ಭವಿಷ್ಯ

ನವೆಂಬರ್ 8 : ನಿತ್ಯಭವಿಷ್ಯ ಮತ್ತೆ ಪಂಚಾಂಗ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನವೆಂಬರ್ 8 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೮ ನವೆಂಬರ್ ೨೦೧೭
ಸೂರ್ಯೋದಯ : ೦೬:೧೯
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ
ನಕ್ಷತ್ರ : ಆರಿದ್ರ
ಯೋಗ : ಸಿದ್ದಿ
ಪ್ರಥಮ ಕರಣ : ಕೌಲವ
ಸೂರ್ಯ ರಾಶಿ : ತುಲಾ
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ದುರ್ಮುಹೂರ್ತ : ೧೧:೪೦ – ೧೨:೨೬

ಮೇಷ (Mesha)

ನೆರೆ ಹೊರೆಯವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮುನ್ನುಗ್ಗುವಿರಿ. ಭಗವಂತನ ಆಶೀರ್ವಾದ ದೊರೆಯುವುದು.

 

 

ವೃಷಭ (Vrushabha)

ಯಾರದೋ ಮಾತುಗಳಿಂದ ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ ಸಂಭ್ರಮದಿಂದ ಇರಿ. ಇದಕ್ಕೆ ಪೂರಕವಾಗಿ ಗುರು ಮಹಾರಾಜರು ಪಂಚಮಸ್ಥಾನದಲ್ಲಿ ಸಂಚರಿಸುವ ಮೂಲಕ ಕಾರ‍್ಯಸಿದ್ಧಿಯನ್ನು ಮಾಡಿ ಕೊಡುವರು.

 

ಮಿಥುನ (Mithuna)

ಹಿರಿಯರ ಆಸ್ತಿಯ ವಿವಾದ ಒಂದು ಹಂತ ತಲುಪಲಿವೆ. ಎಲ್ಲಾ ಆಸ್ತಿಯು ನನಗೆ ದಕ್ಕಬೇಕೆಂಬ ಸಂಕುಚಿತ ಮನೋಭಾವನೆ ಬಿಡಿ. ರಾಜಿ ಪಂಚಾಯಿತಿಯಿಂದ ನಿಮಗೆ ಬರಬೇಕಾದ ಆಸ್ತಿಯ ಭಾಗ ಕೈ ಸೇರುವುದು.

 

ಕರ್ಕ (Karka)

ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವಿರಿ. ಧನಾತ್ಮಕ ಆಲೋಚನೆಗಳಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ಬಾಕಿ ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈ ಸೇರುವುದು.

 

ಸಿಂಹ (Simha)

ವಯಸ್ಸಿನ ಹಿರಿತನ ಮತ್ತು ಬುದ್ಧಿ ಕೌಶಲ್ಯದಿಂದ ಸಾಮಾಜಿಕ ಜೀವನದಲ್ಲಿ ಹೆಸರು ಪಡೆಯುವಿರಿ. ಧಾರ್ಮಿಕ ಕೆಲಸ ಕಾರ್ಯಗಳಿಂದ ಮಾನಸಿಕ ನೆಮ್ಮದಿ ದೊರೆಯುವುದು. ಆರೋಗ್ಯದ ಕಡೆ ಗಮನ ಕೊಡಿರಿ.

 

ಕನ್ಯಾರಾಶಿ (Kanya)

ನಿಗೂಢ ವಿದ್ಯೆಗಳಲ್ಲಿ ಸಂಶೋಧನಾ ದೃಷ್ಟಿ ಹೊಂದಿರುವ ನಿಮಗೆ ಇಂದು ಉತ್ತಮ ಅವಕಾಶ ಇಲ್ಲವೆ ಉತ್ತಮ ಮಾಹಿತಿ ದೊರೆಯುವುದು. ವಿದ್ವತ್‌ ಜನರ ಭೇಟಿ ಆಗುವುದು. ದೂರ ಪ್ರಯಾಣ ಕೈಗೊಳ್ಳುವಿರಿ.

 

ತುಲಾ (Tula)

ಸ್ವಚ್ಛತೆ ಇದ್ದಲ್ಲಿ ದೇವರು ಇರುತ್ತಾನೆ. ಹಾಗಾಗಿ ಮನಸ್ಸಿನ ಕೊಳೆಯನ್ನು ಹೊರಹಾಕಿ ಉತ್ತಮ ವಿಚಾರಗಳನ್ನು ಚಿಂತಿಸಿ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯಿರಿ. ಹೊಸ ಕೆಲಸ ಮಾಡಲು ಉತ್ಸಾಹ-ಹುಮ್ಮಸ್ಸು ಬರುವುದು.

 

ವೃಶ್ಚಿಕ (Vrushchika)

ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಅನಾವಶ್ಯಕ ಹಣ ಖರ್ಚು ಮಾಡಬೇಕಾಗುವುದು. ರಸ್ತೆಯ ನಿಯಮಗಳನ್ನು ಪಾಲಿಸಿದಲ್ಲಿ ಪೊಲೀಸ್‌ ಇಲಾಖೆಗೆ ಕಟ್ಟುವ ದಂಡದ ಪ್ರಮಾಣ ಕಡಿಮೆ ಆಗುವುದು.

 

ಧನು ರಾಶಿ (Dhanu)

ಪ್ರಯಾಣದಿಂದ ದೇಹಾಲಸ್ಯ ಉಂಟಾಗುವ ಸಾಧ್ಯತೆ. ದೇಹಕ್ಕೆ ಮತ್ತು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಮಧ್ಯಾಹ್ನದ ನಂತರ ಚುರುಕಾಗುವಿರಿ. ಮಿತ್ರರ ಸಹಕಾರವೂ ಕೂಡಾ ದೊರೆಯಲಿದ್ದು ಆರ್ಥಿಕ ಸಹಾಯ ದೊರೆಯುವುದು.

 

ಮಕರ (Makara)

ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ. ನೀವು ಇಂದು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳು ಬೇಗನೆ ಮುಗಿಯಲಿದೆ. ಇದರಿಂದ ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವ ಭಾವನೆ ತಾಳುವರು.

 

ಕುಂಭರಾಶಿ (Kumbha)

ಸಂಗೀತ ಕ್ಷೇತ್ರ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಗಮನಿಸುತ್ತಿರುವರು. ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ.

 

ಮೀನರಾಶಿ (Meena)

ನೀವು ಹಲವು ಕಾರ್ಯ ಕ್ಷೇತ್ರಗಳಲ್ಲಿ ಭಾಗವಹಿಸುವುದರಿಂದ ಹೊಸ ಹುರುಪನ್ನು ಹೊಂದುವಿರಿ. ನಿಮ್ಮ ಮನಸ್ಸಿನ ಅಶಾಂತಿಗೆ ಮನೆ ಕಾರಣವಲ್ಲ. ಗುರುವಿನ ಬಲವಿದ್ದು ಆದಷ್ಟು ಧನಾತ್ಮಕವಾಗಿ ಚಿಂತಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top