ದೇವರು

ಶಿವನನ್ನು ಲಿಂಗ ರೂಪಿಯಾಗಿ ಪೂಜೆ ಮಾಡೋದು ಯಾಕೆ ಗೊತ್ತಾ ?

ಶಿವನನ್ನು ಲಿಂಗ ರೂಪಿಯಾಗಿ ಪೂಜಿಸುವುದು ಯಾಕೆ ? 

 

ಅತಿ ಭಕ್ತಿಯಿಂದ ಪೂಜಿಸುವ ದೇವರುಗಳಲ್ಲಿ ಪರಮೇಶ್ವರನು ಸಹ ಒಬ್ಬ. ಶಿವ ದೇವನಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಶಿವನನ್ನು ಸೋಮವಾರದ ದಿನ ವಿಶೇಷವಾಗಿ ಆರಾಧನೆ ಮಾಡುತ್ತಾರೆ. ಆ ದಿನ ಉಪವಾಸ ಮಾಡುವುದರ ಮೂಲಕ ಶಿವನನ್ನು ಪೂಜೆ ಮಾಡುತ್ತಾರೆ.

 

 

ನಿಮಗೆ ತಿಳಿದಿರುವ ಹಾಗೆ ಈ ಭೂಮಿಯ ಮೇಲೆ ಅನೇಕ ಹೆಸರಿನಲ್ಲಿ ವಿವಿಧ ರೂಪಗಳಲ್ಲಿ ದೇವರನ್ನು ಆರಾಧನೆ ಮಾಡುತ್ತಾರೆ. ದೇವಸ್ಥಾನದಲ್ಲಿ ವಿಗ್ರಹಗಳಿಗೆ  ಕೈಮುಗಿಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಆದರೆ ನಾವು ಇಲ್ಲಿ ಶಿವನ ಕುರಿತಾಗಿ ಕೆಲವು ಬಗೆಯ ಹಲವು ವಿಚಾರಗಳನ್ನು ನಿಮಗೆ ತಿಳಿಸುತ್ತೇವೆ..

ಶಿವನನ್ನು ಹೆಚ್ಚಾಗಿ ಲಿಂಗದ ಮೂಲಕ ಪೂಜೆ ಮಾಡುತ್ತಾರೆ. ನೀವು ದೇವಸ್ಥಾನಗಳಲ್ಲಿ ಕೂಡ ನೋಡಿರಬಹುದು. ಶಿವನನ್ನು ಲಿಂಗದ ಮೂಲಕ ಪೂಜೆ ಮಾಡಲಾಗುತ್ತದೆ .

 

ಈ ಶಿವಲಿಂಗದ ಮಹತ್ವ ಏನೆಂದು ನಿಮಗೆ ಗೊತ್ತಾ  ? ಬನ್ನಿ  ಶಿವಲಿಂಗದ ಮಹತ್ವವೇನು ಎಂಬುದನ್ನು ತಿಳಿಯೋಣ

 

 

ನಿರಾಕಾರ ರೂಪ ಶಿವನ ಲಿಂಗದ ಕೆಳ  ಭಾಗವನ್ನು ಬ್ರಹ್ಮನ ರೂಪದಲ್ಲಿ ಆರಾಧನೆ ಮಾಡುತ್ತಾರೆ, ಮಧ್ಯ ಭಾಗವನ್ನು ವಿಷ್ಣುವಿನ ರೂಪದಲ್ಲಿ ಮತ್ತು

ಮೇಲಿನ ಭಾಗವನ್ನು ಪರಮೇಶ್ವರನ ರೂಪದಲ್ಲಿ ಆರಾಧನೆ ಮಾಡುತ್ತಾರೆ.

ಅಂದರೆ ತ್ರಿಮೂರ್ತಿಗಳ ಸ್ವರೂಪವೇ ಶಿವಲಿಂಗ.

 

 

ಶಿವಲಿಂಗದಲ್ಲಿ ಹೇಳಲಾಗದ ಹಲವು ನಿಗೂಢ ಅಲೌಕಿಕ ಶಕ್ತಿಗಳು ಇವೆ. ಶಿವ ಮತ್ತು ಶಕ್ತಿಯರ ಮಿಲನದಿಂದಾಗಿ  ಶಿವಲಿಂಗದಲ್ಲಿ ಅದ್ಭುತ ಶಕ್ತಿಗಳು ಅಡಕವಾಗಿದೆ. ಇದು ಮನಸ್ಸಿನ ಗಮನ ಕೇಂದ್ರೀಕರಿಸುವ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ .

ಲಿಂಗವು ಶಿವನ ಸಂಕೇತವಾಗಿದೆ. ಇದು ದೇವರ ನಿರಾಕಾರ ಸ್ವರೂಪವನ್ನು ಸಾಂಕೇತಿಸುತ್ತದೆ. ಪ್ರಕೃತಿಯ ನಿರಾಕಾರ ತತ್ವವನ್ನು ಸೂಚಿಸುತ್ತದೆ ಮತ್ತು ಮೌನದ ಮೂಲಕವೇ ಮಾತನಾಡುತ್ತದೆ . ಶಿವನನ್ನು ಪೂರ್ಣ ಸ್ವರೂಪಿ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಶಿವನನ್ನು ಲಿಂಗರೂಪದಲ್ಲಿ ಪೂಜಿಸಲಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top