ಆರೋಗ್ಯ

ಟಿಬಿ ಅಥವಾ ಕ್ಷಯರೋಗದಿಂದ ಕಷ್ಟ ಪಡ್ತಾ ಇದ್ರೆ ಈ ಮನೆ ಮದ್ದು ಮಾಡ್ಕೊಂಡು ಆದಷ್ಟು ಬೇಗ ವಾಸಿ ಮಾಡ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಟಿಬಿ ಅಥವಾ ಕ್ಷಯರೋಗದಿಂದ ಕಷ್ಟ ಪಡ್ತಾ ಇದ್ರೆ ಈ ಮನೆ ಮದ್ದು ಮಾಡ್ಕೊಂಡು ಆದಷ್ಟು ಬೇಗ ವಾಸಿ ಮಾಡ್ಕೊಳ್ಳಿ

 

 

ಟಿಬಿ ಎಂದು ಕೂಡ ಕರೆಯಲ್ಪಡುವ ಕ್ಷಯರೋಗವು ‘ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್’ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಸೋಂಕು. ಪ್ರಾಥಮಿಕವಾಗಿ ಶ್ವಾಸೇಂದ್ರಿಯ ಸ್ಥಿತಿಯಿದ್ದರೂ ಸಹ, ಸೋಂಕು ನಿಧಾನವಾಗಿ ಇತರ ಶ್ವಾಸ ಅಂಗಗಳಿಗೆ ಹಾಗು ರಕ್ತಕ್ಕೆ ಹರಡಬಹುದು .

ಸೋಂಕು ಸಾಮಾನ್ಯವಾಗಿ ಒಂದು ಎರಡು ಬಾರಿಯ ಸಂಪರ್ಕದಲ್ಲಿ ಹರಡುವುದಿಲ್ಲ ಪುನರಾವರ್ತಿತ ಅಥವಾ ದೀರ್ಘಕಾಲೀನ ಸಂಪರ್ಕದಿಂದ ಹರಡುತ್ತದೆ , ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅನುಚಿತ ಆಹಾರಕ್ರಮಗಳು ಸಹ ಈ ಖಾಯಿಲೆಗೆ ಕಾರಣವಾಗುತ್ತದೆ.

 

ಕ್ಷಯರೋಗ ಬಂದಾಗ ಈ ಆಹಾರ ಕ್ರಮಗಳನ್ನು ಪಾಲಿಸಿದರೆ ಬಹಳ ಒಳ್ಳೆಯದು

 

ಬೆಳ್ಳುಳ್ಳಿ

 

 

ಕತ್ತರಿಸಿದ ಅರ್ಧ ಟೀಚಮಚ ಬೆಳ್ಳುಳ್ಳಿಯನ್ನು ಒಂದು ಕಪ್ ಹಾಲು ಮತ್ತು ನಾಲ್ಕು ಕಪ್ ನೀರು ಸೇರಿಸಿ ಮಿಶ್ರಣ ಮಾಡಿ ನಾಲ್ಕನೇ ಒಂದು ಭಾಗಕ್ಕೆ ತಗ್ಗಿಸುವವರೆಗೂ ಕುದಿಸಿ ದಿನಕ್ಕೆ ಮೂರು ಬಾರಿ ಈ ಮಿಶ್ರಣವನ್ನು ಕುಡಿಯಿರಿ.

 

ಬಾಳೆಹಣ್ಣು

 

 

ಒಂದು ಮಾಗಿದ ಬಾಳೆಹಣ್ಣು ತೆಗೆದುಕೊಂಡು ಅದನ್ನು ಒಂದು ಕಪ್ ತೆಂಗಿನ ನೀರಿನಲ್ಲಿ ರುಬ್ಬಿ ಒಂದು ಟೀಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿ.

 

ನುಗ್ಗೆ ಸೊಪ್ಪು

 

 

ಒಂದು ಬಟ್ಟಲು ನೀರಿನಲ್ಲಿ ಒಂದು ಹಿಡಿ ನುಗ್ಗೆ ಸೊಪ್ಪು ಸೇರಿಸಿ ಬೇಯಿಸಿ ತಣ್ಣಗಾದ ಮೇಲೆ ಉಪ್ಪು, ಮೆಣಸು ಮತ್ತು ನಿಂಬೆ ರಸವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ದಿನಾ ಬೆಳಗ್ಗೆ ಕುಡಿಯಿರಿ.

 

ಬೆಟ್ಟದ ನಲ್ಲಿಕಾಯಿ

 

ಮೂರು ಅಥವಾ ನಾಲ್ಕು ಬೆಟ್ಟದ ನಲ್ಲಿಕಾಯಿಯನ್ನು ತೆಗೆದುಕೊಂಡು ರುಬ್ಬಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳಗ್ಗೆ ಕುಡಿಯಿರಿ.

 

ಕಿತ್ತಳೆ

 

 

ಒಂದು ಲೋಟ ಕಿತ್ತಳೆ ರಸಕ್ಕೆ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

 

ಸೀತಾ ಫಲ ಹಣ್ಣು

 

 

ಕತ್ತರಿಸಿದ ಎರಡು ಸೀತಾ ಫಲಹಣ್ಣು ತೆಗೆದುಕೊಂಡು ಅದಕ್ಕೆ ಒಂದೂವರೆ ಕಪ್ಗಳಷ್ಟು ನೀರಿನಲ್ಲಿ ಹಾಕಿ ಕುದಿಸಿ ,ತಣ್ಣಗಾದ ಮೇಲೆ ಎರಡು ಚಮಚ ಪುಡಿ ಮಾಡಿದ ಸಕ್ಕರೆ ಬೆರೆಸಿ ಒಂದು ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ ರುಬ್ಬಿ ದಿನಕ್ಕೆ ಎರಡು ಬಾರಿ ಕುಡಿಯಿರಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top