ದೇವರು

ಗಿನ್ನೆಸ್ ದಾಖಲೆಗೆ ಶಿವಕುಮಾರ ಶ್ರೀಗಳ ಹೆಸರು..?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗಿನ್ನೆಸ್ ದಾಖಲೆಗೆ ಶಿವಕುಮಾರ ಶ್ರೀಗಳ ಹೆಸರು..?

 

 

ಕರ್ನಾಟಕ ರತ್ನ ಡಾ|| ಶ್ರೀ.ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು.ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ . ನಡೆದಾಡುವ ದೇವರು ಎಂದೇ ಪ್ರಸಿದ್ಧಿಯಾಗಿರುವ ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರು ಗಿನ್ನಿಸ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಗೊಳ್ಳುತ್ತಿದೆ. ಯಾವ ವಿಷ್ಯದಲ್ಲಿ ಶ್ರೀಗಳ ಹೆಸರು ಗಿನ್ನೆಸ್ ಬುಕ್ ಸೇರುತ್ತಿದೆ ಅಂತೀರಾ ಮುಂದೆ ಓದಿ.

 

 

ಶ್ರೀಗಳ ಆಧ್ಯಾತ್ಮಿಕ ಮತ್ತು ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶಗಳ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಸಂಗ್ರಹ ಮಾಡಿದ್ದು ಆ ಕುತೂಹಲಕಾರಿ ಮಾಹಿತಿಗಳನ್ನು “ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್”ಗೆ ನೀಡುವ ತಯಾರಿಯಲ್ಲಿದ್ದಾರೆ. ದಾಖಲೆಗೆ ಅರ್ಹವಾದ ಅಂಕಿ ಅಂಶಗಳನ್ನೇ ಚಂದ್ರಶೇಖರಯ್ಯ ಅವರು ಸಂಗ್ರಹಿಸಿದ್ದಾರೆ.,ನಮ್ಮ ಸರ್ಕಾರವೇ ನಮ್ಮ ಶ್ರೀಗಳಿಗೆ ಭಾರತ ರತ್ನ ಕೊಡಲು ಹಿಂದೇಟು ಹಾಕುತ್ತಿರುವಾಗ ಬೇರೆದೇಶದ ಮಂದಿ ಶ್ರೀಗಳಿಗೆ ಗೌರವ ನೀಡಿದರೆ ಅದು ನಿಜಕ್ಕೂ ಹೆಮ್ಮೆಯ ವಿಚಾರ. ಮುಂದೆ ಓದಿ

 

 

1935ರಲ್ಲಿ ದೀಕ್ಷೆ ಪಡೆದ ಶ್ರೀಗಳು ದೀಕ್ಷೆ ಪಡೆದು 88 ವರ್ಷಗಳಾಗಿವೆ ಪ್ರತಿದಿನ ತಪ್ಪದೆ ಮೂರು ಬಾರಿ ತಪ್ಪದೇ ಶಿವಪೂಜೆ ಮಾಡುವ ಶ್ರೀಗಳು ಇಲ್ಲಿಯವರೆಗೆ 96,500ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ. ಅಲ್ಲದೆ ಪ್ರತಿದಿನ ಆರು ಗಂಟೆ ಧ್ಯಾನ ಮತ್ತು 14 ಗಂಟೆ ಸಮಾಜ ಸೇವಾ ಕಾರ್ಯ ಮಾಡುವ ಶ್ರೀಗಳು ಇಲ್ಲಿಯವರೆಗೆ ಕ್ರಮವಾಗಿ 2 ಲಕ್ಷ ಗಂಟೆಗಳ ಕಾಲ ಧ್ಯಾನ ಮತ್ತು 4,50,000 ಗಂಟೆಗಳಷ್ಟು ಸಮಾಜಸೇವೆ ಮಾಡಿದ್ದಾರೆ.

 

 

ಶ್ರೀಗಳ 88ವರ್ಷದ ಅವಧಿಯ ಮಠದಲ್ಲಿ ಒಟ್ಟು 6,06,312 ಮಂದಿ ವಿದ್ಯಾರ್ಥಿಗಳು ವಿದ್ಯೆ ಕಲಿತಿದ್ದಾರೆ. 88 ವರ್ಷಗಳಲ್ಲಿ ಇಲ್ಲಿಯ ವರೆಗೆ ಮಠಕ್ಕೆ 6,68,29,200 ಮಂದಿ ಭಕ್ತಾದಿಗಳು ಭೇಟಿ ನೀಡಿದ್ದು ಶ್ರೀಗಳ ಪಾದವನ್ನು ಮುಟಿದವರ ಸಂಖ್ಯೆ 23,12,64,000 ರಷ್ಟಿದೆ ಎಂದು ಎಲ್ಲಾ ವಿಚಾರಗಳನ್ನು ಅಂಕಿ ಅಂಶಗಳ ಸಮೇತ ಧಾಖಲೆಗಳನ್ನು ಸಿದ್ದ ಪಡಿಸಿಕೊಂಡಿರುವ ಚಂದ್ರಶೇಖರಯ್ಯ ಆ ಮಾಹಿತಿಗಳನ್ನು “ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್”ಗೆ ನೀಡುವ ತಯಾರಿಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top