fbpx
ದೇವರು

ಕಾಣಿಪಾಕ ಸ್ವಯಂಭು ವಿನಾಯಕ ದೇವಸ್ಥಾನ ಹೇಗೆ ಹುಟ್ಟಿದ ಹಿಂದಿನ ಕಥೆ ಕೇಳಿದ್ರೆ ಆಶ್ಚರ್ಯ ಪಡ್ತಿರಾ ಅಷ್ಟೇ ಅಲ್ಲ ಆ ಬಾವಿಯ ತೀರ್ಥ ಕುಡಿದರೆ ಚರ್ಮ ಸಮಸ್ಯೆ , ಸಂತಾನ , ಮದುವೆ ಸಮಸ್ಯೆ , ಹಣ ಕಾಸಿನ ತೊಂದರೆ ಹತ್ರಾನೂ ಬರೊಲ್ವಂತೆ !

ಕಾಣಿಪಾಕ ವರಸಿದ್ಧಿ ವಿನಾಯಕ ದೇವಾಲಯ

 

ಕಾಣಿಪಾಕ ವರಸಿದ್ಧಿ ವಿನಾಯಕ ಎಂದೇ ಪ್ರಸಿದ್ಧಿ ಹೊಂದಿರುವ ವಿಜ್ಞೇಶ್ವರನು ವಿಘ್ನಗಳನ್ನು ತೊಲಗಿಸುವವನು , ಸತ್ಯಂ ಶಿವಂ ಸುಂದರಂ ಎಂಬಂತೆ ಶಿವನು ಸತ್ಯಕ್ಕೆ ಧರ್ಮಕ್ಕೆ ಆದ್ಯನು , ಅಸತ್ಯಕ್ಕೆ ಅಧರ್ಮಕ್ಕೆ ಸಿಂಹ ಸ್ವಪ್ನನು .

 

 

ಗಣಗಳ ಅಧಿಪತಿ ವಿಶೇಷ ಭಕ್ತ ಗಣ ಕೂಟವನ್ನು ಹೊಂದಿರುವ ಈ ದೇವಾಲಯದ ಉತ್ತರಕ್ಕೆ ಬಹುದಾ ನದಿ ಪ್ರವಹಿಸುತ್ತಿದೆ , ಸುಮಾರು ಸಾವಿರ ವರ್ಷಗಳ ಪೂರ್ವಕ್ಕಿಂತ ಮುಂಚೆ ಈ ದೇವಾಲಯದ ನಿರ್ಮಾಣ ಜರುಗಿತು ಎಂದು ಪುರಾವೆಗಳು ಆಧಾರಗಳು ಹೇಳುತ್ತವೆ .

 

ಎಲ್ಲಿದೆ ಈ ದೇವಾಲಯ ?

ಸ್ವಯಂಭು ವಿನಾಯಕನ ದೇವಾಲಯ ಈ ಕಾಣಿಪಾಕ ವರಸಿದ್ಧಿ ವಿನಾಯಕನ ಆಲಯ , ಆಂಧ್ರ ಪ್ರದೇಶದ ಚಿತ್ತೂರಿನ ಐರಾಲಮಂಡಲ ವಿಹಾರಿಪುರ ಗ್ರಾಮದಲ್ಲಿ ಕಾಣಿಪಾಕಂ ಎಂಬ ಸ್ಥಳದಲ್ಲಿದೆ .

 

ದೇವಾಲಯದ ಇತಿಹಾಸ

 

ಹಿಂದೊಮ್ಮೆ ವಿಹಾರಿ ಪುರೈ ಎಂಬ ಗ್ರಾಮದಲ್ಲಿ ಹುಟ್ಟು ಕುರುಡರು , ಮೂಕರು ಹಾಗು ಕಿವುಡರು ಆದ ಸಹೋದರರು ತಮ್ಮಲ್ಲಿದ್ದ 20 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು , ಒಂದು ಬಾರಿ ಮಳೆಯ ಅಭಾವದ ಕಾರಣ ಬರಗಾಲದ ಸಮಸ್ಯೆಯಿಂದ ಜನರ ಜೀವನವೆಲ್ಲ ಅಸ್ತವ್ಯಸ್ತವಾಯಿತು ಕುಡಿಯಲು ಒಂದು ಗುಟುಕು ನೀರು ಸಿಗದೇ ಜನರು ಪರದಾಡಿದರು .

ಬರಗಾಲವಿದ್ದ ಕಾರಣ ಆ ಸಹೋದರರು ಬಾವಿಯನ್ನು ಅಗೆಯಲು ಪ್ರಾರಂಭಿಸಿದರು , ಹೀಗೆ ಬಾವಿಯನ್ನು ತೊಡುತ್ತಿದ್ದಾಗ ಒಂದು ದೊಡ್ಡ ಕಲ್ಲು ಅಡ್ಡ ಬಂದಿತು ಆ ಕಲ್ಲನ್ನು ಆರೆಯ ಮೂಲಕ ಒಡೆಯಲು ಮುಂದಾದಾಗ ಆ ಬಂಡೆಗೆ ತಗುಲಿದ ಏಟಿನಿಂದ ರಕ್ತ ಹೊರಚಿಮ್ಮಲು ಶುರುವಾಗಿತ್ತು , ಆ ರಕ್ತವು ಆ ಮೂರು ಸಹೋದರರ ಮೇಲೆ ಬಿದ್ದಾಗ ಅಲ್ಲಿ ಸ್ವಯಂಭು ವಿನಾಯಕನ ಉಧ್ಭವವಾಯಿತು ಎಂದು ಹೇಳಲಾಗುತ್ತದೆ .

 

 

 

ಭಕ್ತ ಸಮೂಹ ದೇವರಿಗೆ ಪೂಜೆ ಮಾಡಿ ತೆಂಗಿನ ಕಾಯಿಯನ್ನು ಒಡೆದಾಗ ಆ ನೀರು ಚಿಮ್ಮಿ ಹರಿಯಲು ಶುರುವಾಯಿತು , ಹೀಗೆ ಹರಿದ ನೀರು ಮುಂದೆ ನದಿಯಾಯಿತು ಎಂದು ಪುರಾಣ ಕಥೆಗಳು ಹೇಳುತ್ತವೆ , ಕಾಣಿ ಎಂದರೆ ಎಕ್ಕರೆ , ಪಾಕ ಎಂದರೆ ಹರಿಯುವುದು ಎಂದರ್ಥ .ಸ್ವಯಂಭು ವಿನಾಯಕನ ಉದ್ಭವವಾದ ಮೇಲೆ ವಿಹಾರಿ ಪುರೈ ಕಾಣಿಪಾಕಂ ಎಂಬ ಹೆಸರು ಪಡೆಯಿತು.

 

ವಿನಾಯಕನು ಬೆಳೆಯುತ್ತಿದ್ದಾನೆ !

 

 

ಕುಲೋ ತುಂಗಾ ಚೋಳನೆಂಬ ರಾಜನು ದೇವಾಲಯದ ಜೀರ್ಣೋದ್ಧಾರ ಮಾಡಿದ ಎಂದು ಇತಿಹಾಸ ಹೇಳುತ್ತದೆ , ಸುತ್ತ ನೀರಿನ ಹರಿವು ಈಗಲೂ ಇದೆ , ಸ್ವಯಂಭು ವಿನಾಯಕನು ದಿನಾ ಬೆಳೆಯುತ್ತಿದ್ದಾನೆ ಎಂಬ ನಂಬಿಕೆ ಈಗಲೂ ಇದೆ , ಇದಕ್ಕೆ ಸಾಕ್ಷಿ ಎಂಬಂತೆ 1945 ರಲ್ಲಿ ಅರಗೊಂಡಪಳ್ಳಿಯಲ್ಲಿರುವ ಬೇಜವಾಡ ಸಿದ್ದಯ್ಯ ನವರ ಪತ್ನಿ ಲಕ್ಷ್ಮಮ್ಮ ಎಂಬುವವರು ಬೆಳ್ಳಿಯ ಕವಚವನ್ನು ಗಣೇಶ ಮೂರ್ತಿಗೆ ಸರಿ ಹೊಂದುವಂತೆ ಮಾಡಿಸಿದ್ದರಂತೆ , ಆದರೆ ಆ ಕವಚ ಈಗ ಸರಿ ಹೊಂದುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ .

ಈಗಲೂ ಗಣೇಶ ಹುಟ್ಟಿದ ಬಾವಿಯಿಂದಲೇ ನೀರು ತಗೆದು ತೀರ್ಥ ರೂಪದಲ್ಲಿ ನೀಡಲಾಗುತ್ತದೆ .

 

ವಿನಾಯಕನ ಪವಾಡ

 

ಪೂರ್ವದಲ್ಲಿ ಶಂಭು ಲಿಖಿತ ಎಂಬ ಇಬ್ಬರು ಸಹೋದರರು ಬಹು ದೂರದಿಂದ ಸ್ವಾಮಿಯ ದರ್ಶನಕ್ಕೆಂದು ನಡೆದು ಬರುತ್ತಿರುವಾಗ ತಾವು ತಂದಿದ್ದ ಆಹಾರವೆಲ್ಲ ಮಾರ್ಗ ಮಧ್ಯದಲ್ಲೇ ಖಾಲಿಯಾಗಿ ಹೋಯಿತಂತೆ ಹೊಟ್ಟೆ ಹಸಿವು ತಾಳಲಾರದೆ ತಮ್ಮ ಲಿಖಿತ ಅಲ್ಲೇ ಇದ್ದ ತೋಟಕೆ ನುಗ್ಗಿ ಮಾವಿನ ಹಣ್ಣನ್ನು ಕೊಯ್ದು ತಿಂದನಂತೆ ಇದರಿಂದ ಕೋಪಗೊಂಡ ಅಣ್ಣ ಶಂಭು ಇದು ಸರಿಯಲ್ಲ ಕಳ್ಳತನ ತಪ್ಪು ಆದ್ದರಿಂದ ಶಿಕ್ಷೆ ಕೊಡಿಸಲೇಬೇಕೆಂದು ಸಮೀಪದ ರಾಜನ ಬಳಿಗೆ ಕರೆದುಕೊಂಡು ಹೋದನಂತೆ .

 

 

ಆಗ ರಾಜ ಲಿಖಿತನಿಗೆ ರಾಜ ಎರಡು ಕೈಗಳನ್ನು ಕತ್ತರಿಸಿದನಂತೆ ಆದರೆ ಶಂಭು ಲಿಖಿತ ಇಬ್ಬರು ಇಷ್ಟು ದೊಡ್ಡ ಶಿಕ್ಷೆಯಾಗಬಹುದೆಂದು ಊಹಿಸಿರಲಿಲ್ಲ , ಆನಂತರ ಇಬ್ಬರು ರಾಜನ ಸ್ಥಳ ಬಿಟ್ಟು ಮುಂದೆ ಸಾಗಿದರಂತೆ ಹೀಗೆ ಬಂದು ಕಾಣಿಪಾಕ ವರಸಿದ್ಧಿ ವಿನಾಯಕ ದೇವಾಲಯ ತಲುಪಿದರಂತೆ ಆನಂತ್ರ ನದಿಯಲ್ಲಿ ಮುಳುಗಿ ಮೇಲೆ ಏಳುವಾಗ ಲಿಖಿತನಿಗೆ ಪವಾಡ ನಡೆದು ಎರಡು ಕೈಗಳು ಬಂದವಂತೆ ಆದ್ದರಿಂದ ಆ ಬಾಹು ಎಂಬ ಪದದಿಂದ ನದಿಗೆ ಬಹುದಾ ನದಿ ಎಂದು ಹೆಸರು ಬಂತಂತೆ .

 

 

ಯಾವುದೇ ಜೀವನದ ಸಮಸ್ಯೆಗಳಿದ್ದರೂ ಈ ನದಿಯಲ್ಲಿ ಬಂದು ಸ್ನಾನ ಮಾಡಿದರೆ ಪಾಪಗಳು ಕಳೆಯುವುದಲ್ಲದೆ , ಪ್ರಮಾಣ ಏನಾದರು ತಪ್ಪಾಗಿ ಇಲ್ಲಿ ಮಾಡಿದರೆ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಬೇಕಂತೆ , ಚರ್ಮ ಸಮಸ್ಯೆ , ಸಂತಾನ , ಮದುವೆ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿಗೆ ಭೇಟಿ ಕೊಟ್ಟರೆ ಪರಿಹಾರವಾಗುವುದು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top