fbpx
ಭವಿಷ್ಯ

ಮೇಷ ರಾಶಿಯವರ ಗುಣ ಮತ್ತು ಸ್ವಭಾವ ಹೇಗಿರುತ್ತೆ ? ಅದೃಷ್ಟ ಸಂಖ್ಯೆ,ಬಣ್ಣ,ದಿನ ಮತ್ತು ರತ್ನ ಯಾವುದು ತಿಳ್ಕೊಳ್ಳಿ

ಮೇಷ ರಾಶಿಯವರ ಗುಣ ಮತ್ತು ಸ್ವಭಾವಗಳು ಅದೃಷ್ಟ ಸಂಖ್ಯೆ,ಬಣ್ಣ,ದಿನ ಮತ್ತು ರತ್ನ .

 

 

ಮೇಷ ರಾಶಿಯ ಅಧಿಪತಿ ಕುಜ ಗ್ರಹ. ಮೇಷ ರಾಶಿಯವರ ಸ್ವಭಾವ ಜಡ ಸ್ವಭಾವ ರಾಶಿಯಾಗಿದ್ದು ವರಾಹ ಮಿಹಿರರು ಮತದಂತೆ ಕ್ರೂರ ಸ್ವಭಾವ ರಾಶಿಯಾಗಿರುತ್ತದೆ . ಕುಜ ಗ್ರಹವನ್ನು ಅಂಗಾರಕ ಎಂದು ಕರೆದಂತೆ ಮೇಷ ರಾಶಿಯವರು ಸ್ವಭಾವತಃ ಸ್ವಲ್ಪ ಅಧಿಕ ಕೋಪಿಷ್ಠರೆಂದೇ ಹೇಳಬಹುದು.

ಅಗ್ನಿ  ನಕ್ಷತ್ರಗಳಾದ ಭರಣಿಯ ನಾಲ್ಕು ಪಾದಗಳು ಹಾಗೂ ಕೃತ್ತಿಕಾ ನಕ್ಷತ್ರದ ಮೊದಲನೆ ಪಾದವು ಮೇಷ ರಾಶಿಯಾಗಿದೆ.

ಮೇಷ ರಾಶಿಯಲ್ಲಿ ಜನಿಸಿದವರ ಕೋಪ ತಾಪ ಸಹಿಸಲು ಅಸಾಧ್ಯವಾದದ್ದು. ಆಯುರ್ವೇದದಲ್ಲಿ ವಾತ ಹಾಗೂ ಕಫ ಪ್ರಕೃತಿ ಇವರಲ್ಲಿ ಹೆಚ್ಚು ಕಂಡು ಬರುತ್ತದೆ. ಹಾಗಾಗಿ ದೇಹದಲ್ಲಿ ಕಫವನ್ನು ಹೆಚ್ಚು ಮಾಡುವ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಗಟ್ಟಿ ಮೊಸರು ಇತ್ಯಾದಿಗಳಿಂದ ಆದಷ್ಟು ದೂರವಿದ್ದರೆ ಅಷ್ಟು ಸಹ ಒಳ್ಳೆಯದು.

ಮೇಷ ರಾಶಿಯವರಿಗೆ ಭಾಗ್ಯಾಧಿಪತಿ ಗುರುಗ್ರಹ ಆಗಿರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ, ಶಿರಡಿ ಸಾಯಿಬಾಬಾ ದೇವರ ಆರಾಧನೆ ಸದಾಕಾಲ ಮಾಡುವುದರಿಂದ ಜೀವನದ ಉದ್ದಕ್ಕೂ ಸಹ ಅನಿರೀಕ್ಷಿತ ಅದೃಷ್ಟ ಲಾಭ ಮತ್ತು ಫಲ ಸಿಗುವುದು.

ಮೇಷ ರಾಶಿಯವರಿಗೆ ವಿವಾಹ ಹಾಗೂ ಸಂತಾನ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅವರು ನಿತ್ಯ ಆದಿತ್ಯ ಹೃದಯ ಸ್ತೋತ್ರ ಪಠಣ ಹಾಗೂ ಗೋಧಿಯನ್ನು ದಾನ ಮಾಡುತ್ತಾ ಬರುವುದು ಒಳಿತು.

 

 

ಸಹೋದರರ ವಿಚಾರ ಬಂದಾಗ  ಮೇಷ ರಾಶಿಯವರು ಸಾಮಾನ್ಯವಾಗಿ ಅಣ್ಣ ತಮ್ಮಂದಿರೊಂದಿಗೆ ಮಾತಿನ ಚಕಮಕಿ ನಡೆಸುತ್ತಲೇ ಇರುತ್ತಾರೆ.

ರಾಶಿಯ ಅಧಿಪತಿ ಹಾಗೂ ಅಷ್ಟಮ ಅಧಿಪತಿ ಕುಜನೇ ಆಗಿರುವುದರಿಂದ ಮೇಷ ರಾಶಿಯವರು ಸದಾ ಕುದಿಯುವ ಎಣ್ಣೆ ,ಬೆಂಕಿ ಇತ್ಯಾದಿಗಳಿಂದ ಆದಷ್ಟು ದೂರವಿರಬೇಕು. ಸುಬ್ರಹ್ಮಣ್ಯೇಶ್ವರ ಆರಾಧನೆಯನ್ನು ಹೆಚ್ಚು ಮಾಡುವುದರಿಂದ ಅಪಮೃತ್ಯು ಪರಿಹಾರವಾಗಿ ದೀರ್ಘ ಆಯುಷ್ಯವನ್ನು ಸಹ ಹೊಂದಿ ಸುಖ ಜೀವನ ನಡೆಸಬಹುದಾಗಿದೆ .

 

ಅದೃಷ್ಟ ಸಂಖ್ಯೆ.

ಮೇಷ ರಾಶಿಯವರಿಗೆ ಒಂಬತ್ತು ಸಂಖ್ಯೆ ಶುಭ ಸೂಚಕ. ಯಾಕೆಂದರೆ ಒಂಬತ್ತು ಎಂದರೆ ಕುಜ ಗ್ರಹನ ಸಂಖ್ಯೆ ಆಧಾರಿತ 9,18,27,36,45, ಮತ್ತು 54 ಶ್ರೇಣಿಯ ಸಂಖ್ಯೆಗಳು  ಶುಭ ತರುತ್ತವೆ.

 

ಅದೃಷ್ಟದ ಬಣ್ಣ.

ಮೇಷ ರಾಶಿಯವರಿಗೆ ಕೆಂಪು ಅಥವಾ ಕೇಸರಿ ಬಣ್ಣ ಶುಭ ಸೂಚಕ. ಈ ಬಣ್ಣಗಳ ಬಟ್ಟೆ  ಧರಿಸುವುದರಿಂದ ಅವರು ಮಾನಸಿಕವಾಗಿ ಸಮಾಧಾನವಾಗಿ ಇರುತ್ತಾರೆ. ನಿಮ್ಮ ಕೈಯಲ್ಲಿ  ಕೆಂಪು ಬಣ್ಣದ ಕರವಸ್ತ್ರ ಇಟ್ಟುಕೊಳ್ಳುವುದು ಒಳ್ಳೆಯದು.

 

ಅದೃಷ್ಟ ರತ್ನ.

ಮೇಷ ರಾಶಿಯವರಿಗೆ ಗೋಮೇಧಿಕ ರತ್ನ ಶುಭದಾಯಕವಾಗಿರುತ್ತದೆ. ಇವರು ಇದನ್ನು ಬಳಸಿಕೊಳ್ಳುವುದರಿಂದ ಮಾನಸಿಕ ಸಂತುಲನ ಕಾಯ್ದುಕೊಳ್ಳಬಹುದು. ಮಂಗಳವಾರ ಉಪವಾಸ ವ್ರತ ಮಾಡಬೇಕು.

 

 ಅದೃಷ್ಟದ ದಿನ.

ಮೇಷ ರಾಶಿಯವರಿಗೆ ಮಂಗಳವಾರ ಶುಭ ದಿನವಾಗಿದ್ದು ಶುಕ್ರವಾರ ಆಶುಭವಾಗಿದೆ. ಗುರುವಾರ ಹಾಗೂ ರವಿವಾರದ ದಿನಗಳು ಸಹ ಶುಭವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top