ದೇವರು

ಮದುವೆಯ ಸಮಯದಲ್ಲಿ ಎದುರಾಗುವ ಈ ಶಕುನಗಳು ಶುಭವೋ ? ಅಶುಭವೋ ? ಎಂದು ತಿಳಿಯೋಣ ಬನ್ನಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮದುವೆಯ ಸಮಯದಲ್ಲಿ ಎದುರಾಗುವ ಶಕುನಗಳು ಶುಭವೋ ? ಅಶುಭವೋ ? ಎಂದು ತಿಳಿಯೋಣ ಬನ್ನಿ ….

 

ಮದುವೆ ಎಂದರೆ ನೂರು ವರ್ಷದ ಬೆಳೆ ಎಂಬ ಗಾದೆ ಮಾತು ಚಾಲ್ತಿಯಲ್ಲಿದೆ. ಈಗೇನೋ ಪ್ಲಾಸ್ಟಿಕ್ ಕುರ್ಚಿಗಳು ,ಪೇಪರ್ ತಟ್ಟೆಗಳು, ಶಾಮಿಯಾನ, ಬಾಡಿಗೆ, ಮುತ್ತೈದೆಯರು, ಕಾಂಟ್ರ್ಯಾಕ್ಟ್ ಅಡುಗೆಗಳು ,ಮದುವೆ ಪ್ಯಾಕೇಜ್ ಹೆಸರಿನಲ್ಲಿ ಎಲ್ಲ ಬೇಗ ಬೇಗನೆ ಮುಗಿಸಬೇಕೆಂಬ ಆತುರದಲ್ಲಿ ಎಲ್ಲವೂ ಚಾಲ್ತಿಯಲ್ಲಿದೆ …..

ಇಷ್ಟಕ್ಕೂ ನಮ್ಮ ಸಂಪ್ರದಾಯದ ಮದುವೆ ಎಂದರೆ ಮೊದಲು ಚಪ್ಪರ ಹಾಕಬೇಕು, ಮಾವಿನ ಎಲೆಯ ತೋರಣ ಕಟ್ಟಬೇಕು, ಬಾಳೆ ಎಲೆಯಲ್ಲಿ ಊಟ ಬಡಿಸಬೇಕು….

 

 

ಮದುವೆ ಎಂದರೆ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಎರಡು ಮನಸ್ಸುಗಳ ಹಬ್ಬ . ಜೀವನ ಪೂರ್ತಿ ಬೆರೆತು ಮನಸ್ಸನ್ನು ಹಂಚಿಕೊಂಡು  ಬಾಳಲು ಹಾಕುವ ಮೊದಲ ಹೆಜ್ಜೆಯೇ ಮದುವೆ .

ಅದೆಲ್ಲ ಮದುವೆಯ ವಿಷಯವಾಯಿತು. ಇನ್ನೂ ಮದುವೆಯ ಸಂದರ್ಭದಲ್ಲಿ ಎದುರಾಗುವ ಕೆಲವು ಶಕುನಗಳ ಬಗ್ಗೆಯೂ ಹಲವಾರು ಮೂಢನಂಬಿಕೆಗಳಿವೆ .ಅವು ಯಾವುವೆಂದರೆ

ಮದುವೆಯ ದಿನ ಮಳೆ ಬಂದರೆ

 

 

ಮದುವೆಯ ದಿನ ಮಳೆ ಬಂದರೆ ಸಂತಾನೋತ್ಪತ್ತಿಗೆ ಹಾಗೂ ಸಂಪತ್ತಿಗೆ ಚಿಲುಮೆಯಾಗಿ ಮಳೆಯನ್ನು ಭಾವಿಸುತ್ತಾರೆ. ಇದು ತುಂಬಾ ಪವಿತ್ರವಾದುದು ಎಂದು ಸಹ ಭಾವಿಸುತ್ತಾರೆ .

ಮದುವೆಗೂ ಮುನ್ನ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಬಾರದು….

ಮದುವೆಗೂ ಮುನ್ನ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಿ ಕೊಳ್ಳಬಾರದು ಎಂಬುದು ಇನ್ನೊಂದು ಮೂಢನಂಬಿಕೆಯಾಗಿದೆ.  ಮದುವೆಗೂ ಮುನ್ನ  ಒಬ್ಬರನ್ನೊಬ್ಬರು ನೋಡಿಕೊಂಡರೆ ಅವರ ಮನಸ್ಸುಗಳು ಬದಲಾಗುತ್ತವೆ ಎಂಬುದು ನಂಬಿಕೆಯಾಗಿದೆ .ಏನೇ ಆಗಲಿ ಕಾಲ ಬದಲಾದರೂ ಈ ಸಂಪ್ರದಾಯಗಳು ಮಾತ್ರ ಇನ್ನೂ ಬದಲಾಗಿಲ್ಲ .

ಮದುವೆಯ ಸಮಯದಲ್ಲಿ ಹಾಲು ಹೊಡೆದು ಹೋದರೆ 

 

 

ಇನ್ನು ಮದುವೆಗೂ ಮುನ್ನ ಅಥವಾ ಮದುವೆಯ ಸಮಯದಲ್ಲಿ ಹಾಲು ಹೊಡೆದರೆ ಅದು ಅಶುಭ ಎಂದು ಭಾವಿಸಲಾಗುತ್ತದೆ. ಹಾಗಾಗಿ ಆ ದಿನಗಳಲ್ಲಿ ಹಾಲು ಒಡೆಯದಂತೆ ನೋಡಿಕೊಳ್ಳಬೇಕು ಎಂದು ಕೆಲವು ಕುಟುಂಬದವರು ಎಚ್ಚರ ವಹಿಸುತ್ತಾರೆ.

ಮದುವೆಯ ಸಮಯದಲ್ಲಿ ಬಳಸುವ ಅಕ್ಷತೆ ಕಾಳು

 

 

ಇನ್ನೂ  ಮದುವೆಯ ಸಂದರ್ಭದಲ್ಲಿ ವಧು ವರರ ಮೇಲೆ ಹಾಕುವ ಅಕ್ಷತೆ ಕಾಳು ಸಹ ಅವರಿಗೆ ಸಂತಾನೋತ್ಪತ್ತಿ ಮತ್ತು ಸಮೃದ್ಧಿಯ ಚಿಹ್ನೆಯಾಗಿ ಪರಿಣಮಿಸುತ್ತದೆ.

ವಧುವು ಮದುವೆಯ ದಿನ ಕಣ್ಣೀರು ಹಾಕಿದರೆ

 

 

ವಧುವು ಮದುವೆಯ ದಿನ ಕಣ್ಣೀರು ಹಾಕಿದರೆ ಅದೃಷ್ಟ ಎಂದು ಹೇಳುತ್ತಾರೆ. ಹುಡುಗಿ ಈಗ ಕಣ್ಣೀರಿಟ್ಟರೆ ಮದುವೆಯ ಬಳಿಕ ಯಾವಾಗಲೂ ಅಳುವುದಿಲ್ಲ ಎಂಬುದಕ್ಕೆ ಚಿಹ್ನೆಯಿದ್ದ೦ತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top