ಭವಿಷ್ಯ

ಶನಿವಾರ ನಿಮ್ಮ ಬಳಿ ಈ ವಸ್ತುಗಳನ್ನು ಇಟ್ಟುಕೊಂಡರೆ ಜೀವನದಲ್ಲಿ ಒಳ್ಳೆಯ ಲಾಭಗಳು ಪಡ್ಕೊಬಹುದು

ಶನಿವಾರ ನಿಮ್ಮ ಜೇಬಿನಲ್ಲಿ ಈ  ವಸ್ತುಗಳನ್ನು ಇಟ್ಟುಕೊಂಡರೆ ಏನೆಲ್ಲಾ ಲಾಭಗಳು ಆಗುತ್ತವೆ ಎಂದು ತಿಳಿದುಕೊಳ್ಳಿ….

 

 

ಶನೈಶ್ಚರ ದೇವರನ್ನು ಪ್ರಸನ್ನಗೊಳಿಸುವ ವಾರವೇ ಶನಿವಾರ. ಶನೈಶ್ಚರ ದೇವನ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲೇ ಶನಿವಾರದ ದಿನ ನಿಂತಿರುತ್ತದೆ.

 

ಶನಿ ದೋಷ ಉಳ್ಳವರು ಶನಿ ದೇವರಿಗೆ ಪೂಜೆ ಮಾಡುತ್ತಾರೆ. ಪೂಜೆ ಮಾಡಲು ಒಂದು ವೇಳೆ ಸಾಧ್ಯವಿಲ್ಲ, ನಮ್ಮ ಮನೆಯ ಹತ್ತಿರದ ಬಳಿ ದೇವಸ್ಥಾನವಿಲ್ಲ ಎಂದಾದರೆ ಈ ಸುಲಭ ಉಪಾಯಗಳನ್ನು ಪಾಲಿಸಿ ನೋಡಿ

 

ಶನೈಶ್ಚರ ದೇವರಿಗೆ ಪ್ರಿಯವಾದ ಒಂದು ವಸ್ತುವನ್ನು ನಿಮ್ಮ ಪರ್ಸ್ ಅಥವಾ ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡರೆ ಸಾಕು ಸಂಜೆಯೊಳಗೆ ಫಲಿತಾಂಶ ತಿಳಿಯುತ್ತದೆ.

ಶನೈಶ್ಚರ ದೇವರು ನೀಲಿ ಬಣ್ಣದ ಹೂವುಗಳೆ೦ದರೆ ಪ್ರಿಯ . ಹಾಗಾಗಿ ಭಕ್ತರು ನೀಲಿ ಬಣ್ಣದ ಹೂವನ್ನು ಶನೈಶ್ಚರ ದೇವರಿಗೆ ಅರ್ಪಣೆ ಮಾಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಜೇಬಿನಲ್ಲಿ ಒಂದೆರಡು ನೀಲಿ ಬಣ್ಣದ ಹೂವುಗಳನ್ನು ಇಟ್ಟುಕೊಳ್ಳಬೇಕು .

 

 

ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರದ ದಿನ ಎಳ್ಳನ್ನು ದಾನ ಮಾಡುತ್ತಾರೆ. ದಾನ ಮಾಡುವ ಶಕ್ತಿ ಇಲ್ಲದವರು ಕರಿ ಎಳ್ಳನ್ನು ಜೇಬು ಅಥವಾ ಪರ್ಸ್ ನಲ್ಲಿ ಸ್ವಲ್ಪ ಇಟ್ಟುಕೊಳ್ಳಿ .

ಕಪ್ಪು ಉದ್ದಿನ ಬೇಳೆಯನ್ನು  ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ದೈಹಿಕ ಖಾಯಿಲೆಗಳಿಂದ ಮುಕ್ತಿ ಸಿಗುತ್ತದೆ .

 

ಶನೈಶ್ಚರ ದೇವನ ಪ್ರಭಾವ ಕಡಿಮೆ ಮಾಡಿಕೊಳ್ಳಲು ಮತ್ತು  ಶನೈಶ್ಚರ ದೇವನ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ . ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

 

 

ಶನಿವಾರದ ದಿನ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇದು ಸಹ ಸಾಧ್ಯವಾಗದಿದ್ದಲ್ಲಿ ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳಿ. ಅದು ಅಸಾಧ್ಯವೆಂದಾದರೆ ಕಾಡಿಗೆಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ಸಾಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top