಳಲಾಗುತ್ತದೆ.

 

ಹಾಗಾದರೆ ಶಿವನ ತಾತ ಯಾರು ?

ಶಿವನಿಗೆ ಮತ್ತೆ ಪ್ರಶ್ನೆಯನ್ನು ಕೇಳಿದಾಗ ಇದರ ಬಗ್ಗೆ ಅವನು ಹೇಳಿದ ಭಗವಂತನಾದ ವಿಷ್ಣುವೇ ನನ್ನ ತಾತನೆoದು.

 

ಶಿವನ ಮುತ್ತಾತ ಯಾರು ?

ಶಿವನ ಅವನ ಮುತ್ತಾತನ ಬಗ್ಗೆ ಕೇಳಿದಾಗ ಅವನು ಹೇಳಿದ ಅವನೇ ಮುತ್ತಾತನೆoದು.

 

ಇದಕ್ಕೆ ಸಂಬಂಧಪಟ್ಟ ಇನ್ನೊಂದು ಕುತೂಹಲಕಾರಿಯಾಗಿರುವ ಕಥೆಯಿದೆ.

 

ಅದೇನೆಂದರೆ ಭಗವಂತನಾದ ಬ್ರಹ್ಮನು ಮತ್ತು ದೇವನಾದ ವಿಷ್ಣುವು ನಮ್ಮಿಬ್ಬರಲ್ಲಿ ಯಾರು ಅತ್ಯಂತ ಶಕ್ತಿಶಾಲಿಗಳು ಎಂದು ವಾಗ್ವಾದ ಮಾಡುತ್ತಿದ್ದರು.

ಅಲ್ಲಿಂದ ಪ್ರಜ್ವಲಿಸುವ ಬೆಳಕೊಂದು ಕಂಬದಲ್ಲಿ ಬೆಳಕಾಗಿ ಮೂಡಿತು. ಈ ಬೆಳಕು ವಿಸ್ತರಿಸುತ್ತಾ ಇಡೀ ಭೂಮಿಯನ್ನೇ ನಾಶ ಮಾಡುವುದರ ಕಡೆಗೆ ಬೆಳೆಯಿತು. ಅಲ್ಲಿಂದ ಬೆಳೆಯುತ್ತಾ ಬೆಳೆಯುತ್ತಾ ಒಂದು ತುದಿಯಿಂದ ಮತ್ತೊಂದು ತುದಿಗೆ ಎರಡು ದೇವರಿಗೂ ಸಹ ಆದಿ ಮತ್ತು ಅಂತ್ಯಗಳನ್ನು    ಕಂಬದ ಮದ್ಯೆ ಕಂಡು ಹಿಡಿಯಲು ಆಗಲಿಲ್ಲ .ಆಗ ಭಗವಂತನಾದ ಶಿವನು ಆ ಕಂಬದೊಳಗಿಂದ ಹೊರಬಂದನು.

 

 

ಇದು ದೃಢೀಕರಿಸುವುದೇನೆoದರೆ ಶಿವನಿಗೆ ಆದಿ ಮತ್ತು ಅಂತ್ಯ ಎರಡೂ ಸಹ ಇಲ್ಲ .ಈ ಭೂಮಿಯ ಮೇಲೆ ಅವತರಿಸಿದ ಅಥವಾ ಹುಟ್ಟಿದ ಕಥೆಗೆ ಅವನು ಎಲ್ಲಾ ಕಥೆಯಲ್ಲಿಯೂ ಇದ್ದಾನೆ .ಶಿವನು ಇರುವುದಕ್ಕೆ ಒಂದೇ ಅಸ್ತಿತ್ವವೇನೂ ಇಲ್ಲ. ಈ ಎಲ್ಲಾ ಸತ್ಯಗಳೂ ಕೂಡ ಪುರಾಣಗಳಲ್ಲಿ ತಿಳಿಸಲಾಗಿದೆ. ಇದು ಕಥೆಯ ಒಂದು ಭಾಗ ಮಾತ್ರ ಆಗಿದೆ ಅಥವಾ ಪುರಾಣವೂ ಸಹ ಆಗಿರಬಹುದು. ಆದರೆ ಅನೇಕ ಜನರು ನಂಬುವುದೇನೆಂದರೆ ಭಗವಂತನಾದ ಶಿವನಿಗೆ ಅನೇಕ ಹೆಸರುಗಳಿವೆ ಮತ್ತು ಅನೇಕ ಅವತಾರಗಳು ಸಹ ತನ್ನ ಎಲ್ಲ ಭಕ್ತಾದಿಗಳಿಗೂ ಗೊತ್ತು.

 

 

ಭಕ್ತಾದಿಗಳ ಕರೆಗೆ ಅವನು ಕರೆದಾಗ ಬೇಗ ಪ್ರಸನ್ನ ನಾಗಿ ಅವರ ಆಸೆಯನ್ನು ಈಡೇರಿಸುತ್ತಾನೆ.  ಶಿವನು ಎಲ್ಲಾ ಕಡೆಯಲ್ಲಿಯೂ ಇದ್ದಾನೆ.

ಶಿವನಿಗೆ ಏಕ ಅಸ್ತಿತ್ವ ಇಲ್ಲ. ಶಿವನು ಸರ್ವವ್ಯಾಪಿ . ಶಿವನು ಇಡೀ ಜಗತ್ತಿನಲ್ಲಿ ಸರ್ವಾಂತರ್ಯಾಮಿ. ಎಲ್ಲಾ ಜೀವಿಗಳಲ್ಲಿಯೂ ಸಹ ನೆಲೆಸಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top