ದೇವರು

ಗಾಳಿಯಲ್ಲಿ ತೇಲುತ್ತಿರುವ ಈ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ದೇವಾಲಯವನ್ನು ಜೀವಮಾನದಲ್ಲಿ ಒಂದ್ಸರಿಯಾದ್ರು ಭೇಟಿ ಮಾಡಿ ಕಷ್ಟಗಳು ಕಳೆಯುತ್ತವೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗಾಳಿಯಲ್ಲಿ ತೇಲುತ್ತಿರುವ ಈ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ದೇವಾಲಯವನ್ನು ಜೀವಮಾನದಲ್ಲಿ ಒಂದ್ಸರಿಯಾದ್ರು ಭೇಟಿ ಮಾಡಿ ಕಷ್ಟಗಳು ಕಳೆಯುತ್ತವೆ

 

ಗಾಳಿಯಲ್ಲಿ ತೇಲುತ್ತಿರುವ ಶಿವಲಿಂಗ ತ್ರಿವೇಣಿ ಸಂಗಮವನ್ನು ಒಂದು ಮಾಡುತ್ತಾ ನಿರ್ಮಿತವಾಗಿರುವ ದೇವಾಲಯ , ಬಂಗಾರವನ್ನು ಉತ್ಪತ್ತಿ ಮಾಡಬಲ್ಲ ಶಕ್ತಿ ಶಾಲಿ ಜ್ಯೋತಿರ್ಲಿಂಗ , ಚಂದ್ರನಿಗೆ ಪರಮೇಶ್ವರನ ಅನುಗ್ರಹ ಪ್ರಾಪ್ತಿಯಾದ ಸ್ಥಳ , ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿರುವ ಆಲಯವೇ ಸೌ ರಾಷ್ಟ್ರದ ಸೋಮನಾಥ ದೇವಾಲಯ ಬನ್ನಿ ಈ ದೇವಾಲಯದ ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ .

 

ಶಿವನ ಪ್ರತಿರೂಪಗಳೆ ಆದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದ್ವಾದಶ ಜ್ಯೋತಿರ್ಲಿಂಗಗಳೆಂದು ಕರೆಯುತ್ತಾರೆ, ಇವುಗಳನ್ನು ದರ್ಶಿಸಿದಲ್ಲಿ ಏಳೇಳು ಜನ್ಮಗಳ ಪಾಪಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ .ನಮ್ಮ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಬಹಳ ಮುಖ್ಯವಾದದ್ದು ಹಾಗು ಮೊದಲನೆಯದು  ಸೌರಾಷ್ಟ್ರದ ಸೋಮನಾಥ ಜ್ಯೋತಿರ್ಲಿಂಗ , ಹೇಳಿ ಕೇಳಿ ಭಾರತ ದೇಶ ದೇವಾಲಯಗಳ ಆಗರ ಈ ದೇವಾಲಯವನ್ನು ಪ್ರಭಾತ ತೀರ್ಥ ಎಂದು ಸಹ ಕರೆಯುತ್ತಾರೆ.

 

ಈ ದೇವಾಲಯ ಇರುವುದು ಎಲ್ಲಿ ?

 

 

ಗುಜರಾತ್ ನ ಪ್ರಭಾತ ಪಟ್ಟಣದಲ್ಲಿ ಈ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೌ ರಾಷ್ಟ್ರದ ಸೋಮನಾಥ ದೇವಾಲಯವಿದೆ , ಈ ದೇವಾಲಯುವಿರುವುದು ತ್ರಿವೇಣಿ ನದಿಗಳಾದ ಕಪಿಲ , ಹಿರಾನಿ , ಸರಸ್ವತಿ ನದಿಗಳ ಸಂಗಮದಲ್ಲಿ ಇದು ದೇವಾಲಯದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇತಿಹಾಸ !

 

 

ಸುಮಾರು ೩೦೦ ಕ್ಕೂ ಹೆಚ್ಚು ಬಾರಿ ಮುಸಲ್ಮಾನರ ದಾಳಿಗೆ ಒಳಗಾದರು ಸಹ ಮರು ನಿರ್ಮಾಣಗೊಳ್ಳುತ್ತಾ ತನ್ನ ಕ್ಷೇತ್ರ ಮಹತ್ವವನ್ನು ಹಾಗೆ ಉಳಿಸಿಕೊಂಡು ಬಂದಿರುವುದು ವಿಶೇಷ .
ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಾಡುವುದು ಹಿಂದಿನಿಂದ ನಮ್ಮ ದೇಶದಲ್ಲಿ ಬಂದಿರುವ ವಾಡಿಕೆ ಹಾಗೆ ಈ ತೀರ್ಥ ಯಾತ್ರೆ ಮಾಡ ಬಯಸುವವರು ಮೊದಲಿಗೆ ಸೌರಾಷ್ಟ್ರದ ಸೋಮನಾಥ ದೇವಾಲಯದಿಂದಲೇ ಶುರು ಮಾಡುತ್ತಾರೆ.

 

ಪುರಾಣಗಳ ಪ್ರಕಾರ

 

ದಕ್ಷ ಪ್ರಜಾಪತಿಯ ಶಾಪದಿಂದ ಚಂದ್ರನು ಶಿವನನ್ನು ಒಲಿಸಿಕೊಳ್ಳಲು ಸರಸ್ವತಿ ನದಿಯ ದಂಡೆಯ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಿ ಘೋರ ತಪಸ್ಸು ಮಾಡಿದನಂತೆ ಇದರಿಂದ ಸಂತುಷ್ಟನಾಗಿ ಶಿವನು ಚಂದ್ರನ ಶಾಪವನ್ನು ವಿಮೋಚನೆಗೊಳಿಸಿದನಂತೆ ಅಷ್ಟೇ ಅಲ್ಲದೆ ಪುರಾಣಗಳ ಪ್ರಕಾರ ಈ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ , ಶಾಪ ವಿಮೋಚನೆಯಾಗುತ್ತದೆ ಎಂದು ಸ್ಥಳ ಪುರಾಣಗಳು ಹೇಳುತ್ತವೆ.

ದಕ್ಷ ಪ್ರಜಾಪತಿಯ 27 ಕುಮಾರಿಯರನ್ನು ಮದುವೆಯಾಗಿ ಕೇವಲ ರೋಹಿಯನ್ನು ಮಾತ್ರ ಪತ್ನಿ ಎಂದು ಸ್ವೀಕಾರ ಮಾಡಿದ್ದನಂತೆ ಇದರಿಂದ ನೊಂದ ದಕ್ಷನ ಉಳಿದ 26 ಪುತ್ರಿಯರು ದಕ್ಷ ಪ್ರಜಾಪತಿಯ ಬಳಿ ತಮ್ಮ ಗೋಳನ್ನು ಹೇಳಿಕೊಂಡಾಗ ಕೋಪಗೊಂಡ ದಕ್ಷನು ಚಂದ್ರನಿಗೆ ಶಾಪ ಕೊಟ್ಟನಂತೆ , ಈ ಶಾಪದಿಂದ ನೊಂದ ಚಂದ್ರ ಶಿವನ ಬಳಿ ಓಡಿ ಶಾಪ ವಿಮೋಚನೆ ಮಾಡಿಸಿಕೊಂಡನು , ಅಷ್ಟೇ ಅಲ್ಲದೆ ಶಿವನು ಎಲ್ಲ ಹೆಂಡತಿಯರನ್ನು ಸಮನಾಗಿ ನೋಡುವಂತೆ ಹೇಳಿದನು ಎನ್ನಲಾಗುತ್ತದೆ , ಆನಂತರ ಶಿವ ಜಡೆಯಲ್ಲಿ ಚಂದ್ರನು ನೆಲೆಸಿದ ಎಂದು ಹೇಳಲಾಗುತ್ತದೆ.

ಈ ಲಿಂಗವನ್ನು ಭೂಮಿಗೆ ಅಂಟಿ ಕೊಂಡಿರುವಂತೆ ಪ್ರತಿಷ್ಠಾಪನೆ ಮಾಡಲಾಗಿಲ್ಲ ಬದಲಾಗಿ ಗಾಳಿಯಲ್ಲಿ ತೇಲುತ್ತಿರುವಂತೆ ಪ್ರತಿಷ್ಠಾಪನೆ ಮಾಡಲಾಗಿದೆ , ಗುರುತ್ವಾಕರ್ಷಣ ಶಕ್ತಿ ಇಲ್ಲದೆ ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿರುವುದು ಎಲ್ಲರಿಗು ಆಶ್ಚರ್ಯ ಉಂಟು ಮಾಡುತ್ತದೆ , ಚಾಲುಕ್ಯರ ನಿರ್ಮಾಣ ಶೈಲಿಯಲ್ಲಿ ಈ ದೇವಾಲಯವಿದೆ .

 

ಆಲಯದ ವಾಸ್ತು

 

ಆಲಯದ ಶಿಖರದ ಎತ್ತರ 150 ಅಡಿ ಹಾಗು ಅದರ ಮೇಲಿರುವ ಕಲಶ ಸುಮಾರು 10 ಟನ್ , ಇಲ್ಲಿರುವ ಧ್ವಜವನ್ನು ದಿನಕ್ಕೆ ಮೂರು ಬಾರಿ ಬದಲಾಯಿಸಲಾಗುತ್ತದೆ ,ಇಲ್ಲಿಗೆ ಬಂದರೆ ಜನ್ಮದ ಪಾಪ ಕರ್ಮಗಳು ಕಳೆದು ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top