ಭವಿಷ್ಯ

2017 ನವೆಂಬರ್ 9 ನೇ ತಾರೀಖು ಗುರುವಾರ  ಪುಷ್ಯ ನಕ್ಷತ್ರದ  ಮಹಾ ಸ೦ಯೋಗದ ಈ ಯೋಗ ವರ್ಷಕ್ಕೆ ಮೂರು ದಿನ ಮಾತ್ರ ಬರುತ್ತದೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

2017 ನವೆಂಬರ್ 9 ನೇ ತಾರೀಖು ಗುರುವಾರ  ಪುಷ್ಯ ನಕ್ಷತ್ರದ  ಮಹಾ ಸ೦ಯೋಗದ ದಿನ.

 

ನವೆಂಬರ್ ಒಂಬತ್ತನೇ ತಾರೀಖು ಗುರುವಾರ 2017 ನೇ  ತಾರೀಖು  ಈ ದಿನ ಅತ್ಯಂತ ಶುಭದಿನ ಎಂದು ಪರಿಗಣಿಸಲಾಗಿದೆ . ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಬತ್ತನೇ ತಾರೀಖು  ನವೆಂಬರ್ ಮಧ್ಯಾಹ್ನ 1 ಗಂಟೆ 39 ನಿಮಿಷಕ್ಕೆ ಪುಷ್ಯಾ ನಕ್ಷತ್ರದ ಸಂಯೋಗವಾಗಲಿದ್ದು. ಇದು ನವೆಂಬರ್  ಹತ್ತನೇ ತಾರೀಖು 12.25  ರವರೆಗೆ ಇರುತ್ತದೆ.

 

 

ಈ ರೀತಿಯ ಒಂದು ಯೋಗ ವರ್ಷಕ್ಕೆ ಮೂರು ದಿನ ಮಾತ್ರ ಬರುತ್ತದೆ. ಈ ದಿನ ಗುರುವಾರ ಆಗಿರುವುದರಿಂದ ಈ ದಿನ ಬಂದಿರುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ದೇವಗುರು ಬೃಹಸ್ಪತಿ ಮತ್ತು  ಪುಷ್ಯಾ ನಕ್ಷತ್ರ ಸ೦ಯೋಗ  ಅತ್ಯಂತ ಶುಭ.

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಗುರುವಾರ ಪುಷ್ಯಾ ನಕ್ಷತ್ರದ ಯೋಗವಿದ್ದು. ಈ ವರ್ಷದ ಅತ್ಯಂತ ಶುಭಯೋಗದ  ದಿನವಾಗಿದೆ. ಈ ವರ್ಷ ಆರು ಬಾರಿ  ಗುರು ಪುಷ್ಯ ನಕ್ಷತ್ರ ಸಂಯೋಗವು ಬಂದಿದ್ದು. ಇದು  ಐದನೇ ಬಾರಿಯಾಗಿದೆ. ಅದೇ ಒಂಬತ್ತನೇ ತಾರೀಖು  ನವೆಂಬರ್ ಇವತ್ತೇ ಈ ದಿನ… ಕೆಲವು ಕೆಲಸಗಳನ್ನು ಮಾಡಿದರೆ ಅವು ಪೂರ್ಣವಾಗುತ್ತವೆ ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಈ ದಿನ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

 

 

ಈ ಮಂತ್ರವನ್ನು ಈ ದಿನ ಹೇಳಬೇಕು.

 

ಈ ಸಮಯ ಅತ್ಯಂತ ಮಹತ್ವಪೂರ್ಣವಾಗಿದ್ದು ಮತ್ತು ಅತ್ಯಂತ ಪ್ರಭಾವಶಾಲಿಯಾಗಿದ್ದು. ಈ ನಕ್ಷತ್ರದ ದಿನ ಪೂಜೆ, ಅರ್ಚನೆ, ಧೂಪ, ದೀಪಗಳಿಂದ ಭಗವಂತನಾದ ಶ್ರೀ  ಮಹಾವಿಷ್ಣು ,ಸರಸ್ವತಿ ದೇವಿ ಮತ್ತು ಲಕ್ಷ್ಮೀ ದೇವಿಯನ್ನು ಪೂಜೆ ಮಾಡುವುದರಿಂದ ಸಕಲ ರೀತಿಯಲ್ಲೂ ಶುಭವಾಗುತ್ತದೆ.
 

ನೀವು ಈ ದಿನ ಏನು ಮಾಡಬೇಕು ಎಂದು ತಿಳಿಯಿರಿ.

 

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಧೂಪ,ದೀಪ, ಆರತಿಯನ್ನು ಮಾತೆ ಮಹಾಲಕ್ಷ್ಮೀ  ದೇವಿಗೆ, ಸರಸ್ವತಿ ದೇವಿಗೆ ನಂತರ ಭಗವಂತನಾದ ವಿಷ್ಣು, ದೇವ ಗುರು ಬೃಹಸ್ಪತಿಯ ಧ್ಯಾನ ಮಾಡಿ.

 

 “ಓಂ  ಬೃಹಸ್ಪತಯೇ ನಮಃ” ಎಂಬ ಈ ಮಂತ್ರವನ್ನು ಪೂಜೆ ಮಾಡಿದ ನಂತರ ಮೂರು ಬಾರಿ ಹೇಳಬೇಕು .

ನಿಮ್ಮ ಆಸೆಗಳು ಪೂರ್ಣವಾಗುವುದಕ್ಕೆ…

“ ಓಂ ನಮೋ ಭಗವತೇ ವಾಸುದೇವಾಯ ನಮಃ”

 

 

ಎಂಬ ಈ ಮಂತ್ರವನ್ನು ಮೂರು ಬಾರಿ ಹೇಳಬೇಕು. ಇದನ್ನು ಸಂಜೆ ಪುಷ್ಯಾ ನಕ್ಷತ್ರ ಬಂದ ನಂತರ ಮನೆಯಲ್ಲಿ ಪೂಜೆ ಮಾಡಿ  ಹೇಳಬಹುದು ಅಥವಾ ಹತ್ತನೇ ತಾರೀಖಿನಂದು  ಬೆಳಗ್ಗೆ ಈ ಮಂತ್ರವನ್ನು ಜಪಿಸಬಹುದು .

ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಭಗವಂತನಾದ ಶಿವನ ಮಂದಿರದಲ್ಲಿ ಹೋಗಿ ಶಿವನಿಗೆ ಕಡಲೆ ಹಿಟ್ಟಿನ ಲಡ್ಡುವನ್ನು ಅರ್ಪಿಸಿ ನಂತರ  ಪ್ರಸಾದ ರೂಪದಲ್ಲಿ ಲಡ್ಡುವನ್ನು ವಿತರಿಸಿ.ಇದರಿಂದ ದೇವಗುರು ಬೃಹಸ್ಪತಿ ಮತ್ತು ಮತ್ತು ಶಿವನೂ ಕೂಡ ಸಂತುಷ್ಟನಾಗಿ ಪ್ರಸನ್ನ ನಾಗುವನು.

ಈ ದಿನ ವ್ರತವನ್ನು ಆಚರಿಸುವವರು ವ್ರತವನ್ನು ಆಚರಿಸಿ ಮತ್ತು ಹಳದಿ ವಸ್ತ್ರವನ್ನು ಧರಿಸಿ. ನಂತರ ಸಾಧ್ಯವಾದರೆ ಉಪ್ಪಿಲ್ಲದ ಇರುವ ಆಹಾರವನ್ನು ಸೇವಿಸಿ ಮತ್ತು ಹಳದಿ ಬಣ್ಣದ ಆಹಾರಗಳನ್ನು ಸೇವಿಸಿದರೆ ಉತ್ತಮ.

 

 

ನಿಮ್ಮ ಮನೆಗೆ  ಒಂದು ಹೊಸ ಹಳದಿ ವಸ್ತ್ರವನ್ನು ಖರೀದಿಸಿ ಅದನ್ನು ತಂದು ಪೂರ್ವ ಅಥವಾ ಉತ್ತರ ದಿಕ್ಕಿಗೆ ಹಾಸಿ. ಹಳದಿ ವಸ್ತ್ರದ ಮೇಲೆ ಭಗವಂತನಾದ ವಿಷ್ಣುವಿನ ಫೋಟೊ ಅಥವಾ ಮೂರ್ತಿಯನ್ನು ಕೂರಿಸಿ ನಂತರ ಬೃಹಸ್ಪತಿ ಗುರುವಿನ ಪೂಜೆ ಮಾಡಿ. ಪೂಜೆಗೆ ಕೇಸರಿ ಅಥವಾ ಚಂದನ, ಹಳದಿ ಹಕ್ಕಿ, ಹಳದಿ ಹೂವುಗಳು, ಹಳದಿ ಹಣ್ಣುಗಳನ್ನೇ ಅರ್ಪಿಸಿ.

ಬೃಹಸ್ಪತಿಗೆ ಕೇಸರಿ ಅಥವಾ ಚಂದನದ ತಿಲಕವನ್ನು ಇಡಿ.

ಈ ರೀತಿ ಪೂಜೆ ಮಾಡುವುದರಿಂದ ಭಗವಂತನಾದ ವಿಷ್ಣು, ಸರಸ್ವತಿ ದೇವಿ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಗೆ ಪೂರ್ಣ ಆಶೀರ್ವಾದವೂ ಸಂಪೂರ್ಣವಾಗಿ ನಿಮ್ಮ ಮೇಲೆ ಇರುವುದು.

 

ಗುರುವಿನ ಮಂತ್ರ

 

   “ ಓಂ ಬ್ರಹ್ಮ ಬೃಹಸ್ಪತಯೇ ನಮಃ”  

ಈ ಮ೦ತ್ರವನ್ನು 108 ಬಾರಿ ಜಪಿಸಿರಿ ಗುರು-ಪುಷ್ಯ  ನಕ್ಷತ್ರದ ಸ೦ಯೋಗ ಇರುವ ದಿನವೇ ಜಪಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top