ತಿಂಡಿ ತೀರ್ಥ

ಅತ್ಯಂತ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ದಾಲ್ ಕಿಚಡಿ ಮಾಡುವುದು ಹೇಗೆ ?

ಅತ್ಯಂತ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ದಾಲ್ ಕಿಚಡಿ ಮಾಡುವುದು ಹೇಗೆ ?

Image result for dal khichdi recipe

ದಾಲ್ ಕಿಚಡಿ ಮಾಡಲು ಬೇಕಾಗುವ ಸಾಮಗ್ರಿಗಳು:

ಬಾಸುಮತಿ ಅಕ್ಕಿ – 1/2 ಕಪ್ ಒಡೆದ ಹಸಿರು ಹೆಸರುಕಾಳು – 1/2 ಕಪ್ ಇಂಗು – 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ – 1 ಟೀಚಮಚ ತುಪ್ಪ – 1 ಟೀಚಮಚ ಜೀರಿಗೆ – 1 ಟೀಚಮಚ ಜೀರಿಗೆ ಪುಡಿ – 1 ಟೀಚಮಚ ನೀರು – 5 ಕಪ್ + ತೊಳೆಯಲು

 Related image

ದಾಲ್ ಕಿಚಡಿ  ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಹಾಕಿ.
  2. ನಂತರ ಒಡೆದ ಹೆಸರುಕಾಳನ್ನು ಸೇರಿಸಿ.
  3. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ.
  4. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ.
  5. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ಜೀರಿಗೆ ಹುರಿದು ಹೊಂಬಣ್ಣಕ್ಕೆ ಬರುವವರೆಗೆ ಕೈಯಾಡಿಸಿ.
  6. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ.
  7. ಚೆನ್ನಾಗಿ ಕಲುಕಿ.
  8. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ.
  9. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
  10. ಉಪ್ಪನ್ನು ಸೇರಿಸಿ, ಬೇಯಲು ಎರಡು ನಿಮಿಷ ಬಿಡಿ.
  11. ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಸುಮಾರು 4-5 ಸೀಟಿ ಕೂಗಬೇಕು.
  12. ಇದು ತಣಿದ ಮೇಲೆ, ಕೆಳಗಿಳಿಸಿ ಚೆನ್ನಾಗಿ ಮಿಶ್ರಗೊಳಿಸಿ.
  13. ನಂತರ ತಟ್ಟೆಯಲ್ಲಿ ಹಾಕಿ ಸವಿಯಲು ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top