ದೇವರು

‘ಕೃಷ್ಣ.. ನಾನು ಯುದ್ಧವನ್ನು ಮಾಡಲಾರೆ’ ಎಂದ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆಯ ಉಪದೇಶ ಮಾಡಿದ ಕಥೆ

ಶ್ರೀಕೃಷ್ಣನಿಂದ ಅರ್ಜುನನಿಗೆ ಭಗವದ್ಗೀತೆಯ ಉಪದೇಶ.

 

 ಶ್ರೀಕೃಷ್ಣನಿಂದ ಗೀತೋಪದೇಶ .

 

 

ದ್ವಾರಕೆಯಿಂದ ಬರುವಾಗಲೇ ಅರ್ಜುನನು ಶ್ರೀಕೃಷ್ಣನಿಗೆ ರಥದ ಸಾರಥ್ಯವನ್ನು ಮಾಡಲು ಕೇಳಿಕೊಂಡಿದ್ದನು. ಯಾವುದೇ ಸಮಯದಲ್ಲಿಯೂ ಶ್ರೀ ಕೃಷ್ಣನು ಹೇಳಿದಂತೆ ಅರ್ಜುನನು ಯುದ್ಧ  ಮಾಡುವುದು ನಿಶ್ಚಿತವಾಗಿದ್ದು. ಕಾಂಡವ ದಹನದಲ್ಲಿ ತನಗೆ ದೊರೆತ ಅಗ್ನಿ ರಥ, ಗಾಂಡೀವ, ಧನಸ್ಸು, ಬಿಳಿ ಕುದುರೆಗಳು, ಕೆಂಪಾದ ಧ್ವಜ, ಅದರಲ್ಲಿ ಹನುಮಂತ ಹೀಗೆ ಈ ರಥವು ಅತ್ಯಂತ ಮಹತ್ವ ಒಂದಿದೆ. ಎರಡು ಸೈನ್ಯದಲ್ಲಿ ಯುದ್ಧದ ಸೂಚನೆಗಾಗಿ ಶಂಖ, ನಗಾರಿ, ಕಹಳೆ ಮುಂತಾದ ವಾದ್ಯಗಳನ್ನು ಮೊಳಗಿಸಿದರು.

ಶ್ರೀ ಕೃಷ್ಣನು ಈ ಸಮಯದಲ್ಲಿ ಉಪದೇಶ ಮಾಡಿದ ಭಾಗವು ಗೀತೋಪದೇಶ ಅಥವಾ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದೆ. ಹಿಂದೂಗಳು ಮೂರು ಮುಖ್ಯ ಗ್ರಂಥಗಳಲ್ಲಿ ಭಗವದ್ಗೀತೆ ಸಹ ಒಂದಾಗಿದೆ. ಇದು ಪ್ರಸಿದ್ಧವಾಗಿದೆ ಕುರುಕ್ಷೇತ್ರದ ರಣಭೂಮಿಯಲ್ಲಿ ಎರಡು ಸೈನ್ಯ ಎದುರು ಬದುರು ಆದಾಗಲೇ ಗೀತೆಯ ಉಪದೇಶ ಸಂದರ್ಭವೂ ಪ್ರಾರಂಭವಾಗುವುದು .

ಧರ್ಮ ಯುದ್ಧವಾದ ಕುರುಕ್ಷೇತ್ರದಲ್ಲಿ ನನ್ನ ಮಕ್ಕಳು ಮತ್ತು ಪಾಂಡವರು ಏನು ಮಾಡಿದರೂ ಹೇಳು  ? ಎಂದು ದೃತರಾಷ್ಟ್ರನು ಸಂಜಯನಿಗೆ ಕೇಳಿದ ವಾಕ್ಯವೇ ಭಗವದ್ಗೀತೆಯ ಮೊದಲ ವಾಕ್ಯವಾಗಿದೆ. ಮುಂದೆ ಏನು ಆಯಿತು ? ಎಂದು ಸಂಜಯನು ವಿವರಿಸಿದನು.

 

 

ಎರಡು ಸೈನ್ಯದಲ್ಲಿ ಭಾರೀ ವಾದ್ಯಗಳ ಘೋಷ  ಕೇಳಿ ಬಂದರೂ ಶ್ರೀಕೃಷ್ಣನು ಪಾಂಚಜನ್ಯವನ್ನು, ಅರ್ಜುನನ್ನು ದೇವದತ್ತವನ್ನು, ಭೀಮಾ  ಪೌಂಡ್ರವನ್ನು  ಧರ್ಮರಾಜನು ಅನಂತವಿಜಯವನ್ನು, ನಕುಲನ ಸುಘೋಷವನ್ನು  ಮತ್ತು ಸಹದೇವ ಮಣಿ ಪುಷ್ಪಕವನ್ನು  ಊದಿದರು.

ಶ್ರೀಕೃಷ್ಣನಿಗೆ ರಥವನ್ನು ಎರಡು ಸೇನೆಯ ನಡುವೆ ನಿಲ್ಲಿಸಲು ಅರ್ಜುನನ್ನು ಕೇಳಿಕೊಂಡನು. ಅರ್ಜುನನು ಸುತ್ತಲೂ ನೋಡಿದಾಗ ಅವನ ಮನದಲ್ಲಿ ಇವರೆಲ್ಲರೂ ನನ್ನ ಹಿರಿಯರು, ಗುರುಗಳು ,ಬಂಧುಗಳು. ಇವರನ್ನು ನಾನು ಕೊಲ್ಲಬೇಕೆ ? ಅಜ್ಜಯ್ಯ ಭೀಷ್ಮ, ಗುರು ದ್ರೋಣರು, ಗೆಳೆಯ ಅಶ್ವತ್ಥಾಮ, ಮಾವ ಶಲ್ಯ ಹೀಗೆ ಎಲ್ಲರೂ ಸಹ ಚಿರಪರಿಚಿತರು. ಇವರನ್ನೆಲ್ಲಾ ಕೊಲ್ಲುವುದು ಸಾಧ್ಯವಿಲ್ಲ  ? ಎಂದು ಅರ್ಜುನನಿಗೆ ಅನ್ನಿಸಿತು.

ಆಗ ಅವನ ಕೈಕಾಲು ನಡುಗಿದವು. ಗಾಂಡೀವ ಜಾರಿತ್ತು ನಡುಕ ಉಂಟಾಯಿತು ಬೆವರಿದ ಮೈ, ನಡುಗಿದ ಸ್ವರದಿಂದ , ರಥದಿಂದ ಇಳಿದು ಕೃಷ್ಣ ನಾನು ಯುದ್ಧವನ್ನು ಮಾಡಲಾರೆ. ಕೌರವರಿಗೆ ರಾಜ್ಯವಿರಲಿ ಎಂದು ನಿರ್ವೇದದಿಂದ ನುಡಿದನು. ಶ್ರೀಕೃಷ್ಣನು ಇದೇನು ಅರ್ಜುನ ! ವೀರನಾದ ,ಧೀರನಾದ ನಿನಗೆ ಈ ರೀತಿಯ ಮಾತುಗಳು ಯೋಗ್ಯವೇ  ?  ಕ್ಷತ್ರಿಯನಿಗೆ ಗೆಲುವು ಇಲ್ಲವೇ ವೀರ ಮರಣ ಅಲಂಕಾರದಂತೆ.

 

 

ನೀನು ಕೊಲ್ಲದಿದ್ದರೂ ಇವರೆಲ್ಲರೂ ಶಾಶ್ವತವಾಗಿರುವುದಿಲ್ಲ. ಹುಟ್ಟಿದವರಿಗೆ ಸಾವು ನಿಶ್ಚಿತ. ಯಾರದೇ ಸಾವಿಗಾಗಿ ನೀನು ದುಃಖಿಸುವುದು ಬೇಡ. ನಾನು ಕೊಲ್ಲುತ್ತೇನೆ ಎನ್ನುವುದು ವ್ಯರ್ಥ ಅಭಿಮಾನ. ಶರೀರ ಮಾತ್ರವೇ ನಾಶ ಹೊಂದುವುದು .ಆತ್ಮನಿಗೆ ಜನ್ಮವೂ ಇಲ್ಲ ಮರಣವೂ ಇಲ್ಲ. ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಆತ್ಮ ಸಂಚಾರವಾಗುವುದು. ನೀನು ಯುದ್ಧ ಮಾಡಿದಾಗ ಕೌರವರ ದುಷ್ಟ ಶರೀರಗಳು ಮಾತ್ರ ಸಾಯುತ್ತದೆ. ಅವರ ಆತ್ಮಗಳಿಗೆ ಮತ್ತೆ ಬೇರೆ ಪುನರ್ಜನ್ಮ ಸಿಗುವುದು .

ಕ್ರೋಧ ,ಲೋಭ, ಮೋಹಗಳನ್ನು ಬಿಟ್ಟು ನಿನ್ನ ಕರ್ತವ್ಯವನ್ನು ನೀನು ಮಾಡು. ಸ್ಥಿತ ಪ್ರಜ್ಞರಿಗೆ ಸೋಲು, ಗೆಲುವು ಎಲ್ಲ ಒಂದೇ ಆಗುವುದು. ಹುಟ್ಟು ಸಾವಿಗಾಗಿ ನೀನು ದುಃಖಿಸುವುದು ವ್ಯರ್ಥ. ಕರ್ಮದಿಂದಾಗಿ ಈ ಶರೀರಗಳು ಮಾನವ ಅಥವಾ ಪ್ರಾಣಿಗೆ ಬರುತ್ತದೆ. ಆಹಾರ ಸೇವನೆ, ಉಸಿರಾಟ, ಮಿತ್ರರ ಭೇಟಿಯಂತೆ ಕರ್ತವ್ಯವೂ ಸಹ ಅನಿವಾರ್ಯವೇ, ಆಗಿರುವುದು. ಕರ್ತವ್ಯ ಲೋಪವಾಗದಂತೆ ಫಲ ಬಯಸದೆ ನೀನು ಕರ್ಮ ಮಾಡು ಎಂದನು ಶ್ರೀಕೃಷ್ಣ .

ದುಷ್ಟರನ್ನು ದಮನ ಮಾಡುವುದು ಈಗ ನಿನ್ನ ಕರ್ತವ್ಯವೇ ಆಗಿರುವುದು. ಅವರು ಬಂಧುಗಳೆoದು ಹಿರಿಯರೆಂದು ಭಾವಿಸಿ ಬಿಟ್ಟರೆ ಕರ್ತವ್ಯ ಲೋಪವೇ ಆಗುವುದು. ಕರ್ಮದಲ್ಲಿ ನಿನಗೆ ಅಧಿಕಾರವಿದೆ. ಫಲದ ಬಗ್ಗೆ ಚಿಂತಿಸಬೇಡ. ಕರ್ಮಯೋಗಿಯು ಎಲ್ಲರಿಗಿಂತಲೂ ಶ್ರೇಷ್ಠನು.

 

 

ಅರ್ಜುನ ನಾನು ಹಿಂದೆ ಹಲವು ಅವತಾರಗಳನ್ನು ಎತ್ತಿದ್ದು. ಇನ್ನು ಮುಂದೆ ಸಹ ಧರ್ಮ ರಕ್ಷಣೆಗಾಗಿ ಇನ್ನೂ ಹಲವು ಅವತಾರಗಳನ್ನು ಎತ್ತಿ ಈ ಭೂಮಿಯ ಮೇಲೆ ಬರುತ್ತೇನೆ. ಕಂಸ ಶಿಶುಪಾಲನನ್ನು ಕೊಂದಿದ್ದೆ, ಕೌರವರ ನಾಶವೂ ಸಹ ನನ್ನ ಕಾರ್ಯವೇ ಆಗಿದೆ. ತಮ್ಮ ವಿನಾಶವನ್ನು ಅವರು ತಾವೇ ತಂದುಕೊಂಡಿದ್ದಾರೆ. ನೀನು ಇದಕ್ಕೆ ಕಾರಣ ಎಂಬ ಭ್ರಮೆ ಬೇಡ ಎಂದು ಶ್ರೀಕೃಷ್ಣನು ತಿಳಿಸಿ ಹೇಳಿದನು.

ಅರ್ಜುನ ನಾನು ಎಲ್ಲಾ ವಸ್ತುಗಳಲ್ಲಿಯೂ ಸಹ ಇದ್ದೇನೆ. ಎಲ್ಲ ವಸ್ತುಗಳು ನನ್ನಲ್ಲಿ ಅಡಕವಾಗಿವೆ. ಓಂಕಾರ ಸ್ವರೂಪನಾಗಿ ಸೃಷ್ಟಿ, ಸ್ಥಿತಿ, ಲಯ ಕಾರಣನಾಗಿರುವೆ. ಎಲ್ಲ ರೂಪಗಳಲ್ಲಿಯೂ ಸಹ ನಾನು ಇದ್ದೇನೆ ಎಂದು ವಿಶ್ವರೂಪ ದರ್ಶನ ಮಾಡಿಸಿದನು. ಅರ್ಜುನನು ಭಗವಂತನಾದ ಶ್ರೀಕೃಷ್ಣನಲ್ಲಿಯೇ ಸಕಲವನ್ನು ಕಂಡನು. ಕೃಷ್ಣನಿಂದ ಉಪಕೃತ ನಾಗಿ ಕೊನೆಗೆ ನೀನು ಹೇಗೆ ಹೇಳುವೆಯೋ ಅದೇ ರೀತಿ ಮಾಡುತ್ತೇನೆ ಎಂದು ಹೇಳಿದನು.

ಹೀಗೆ ಸ್ವಲ್ಪ ಕಾಲದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಕರ್ತವ್ಯದ ಕರೆ ಆದೇಶವೇ  ಭಗವದ್ಗೀತೆಯ  720 ಪದ್ಯಗಳಲ್ಲಿ ಅಡಕವಾಗಿದೆ. ಭಕ್ತಿ ಜ್ಞಾನ ಕರ್ಮ ಯೋಗಗಳನ್ನು ಸಹ ತಿಳಿಸುತ್ತದೆ . ಭಗವಂತನು ಮಾನವರಿಗೆ ನೀಡಿದ ಶ್ರೇಷ್ಠವಾದ ಉಪದೇಶಾಮೃತವೇ ಈ ಭಗವದ್ಗೀತೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top