fbpx
ಮನೋರಂಜನೆ

ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟಳು ನಾಗಕನ್ನಿಕೆ..!

ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟಳು ನಾಗಕನ್ನಿಕೆ..!

 

 

ದರ್ಶನ್ ಮುಖ್ಯ ಪಾತ್ರ ನಿರ್ವಹಿಸುತ್ತಿರೋ ‘ಕುರುಕ್ಷೇತ್ರ ಚಿತ್ರಕ್ಕೆ ಬಿಡುವಿರದೇ ಚಿತ್ರೀಕರಣ ನಡೆಯುತ್ತಿದೆ. ಆದರೆ, ಇನ್ನೂ ಕೂಡಾ ಕೌತುಕದ ಎಪಿಸೋಡುಗಳು ಮಾತ್ರ ಕರಾರುವಾಕ್ಕಾಗಿ ಮುಂದುವರೆಯುತ್ತಲೇ ಇವೆ. ಈ ಘಳಿಗೆಯವರೆಗೂ ಕಲಾವಿದರುಗಳು ಯಾರ‍್ಯಾರೆಂಬ ಬಗ್ಗೆ ಒಂದು ಸಸ್ಪೆನ್ಸ್ ಕಾಯ್ದಿಟ್ಟುಕೊಂಡಿರೋ ನಿರ್ಮಾಪಕ ಮುನಿರತ್ನ ಆ ಮೂಲಕವೇ ಮತ್ತಷ್ಟು ಕುತೂಹಲ ಕೆರಳಿಸೋ ಮಜವಾದ ಹಾದಿ ಹಿಡಿದಿದ್ದಾರೆ!

 

 

ಇದೀಗ ಕುರುಕ್ಷೇತ್ರಕ್ಕೆ ಮತ್ತೋರ್ವ ತಾರೆಯ ಎಂಟ್ರಿಯಾಗಿದೆ. ಈ ಹಿಂದೆ ಧೈರ್ಯಂ ಚಿತ್ರದ ನಾಯಕಿಯಾಗಿ ಸದ್ದು ಮಾಡಿ, ಇದೀಗ ಕಿರುತೆರೆಯಲ್ಲಿ ನಾಗಕನ್ನಿಕೆಯಾಗಿ ಬುಸುಗುಡುತ್ತಿರೋ ಆದಿತಿ ಪ್ರಭುದೇವ್ ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅದಿತಿ ಇಲ್ಲಿ ಯಾವುದೇ ಪಾತ್ರ ನಿರ್ವಹಿಸುತ್ತಿಲ್ಲ. ಆಕೆ ಒಂದು ವಿಶೇಷವಾದ ಹಾಡಿನಲ್ಲಿ ದರ್ಶನ್ ಅವರೊಂದಿಗೆ ನರ್ತಿಸಲು ಆಫರ್ ನೀಡಿದ್ದಾರೆ. ಈ ಹಾಡಿಗಾಗಿಯೇ ಬಹುದಿನದಿಂದ ಭಾರೀ ಪ್ಲಾನಿಂಗ್ ನಡೆದಿತ್ತು. ಇದರಲ್ಲಿ ಬೇರೆ ಬೇರೆ ಭಾಷೆಗಳ ಪ್ರಖ್ಯಾತ ನಟಿಯರನ್ನು ಕರೆ ತರೋ ಬಗೆಗೂ ಸುದ್ದಿ ಹಬ್ಬಿಕೊಂಡಿತ್ತು. ಇದೀಗ ಆ ಜಾಗಕ್ಕೆ ಅಪ್ಪಟ ಕನ್ನಡತಿ ಆದಿತಿ ಆಯ್ಕೆಯಾಗುವ ಲಕ್ಷಣಗಳಿವೆ.

 

 

ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡು ಧೈರ್ಯಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ಹುಡುಗಿ ಅದಿತಿ ಪ್ರಭುದೇವ. ಅಷ್ಟಕ್ಕೂ ಆದಿತಿ ಈ ಫೀಲ್ಡಿಗೆ ಬಂದಿದ್ದೇ ಆಕಸ್ಮಿಕವಾಗಿ. ಆಕೆಗೆ ಮೊದಲಿನಿಂದಲೂ ನಟಿಯಾಗಬೇಕು ಎನ್ನುವ ಕನಸಿತ್ತಂತ್ತೆ. ಎಂ.ಬಿ.ಎ. ಓದಿ ಮುಗಿಸಿದ ನಂತರ ಆ ಬಯಕೆ ಮತ್ತಷ್ಟು ಹೆಚ್ಚಾಗಿತ್ತು. ದಾವಣಗೆರೆಯಲ್ಲಿ ಎಂ.ಬಿ.ಎ. ಮುಗಿದ ನಂತರ ಇಂಟರ‍್ನ್‌ಶಿಪ್‌ಗಾಗಿ ಬೆಂಗಳೂರಿಗೆ ಬಂದಿದ್ದ ಆದಿತಿ ಅದೇ ಹೊತ್ತಿಗೆ ‘ಗುಂಡ್ಯಾನ ಹೆಂಡ್ತಿ’ ಧಾರಾವಾಹಿಗಾಗಿ ಕರೆದಿದ್ದ ಆಡಿಷನ್‌ಗೆ ಹೋಗಿದ್ದರು. ಅದರಲ್ಲಿ ಪಾಸ್ ಆದ ಕಾರಣದಿಂದ ಗುಂಡ್ಯಾನ್ ಹೆಂಡ್ತಿ ಸೀರಿಯಲ್ಲಿನಲ್ಲಿ ಲೀಡ್ ಕ್ಯಾರೆಕ್ಟರ್ ಸಿಕ್ಕಿತು.

 

 

 

ಆ ಪಾತ್ರ ಆದಿತಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟಿತ್ತು. ನಂತರ ಶಿವತೇಜಸ್ ನಿರ್ದೇಶನದ ಧೈರ್ಯಂ ಚಿತ್ರದಲ್ಲಿನ ಈಕೆಯ ನಟನೆಯನ್ನು ಕಂಡು ‘ರಾಧಿಕಾಗೆ ಸರಿಗಟ್ಟುವ ನಟಿಯೊಬ್ಬಳು ಸಿಕ್ಕಳಪ್ಪಾ… ಅಂತಾ ಗಾಂಧೀನಗರವೇ ಮಾತಾಡಿಕೊಂಡಿತ್ತು. ಇದೀಗ ನಾಗಕನ್ನಿಕೆ ಧಾರಾವಾಹಿಯಲ್ಲಿನ ಪಾತ್ರದ ಮೂಲಕವಂತೂ ಅವರು ಮನೆ ಮಾತಾಗಿದ್ದಾರೆ. ಇಂಥಾ ಆದಿತಿಗೆ ಇದೀಗ ದರ್ಶನ್ ಅವರ ಜೊತೆ ವಿಶೇಷವಾದ ಹಾಡೊಂದರಲ್ಲಿ ಹೆಜ್ಜೆ ಹಾಕೋ ಅವಕಾಶ ಸಿಕ್ಕಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top